ಕನ್ನಡ ವಾರ್ತೆಗಳು

ಗುರುಪುರ ನದಿಯಲ್ಲಿ ಬೈಕ್ ಸಹಿತ ಸವಾರನ ಶವ ಪತ್ತೆ : ಅಪಘಾತ ಶಂಕೆ..?

Pinterest LinkedIn Tumblr

Marvoor_dead_body_1

ಮಂಗಳೂರು,ಜೂನ್.05: ಬಜ್ಪೆ ವಿಮಾನ ನಿಲ್ದಾಣ ರಸ್ತೆಯ ಮರವೂರು ಸೇತುವೆ ಕೆಳಗೆ ಗುರುಪುರ ನದಿಯಲ್ಲಿ ಬೈಕ್ ಸಹಿತ ವ್ಯಕ್ತಿಯೋರ್ವನ ಶವ ಪತ್ತೆಯಾಗಿದೆ. ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕವಾಗಿ ಬೈಕ್ ನಿಯಂತ್ರಣ ತಪ್ಪಿ ನದಿಗೆ ಬಿದ್ದು ಈತ ಮೃತ ಪಟ್ಟಿರ ಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

Marvoor_dead_body_2 Marvoor_dead_body_3 Marvoor_dead_body_4 Marvoor_dead_body_5 Marvoor_dead_body_6 Marvoor_dead_body_7 Marvoor_dead_body_8 Marvoor_dead_body_9 Marvoor_dead_body_10

ಈ ಘಟನೆ ಗುರುವಾರ ತಡ ರಾತ್ರಿ ಸಂಭವಿಸಿರ ಬಹುದು ಎಂದು ಶಂಕಿಸಲಾಗಿದೆ, ಇಂದು ಬೆಳಿಗ್ಗೆ ಬೈಕ್‌ ಸವಾರನ ಶವ ನದಿ ನೀರಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದನ್ನು ನೋಡಿದ ವ್ಯಕ್ತಿಗಳು ಪೊಲೀಸರಿಗೆ ಸುದ್ಧಿ ಮುಟ್ಟಿಸಿದ್ದಾರೆ.

ಈ ವ್ಯಕ್ತಿಯ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಪ್ರಕರಣದ ಕುರಿತ ಹೆಚ್ಚಿನ ಮಾಹಿತಿ ಇನ್ನಷ್ಟೇ ತನಿಖೆಯಿಂದ ತಿಳಿದುಬರಬೇಕಿದೆ. ಬಜ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment