ಕನ್ನಡ ವಾರ್ತೆಗಳು

ಶಾಸಕ . ಜೆ  ಆರ್. ಲೋಬೊ ನೇತೃತ್ವದಲ್ಲಿ ‘ಜನ ಸಂಪರ್ಕ ಸಭೆ’

Pinterest LinkedIn Tumblr

JRlobo_visit_bajal_1

ಮಂಗಳೂರು,ಮೇ.12 : ಶಾಸಕರದ ಜೆ. ಆರ್. ಲೋಬೊ ಅವರ ಆಧ್ಯಕ್ಷತೆಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ 53ನೇ ಬಜಾಲ್ ವಾರ್ಡು ಇದರ ‘ಜನ ಸಂಪರ್ಕ ಸಭೆ’ ಮಂಗಳವಾರ ಬಜಾಲ್-ಪಡ್ಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ‘ಜನ ಸಂಪರ್ಕ ಸಭೆ’ ಮೂಲಕ ಜನರ ಬಳಿ ಹೋಗುವ ಈ ವಿನೂತನ ಪ್ರಯತ್ನದಲ್ಲಿ, ನೂರಾರು ಸ್ಥಳಿಯ ನಾಗರಿಕರು ಹಾಜರಿದ್ದರು. ಶಾಸಕ ಜೆ. ಆರ್. ಲೋಬೊ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ, ಸರಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ, ಶಾಸಕರು ಖದ್ದಾಗಿ ಜನರ ಅಹವಾಲುಗಳನ್ನು ಅಲಿಸಿ, ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿ ಪರಿಹಾರ ನೀಡಿದರು. ಇದಲ್ಲದೆ, ಅಸಮರ್ಪಕ ಕಸ ವಿಲೇವಾರಿ, ಒಳರಸ್ತೆ ಅಭಿವೃದ್ಧಿ, ನೀರು, ಒಳಚರಂಡಿ ಮುಂತಾದ ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮ ಕ್ಯೆಗೊಳ್ಳುವ ಆಶ್ವಾಸನೆ ನೀಡಿದರು. ಬಳಿಕ ಮಾತನಾಡಿದ ಶಾಸಕರು, ಬಜಾಲಿಲ್ಲಿ ಪ್ರೌಢ ಶಾಲೆ ಮತ್ತು ಪ್ರಥಮ ದರ್ಜೆ ಕಾಲೇಜ್ ನಿರ್ಮಿಸುವ ಇಲ್ಲಿನ ಜನರ ಬೇಡಿಕೆಯನ್ನು ಈಗಾಗಲೇ ಸರಕಾರದ ಗಮನಕ್ಕೆ ತಂದಿರುತ್ತೇನೆ, ಎಂದು ಹೇಳಿದರು.

JRlobo_visit_bajal_9 JRlobo_visit_bajal_2 JRlobo_visit_bajal_3 JRlobo_visit_bajal_4 JRlobo_visit_bajal_5 JRlobo_visit_bajal_6 JRlobo_visit_bajal_7 JRlobo_visit_bajal_8

ಈ ಕಾರ್ಯಕ್ರಮದಲ್ಲಿ, ಸಹಾಯಕ ಜಿಲ್ಲಾಧಿಕಾರಿ ಸದಾಶೀವ ಪ್ರಭು, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರು, ಪಾಲಿಕೆಯ ಪ್ರಮುಖ ಆಧಿಕಾರಿಗಳು, ಆರೋಗ್ಯ, ಕಂದಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ, ಸಾರಿಗೆ, ಕಾರ್ಮಿಕ, ಆಹಾರ ಮತ್ತು ನಾಗರಿಕ ಸೇವಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಸ್ಥಳಿಯ ಕಾರ್ಪರೇಟರ್ ಸುನಾಯ ಅಶ್ರಫ್, ವಾರ್ಡ್ ಅಧ್ಯಕ್ಷ ಭರತೇಶ್ ಆಮೀನ್, ಸ್ಥಳಿಯರಾದ ಆಬುಬಕ್ಕರ್, ಆಶ್ರಫ್ ಬಜಾಲ್, ಫಕ್ರದ್ದೀನ್, ಟಿ. ಕೆ. ಸುಧೀರ್, ರಾಮನಂದ್ ಪೂಜಾರಿ ಮತ್ತಿತ್ತರು ಉಪಸ್ಥಿತರಿದ್ದರು.

Write A Comment