ಕನ್ನಡ ವಾರ್ತೆಗಳು

ಬಜ್ಪೆ ನಿವಾಸಿಗಳಿಗೆ ನೀರಿನ ಹೊಸ ಪೈಪ್‌ಲೈನ್ ಕಾಮಗಾರಿ ಶೀಘ್ರ ಆರಂಭದುವುದಾಗಿ ಶಾಸಕ ಮೊಯಿದಿನ್ ಬಾವ ಭರವಸೆ.

Pinterest LinkedIn Tumblr

Bajpe_water_prblm

ಮಂಗಳೂರು.ಮೇ.09:  ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಮ್ಮ ಭೂಮಿಯನ್ನು ನೀಡಿ ಸೌಹಾರ್ದನಗರ ಪುನರ್ವಸತಿ ಕಾಲನಿಯಲ್ಲಿ ನೆಲೆ ಕಂಡಿರುವ ಇಲ್ಲಿನ ನಿವಾಸಿಗಳು ಬಗೆ ಹರಿಯದ ತಮ್ಮ ನೀರಿನ ಸಮಸ್ಯೆಯಿಂದ ರೊಚ್ಚಿಗೆದ್ದು ಸುರತ್ಕಲ್ ಉತ್ತರ ವಿಧಾನಸಭಾ ಶಾಸಕರ ಮನೆಗೆ ಮುತ್ತಿಗೆ ಹಾಕಿದ ಘಟನೆ ಶುಕ್ರವಾರ ಸಂಭವಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಮೊಯಿದಿನ್ ಬಾವಾ ಅವರು 16 ವರ್ಷಗಳ ಹಿಂದೆ ಅಳವಡಿಸಲಾಗಿದ್ದ ಪೈಪ್‍ಲೈನನ್ನು ತೆರವು ಗೊಳಿಸಿ ಹೊಸ ಪೈಪ್ ಜೋಡಣೆಯ ಕಾಮಗಾರಿಯನ್ನು ಶೀಘ್ರದಲ್ಲೇ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ.

ಕ್ಷೇತ್ರದ ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸಿದ್ದೇನೆ. ಹತ್ತು ವರ್ಷ ಗಳಲ್ಲಿ ಮಾಡಲು ಸಾಧ್ಯವಾಗದ ಕೆಲಸವನ್ನು ಎರಡು ವರ್ಷಗಳಲ್ಲಿ ಮಾಡಿದ್ದೇನೆ. ಪ್ರಸ್ತುತ ಸೌಹಾರ್ದ ನಗರ ಕಾಲನಿಯ ಸಮಸ್ಯೆಗಳು ತನ್ನ ಗಮನಕ್ಕೆ ಬಂದಿರಲಿಲ್ಲ. ಸಂತ್ರಸ್ತರ ಮನವಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಕಂದಾವರ ಗ್ರಾ. ಪಂ. ಪಿಡಿಓ ರೋಹಿಣಿಯ ವರನ್ನು ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡ ಶಾಸಕರು 16 ವರ್ಷಗಳ ಹಿಂದೆ ಅಳವಡಿಸ ಲಾಗಿದ್ದ ನೀರು ಸರಬರಾಜಾಗುವ ಪೈಪ್‍ಲೈನ್‍ಗಳನ್ನು ತೆರವುಗೊಳಿಸಿ ನೂತನ ಪೈಪ್‍ಲೈನ್ ಜೋಡಣೆ ಕಾರ್ಯ ಇಂದಿನಿಂದಲೇ ಆರಂಭಿಸುವಂತೆ ಸೂಚನೆ ನೀಡಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮೊೈದಿನ್ ಬಾವ, ಪ್ರಸ್ತುತ ಕಾಲನಿ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ನೀರಿನ ಸಮಸ್ಯೆ ಮುಖ್ಯವಾಗಿದ್ದು ಈ ಕಾರಣದಿಂದ ಆದ್ಯತೆ ಮೇರೆಗೆ ನೀರಿನ ಸಮಸ್ಯೆಗೆ ಪರಿಹಾರ ನೀಡುವುದಲ್ಲದೆ ಮುಂದೆ ರಸ್ತೆ, ಬಸ್ ಸಂಚಾರ ವ್ಯವಸ್ಥೆ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಗುರುಪುರ ಕೈಕಂಬದಿಂದ ಸೌಹಾರ್ದನಗರ ಮೂಲಕ ಕಾಟಿಪಳ್ಳ ಕೈಕಂಬ ಸೇರುವ ಬಸ್ ಸಂಚಾರ ಪರವಾನಿಗೆ ಇದ್ದು ಅದನ್ನು ಅನುಷ್ಟಾನಕ್ಕೆ ತಂದು ಬಸ್ ಸಂಚಾರವನ್ನು ಆರಂಭಿಸುವುದಾಗಿ ಶಾಸಕರು ಭರವಸೆ ನೀಡಿದರು.

Write A Comment