ಕನ್ನಡ ವಾರ್ತೆಗಳು

ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ದೃಶ್ಯಕಲೆಯಲ್ಲಿ (ಬಿ.ವಿ.ಎ.) ಪದವಿ ಹಾಗೂ ಉದ್ಯೋಗದ ಅವಕಾಶ

Pinterest LinkedIn Tumblr

mudabedre_art_photo_1

ಮಂಗಳೂರು,ಮೇ.21: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿರುವ ಆಳ್ವಾಸ್ ಸಂಸ್ಥೆಯು ನಮ್ಮ ನಾಡಿನ ಕಲಾ ಪರಂಪರೆಗೆ ಉತ್ತೇಜನ ನೀಡುವಲ್ಲಿ ಬಹಳ ಪ್ರಾಮಾಣಿಕವಾದ ಕೆಲಸವನ್ನು ನಿರ್ವಹಿಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಪ್ರತಿಯೊಂದು ಕಲೆಯನ್ನು ಒಗ್ಗೂಡಿಸುವ ಜೊತೆಜೊತೆಗೆ ಚಿತ್ರಕಲೆಗೂ ಪ್ರಾಧಾನ್ಯತೆ ನೀಡಿರುವುದು ಗಮನಾರ್ಹ. ಚಿತ್ರಕಲೆಗೆ ಸಂಬಂದಪಟ್ಟಂತೆ ಪ್ರತಿ ವರ್ಷ ಚಿತ್ರಸಿರಿ, ಶಿಲ್ಪಸಿರಿ, ವರ್ಣವಿರಾಸತ್, ಶಿಲ್ಪವಿರಾಸತ್ ಹೀಗೆ ಹತ್ತು ಹಲವು ಶಿಬಿರಗಳನ್ನು ಏರ್ಪಡಿಸಿ ಡಾ. ಎಂ. ಮೋಹನ್ ಆಳ್ವರವರು ದೃಶ್ಯ ಕಲೆಗೆ ಬಹಳ ಪ್ರಮುಖವಾದ ಸ್ಥಾನವನ್ನು ನೀಡುವುದರ ಜೊತೆಗೆ ಪ್ರಪಂಚದ ಬೇರೆ ಬೇರೆ ಪ್ರದೇಶಗಳಿಂದ ಹೆಸರಾಂತ ಚಿತ್ರಕಲಾವಿದರನ್ನು ಆಳ್ವಾಸ್ ಸಂಸ್ಥೆಗೆ ಆಹ್ವಾನಿಸಿ ಗೌರವಿಸುವಲ್ಲಿ ಯಶಸ್ವಿಯಾಗಿದ್ದಾರೆ ಹಾಗೂ ಚಿತ್ರಕಲೆಯಲ್ಲಿ ಆಸಕ್ತಿಯಿರುವ ವಿದ್ಯಾಥಿಗಳಿಗೆ ಚಿತ್ರಕಲೆಯಲ್ಲಿಯೇ ಪದವಿ ಪಡೆದು ಅದೇ ಕ್ಷೇತ್ರದಲ್ಲಿ ಉನ್ನತ ಸಾಧನೆಯನ್ನು ಮಾಡಲು ಮಂಗಳೂರು ವಿಶ್ವವಿದ್ಯಾನಿಲಯದ ಅಡಿಯಲ್ಲಿ ಪ್ರಪ್ರಥಮವಾಗಿ ಬಿ.ವಿ.ಎ .(ಬ್ಯಾಚುಲರ್ ಆಪ್ ವಿಸುವಲ್ ಆರ್ಟ್) ಪದವಿಯನ್ನು ಪ್ರಾರಂಭಿಸಿದ ಹೆಗ್ಗಳಿಕೆ ಆಳ್ವಾಸ್ ಸಂಸ್ಥೆಯದ್ದಾಗಿದೆ.

mudabedre_art_photo_2 mudabedre_art_photo_3 mudabedre_art_photo_4

ಚಿತ್ರಕಲೆಯಲ್ಲಿ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ದೇಶ-ವಿದೇಶಗಳಲ್ಲಿ ಬಹಳಷ್ಟು ಬೇಡಿಕೆ ಇದ್ದು, ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳೂ ಕೂಡ ಹೆಚ್ಚುತ್ತಿವೆ. ಜಾಹೀರಾತು ಹಾಗೂ ವಿವಿಧ ಸಾಪ್ಟ್‌ವೇರ್ ಕಂಪನಿಗಳಲ್ಲಿ ವೆಬ್‌ಡಿಸೈನರ್, ಗ್ರಾಫಿಕ್‌ಡಿಸೈನರ್, ಅನಿಮೇಟರ್, ಆರ್ಟ್‌ಡೈರೆಕ್ಟರ್, ವಿಸುವಲೈಸರ್, ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಲು ಅವಕಾಶಗಳಿವೆ ಹಾಗೂ ಚಿತ್ರಕಲಾವಿದರಾಗಿ ಮತ್ತು ಶಿಲ್ಪಕಲಾವಿದರಾಗಿಯೂ ಸ್ವ-ಉದ್ಯೋಗವನ್ನೂ ಕೂಡ ಮಾಡಬಹುದಾಗಿದೆ. ಚಿತ್ರಕಲಾ ಪದವಿ ಮುಗಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಆಳ್ವಾಸ್ ಸಂಸ್ಥೆ ಆಯೋಜಿಸುವ ಉದ್ಯೋಗ ಮೇಳದಲ್ಲಿ ಉದ್ಯೋಗದ ಅವಕಾಶಗಳು ಲಭ್ಯವಿರುತ್ತದೆ.

ಈಗಾಗಲೇ ಈ ಪದವಿಗೆ ಶ್ರೀಲಂಕಾ, ಮಣಿಪುರ, ಕೇರಳ ಹಾಗೂ ಕರ್ನಾಟಕದಿಂದ ಬಂದಿರುವ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬಿ.ವಿ.ಎ. ಪದವಿಯಲ್ಲಿ ಪೈಂಟಿಂಗ್, ಅಪ್ಲೈಡ್‌ಆರ್ಟ್ (ವಾಣಿಜ್ಯಕಲೆ), ಸ್ಕಲ್ಪಚರ್(ಶಿಲ್ಪಕಲೆ) ಹೀಗೆ ಮೂರು ವಿಭಾಗಗಳಿದ್ದು ವಿದ್ಯಾರ್ಥಿಗಳು ಯಾವುದಾದರೂ ಒಂದು ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಪಿಯುಸಿ ಪಾಸಾಗಿರುವ ವಿದ್ಯಾರ್ಥಿಗಳು ಈ ಪದವಿಗೆ ಪ್ರವೇಶ ಪಡೆಯಬಹುದಾಗಿದೆ.

Write A Comment