ನವದೆಹಲಿ,ಮೇ.22 : ದೇಶದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಸರ್ಕಾರ ಶೀಘ್ರವೇ ಉಚಿತ ವೈ ಫೈ ಸೇವೆ ಆರಂಭಿಸಲಾಗುವುದು ಎಂದು ಟೆಲಿಕಾಂ ಸಚಿವ ರವಿ ಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಈಗಾಗಲೇ ವಾರಣಾಸಿ ಘಾಟ್ ನಲಿ ಪ್ರವಾಸಿಗರಿಗೆ ಉಚಿತ ವೈಫೈ ಸೇವೆ ಆರಂಭಿಸಿದ್ದು, ತಾಜ್ ಮಹಲ್, ಸರ್ನಾಥ್, ಬೋದ ಗಯಾಗಳಲ್ಲೂ ಶೀಘ್ರವೇ ವೈ ಫೈ ಸೌಲಭ್ಯ ಒದಗಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದರು. ಜೊತೆಗೆ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲು ಇ ವೀಸಾ ಸೌಲಭ್ಯ ಕೂಡ ಆರಂಭಿಸಿದೆ ಎಂದು ರವಿ ಶಂಕರ್ ಪ್ರಸಾದ್ ತಿಳಿಸಿದರು. ಸಣ್ಣ ಸಣ್ಣ ಪಟ್ಟಣಗಳಲ್ಲಿ ಮಾಹಿತಿ ತಂತ್ರಜ್ಞಾನದ ಕ್ರಾಂತಿ ಮಾಡಲು ಕಾಲ್ ಸೆಂಟರ್ ಮತ್ತು ಬಿಪಿಒ ಸೆಂಟರ್ ಗಳನ್ನು ಪ್ರಾರಂಭಿಸಲಿದ್ದು, ಮೊದಲ ಹಂತದಲ್ಲಿ 48 ಸಾವಿರ ಉದ್ಯೋಗ ಕಲ್ಪಿಸಲಾಗುವುದು ಎಂದರು.