ಮುಂಬಯಿ : ನಗರದ ಜಾಯಿರಾತು ಸಂಸ್ಥೆಯೊಂದರ ಮಾಲಕ, ಕುಲಾಲ ಸಂಘ ಸಿ ಎಸ್ ಟಿ – ಮುಲುಂಡ್ ಸ್ಥಳೀಯ ಸಮಿತಿಯ ಕಾರ್ಯಧ್ಯಕ್ಷ ಸುಂದರ ಕರ್ಮರನ್ (75) ಮೇ 20 ರಂದು ತಡರಾತ್ರಿ ನಿಧನ ಹೊಂದಿದರು.
ಮೂಲತ: ಮೂಡಬಿದ್ರೆ ಸಮೀಪದ ಹಂಡೇಲ್ ನವರಾದ ಇವರು ಎಳೆ ವಯಸ್ಸಲ್ಲಿ ಮುಂಬಯಿಗಾಗಮಿಸಿ ಶಿಕ್ಷಣದೊಂದಿಗೆ ಕರ್ಮರ್ಶಿಯಲ್ ಆರ್ಟಿಸ್ಟ್ ತರಬೇತಿ ಪಡೆದರು.ಇವರ ಅತ್ಯುನ್ನತ ಮಟ್ಟದ ಜಾಹೀರಾತು ವಿನ್ಯಾಸಗಳು, ಛಾಯಾಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿರುವರು.
ಸುಂದರ ಕರ್ಮರನ್ ಅವರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಕುಲಾಲ ಸಂಘ ಮುಂಬಯಿ ಗೌ. ಅಧ್ಯಕ್ಷ ಪಿ. ಕೆ. ಸಾಲ್ಯಾನ್, ಅಧ್ಯಕ್ಷ ಗಿರೀಶ್ ಸಾಲ್ಯಾನ್ ಹಾಗೂ ಇತರ ಪದಾಧಿಕಾರಿಗಳು ಸದಸ್ಯರುಗಳು ಸ್ಥಳೀಯ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಇವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.