ಮಂಗಳೂರು,ಮೇ.06 : ಸಂಸದರ ಕ್ಷೇತ್ರಾಭಿವೃದ್ಧಿ ನಿಧಿ ವಿನಿಯೋಗದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲು ಅವರು ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದಾರೆ.
2014-15ನೇ ಸಾಲಿನಲ್ಲಿ 5 ಕೋ.ರೂ. ಕಾಮಗಾರಿ ಹಂಚಿಕೆಯಾಗಿದ್ದು ಇದರಲ್ಲಿ 3.41 ಕೋ.ರೂ. ಬಿಡುಗಡೆಯಾಗಿದೆ. ವಿಶೇಷವೆಂದರೆ ಅನುದಾನ ಹಂಚಿಕೆಯಲ್ಲಿ ಮೊದಲೆರಡು ಸ್ಥಾನಗಳನ್ನು ಕರ್ನಾಟಕವೇ ಪಡೆದುಕೊಂಡಿದೆ. ಮೊದಲ ಸ್ಥಾನದಲ್ಲಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಎರಡನೆ ಸ್ಥಾನದಲ್ಲಿ ಪ್ರತಾಪ್ ಸಿಂಹ ನಾಯಕ್ ಇದ್ದಾರೆ.
2ನೇ ಹಂತವಾಗಿ 2015-16ನೇ ಸಾಲಿನ ಅನುದಾನ 5 ಕೋ.ರೂ. ಮಂಜೂರು ಆಗಿದೆ. ಕ್ಷೇತ್ರಾಭಿವೃದ್ಧಿ ನಿಧಿಯನ್ನು ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ಕುಡಿಯುವ ನೀರು , ಶಾಲೆ ಸೇರಿದಂತೆ ಮೂಲಸೌಲಭ್ಯಗಳ ಅಭಿವೃದ್ಧಿಗೆ ಕಾರ್ಯಕರ್ತರು, ಕ್ಷೇತ್ರದ ಜನತೆ ಸಲ್ಲಿಸಿರುವ ಬೇಡಿಕೆಯ ಆಧಾರದಲ್ಲಿ ವಿನಿಯೋಗಿಸಲಾಗಿದೆ. ನಿಧಿ ವಿನಿಯೋಗದ ಯಶಸ್ಸಿಗೆ ಸಹಕರಿಸಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ನಳಿನ್ ಕುಮಾರ್ ಕಟೀಲ್ ಅಭಿನಂದನೆ ಸಲ್ಲಿಸಿದ್ದಾರೆ.