ಕನ್ನಡ ವಾರ್ತೆಗಳು

ಹಿಂದೂ ಜೂನಿಯರ್‌ ಕಾಲೇಜು ಶಿರ್ವ ಹಳೆವಿದ್ಯಾರ್ಥಿ ಸಂಘ ಮುಂಬಯಿ ಸಮಿತಿಯ ಸಮಾವೇಶ

Pinterest LinkedIn Tumblr

mumbai_samvesh_1

ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್

ಮುಂಬಯಿ: ಹಿಂದೂ ಜೂನಿಯರ್‌ ಕಾಲೇಜು ಶಿರ್ವ ಹಳೆವಿದ್ಯಾರ್ಥಿ ಸಂಘ ಮುಂಬಯಿ ಕಳೆದ ಹತ್ತು ತಿಂಗಳ ಹಿಂದೆಯಷ್ಟೇ ಅನಿರೀಕ್ಷಿತವಾಗಿ ಹುಟ್ಟಿಕೊಂಡ ಸಂಘ ವಾಗಿದೆ. ಕಾಲೇಜಿನ ಪ್ರಾಂಶುಪಾಲ ಕೆ. ರಾಜಗೋಪಾಲ್‌ಅವರು ಸಂಸ್ಥೆಯ ಬಗ್ಗೆ ನಿವೃತ್ತಿ ಸಮಯದಲ್ಲಿ ತನ್ನ ಹೃದ ಯಾಳದಲ್ಲಿ ತುಂಬಿಕೊಂಡಿದ್ದ ಆಶಾ ಸೌಧದ ಕನಸು ಇಂದು ಅತ್ಯಲ್ಪ ಸಮ ಯದಲ್ಲೇ ನನಸಾಗಿ ಪರಿವರ್ತನೆ ಗೊಳ್ಳುತ್ತಿದೆ. ಸಂಸ್ಥೆಯ ಪ್ರೇರಣ ಶಕ್ತಿಯಾಗಿ ಕಾಲೇಜಿನ ಪ್ರಗತಿಗೆ ಕಾರಣಕರ್ತರಾಗಿರುವ ಅವರು ಸದಾ ಸ್ಮರಣೀಯರು ಎಂದು ಸಂಸ್ಥೆಯ ಹಳೆ ವಿದ್ಯಾರ್ಥಿ ಸಂಘ ಮುಂಬಯಿ ಅಧ್ಯಕ್ಷ ಕುತ್ಯಾರ್‌ ಕಿಶೋರ್‌ಕುಮಾರ್‌ ಶೆಟ್ಟಿ ನುಡಿದರು.

ಅವರು ಜೂ. 7ರಂದು ಅಂಧೇರಿ ಪೂರ್ವದ ಪೆನಿನ್ಸುಲಾ ಗ್ರಾಂಡ್‌ಹೊಟೇಲ್‌ನ ಸಭಾಗೃಹದಲ್ಲಿ ಜರಗಿದ ಮುಂಬಯಿ ಸಮಿತಿಯ ಸಮಾವೇಶ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

mumbai_samvesh_2
ವಿದ್ಯಾವರ್ಧಕ ಸಂಘ ಶಿರ್ವ ಇದರ ಕಾರ್ಯದರ್ಶಿ ಹಾಗೂ ನಮ್ಮ ಸಲಹಾ ಸಮಿತಿ ಸಂಚಾಲಕರಾಗಿರುವ ನಡಿಬೆಟ್ಟು ನಿತ್ಯಾನಂದ ಹೆಗ್ಡೆ ಅವರ ಚಿಂತನೆಗೆ ಪೂರಕವೆಂಬಂತೆ ಶಿರ್ವದ ನಮ್ಮ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಶೈಕ್ಷಣಿಕ ಪ್ರಗತಿ ಸಾಧಿಸುವುದೇ ನಮ್ಮ ಮುಖ್ಯ ಉದ್ದೇಶ ಎಂದು ಅಧ್ಯಕ್ಷ ಕಿಶೋರ್‌ಕುಮಾರ್‌ಶೆಟ್ಟಿ ನುಡಿದರು. ಭವಿಷ್ಯದಲ್ಲಿ ಶಿರ್ವದ ಶೈಕ್ಷಣಿಕ ಸಂಸ್ಥೆಗಳು ಒಂದಾಗಿ ಮುಂಬಯಿ ಬಂಟರ ಸಂಘದ ಶೈಕ್ಷಣಿಕ ಸಂಸ್ಥೆಗಳಂತೆ ಮಾದರಿ ಶಿಕ್ಷಣ ಸಂಸ್ಥೆಯಾಗಲೆಂದು ಅವರು ಹಾರೈಸಿದರು.

ಸಲಹಾ ಸಮಿತಿ ಸಂಚಾಲಕ ಮತ್ತು ಶಿರ್ವ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ನಡಿಬೆಟ್ಟು ನಿತ್ಯಾನಂದ ಹೆಗ್ಡೆ ಮಾತನಾಡಿ, ಹಿಂದೂ ಜೂನಿಯರ್‌ಜಾಲೇಜಿನ ಅಭಿವೃದ್ಧಿಗೆ ರಾಜಗೋಪಾಲ್‌ ಕಾರಣ ರಾದರೆ, ಎಂ. ಎಸ್‌. ಆರ್‌. ಎಸ್‌ಕಾಲೇಜಿನ ಅಭಿವೃದ್ಧಿಗೆ ಡಾ| ಶ್ರೀಧರ ಶೆಟ್ಟಿ ಅವರ ಕೊಡುಗೆ ಅಪಾರ ಎಂದು ಸ್ಮರಿಸಿದರು.

mumbai_samvesh_3

ಸಂಘಟನಾ ಕಾರ್ಯದರ್ಶಿ ಕುತ್ಯಾರ್‌ ಪ್ರಸಾದ್‌ ಶೆಟ್ಟಿ ಮಾತನಾಡಿದರು. ಹಿಂದೂ ಜೂನಿಯರ್‌ ಕಾಲೇಜಿನ ಅಧ್ಯಕ್ಷ ಸಚ್ಚಿದಾನಂದ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜಗೋಪಾಲ್‌ ಮಾರ್ಗದರ್ಶನ ದಂತೆ ಅವರ ಶಿಷ್ಯರಾದ ಕಿಶೋರ್‌ಕುಮಾರ್‌ ಕುತ್ಯಾರ್‌ ಹಾಗೂ ಖಾಂದೇಶ್‌ ಭಾಸ್ಕರ ಶೆಟ್ಟಿ ಅವರು ಹಳೆವಿದ್ಯಾರ್ಥಿ ವೃಂದ ಹಾಗೂ ಹಿತೈಷಿಗಳಿಂದ ಸಮಾರು 35 ಲ. ರೂ ಸಂಗ್ರಹಿಸಿ ಉತ್ತಮ ಸಭಾಂಗಣ, ವಿದ್ಯಾನಿಧಿ ಯೋಜನೆ, ಶೌಚಾಲಯ, ಕ್ರಿಕೆಟ್‌ಮೈದಾನ ಹಾಗೂ ಹಾರ್ಡ್‌ಬಾಲ್‌ ಮೈದಾನದ ಸೌಕರ್ಯ ನೀಡಿರುವುದನ್ನು ಶ್ಲಾಘಿಸಿ ಹಳೆ ವಿದ್ಯಾರ್ಥಿಗಳ ಒಂದು ವರ್ಷದ ಸಾಧನೆಯನ್ನು ವಿಶ್ಲೇಷಿಸಿದರು. ಸುಮಾರು 60 ಸಾವಿರ ರೂ. ವೆಚ್ಚದಲ್ಲಿ ಶಿರ್ವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ವಿದ್ಯಾರ್ಥಿಗಳ ದತ್ತು ಸ್ವೀಕಾರ ಕಾರ್ಯಕ್ರಮವು ಜೂ. 15ರಂದು ಶಿರ್ವ ಕಾಲೇಜಿನಲ್ಲಿ ನಡೆಯಲಿರುವುದಾಗಿ ಅವರು ತಿಳಿಸಿದರು.

ಕಾಲೇಜಿನ ಕೋಶಾಧಿಕಾರಿ ಸದಾನಂದ ಶಿರ್ವ ಅವರು ಆಯವ್ಯಯ ಲೆಕ್ಕಪತ್ರಗಳನ್ನು ಮಂಡಿಸಿದರು.ಖಾಂದೇಶ್‌ ಭಾಸ್ಕರ್‌ಶೆಟ್ಟಿ ಸ್ವಾಗತಿಸಿ ದರು. ರಮಾನಂದ ದಾನಿಗಳ ಹೆಸರನ್ನು ವಾಚಿಸಿದರು. ಕಾವ್ಯಾ ಹಾಗೂ ಅಮಿತ ಅವರ ಪ್ರಾರ್ಥನೆಯೊಂದಿಗೆ ಕುತ್ಯಾರ್‌ ಕಿಶೋರ್‌ಕುಮಾರ್‌ ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಾಬಾ ಪ್ರಸಾದ್‌ ಅರಸ್‌ ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿ ಕುತ್ಯಾರ್‌ ಪ್ರಸಾದ್‌ ಶೆಟ್ಟಿ, ಸದಾನಂದ ಶಿರ್ವ, ರಮಾನಂದ್‌, ಜಗದೀಶ್‌ ಅರಸ್‌ ಉಪಸ್ಥಿತರಿದ್ದರು. ಹೇಮನಾಥ ಶೆಟ್ಟಿ ಸೂಡ ವಂದಿಸಿದರು.
ನಿವೃತ್ತ ಪ್ರಾಂಶುಪಾಲ ಕೆ. ರಾಜಗೋಪಾಲ್‌ಅವರನ್ನು ಹಳೆವಿದ್ಯಾರ್ಥಿಗಳು ಶಾಲು ಹೊದೆಸಿ, ಸ್ಮರಣಿಕೆ, ಸಮ್ಮಾನ ಪತ್ರ, ಪುಷ್ಪಗುತ್ಛವಿತ್ತು ಸಮ್ಮಾನಿಸಿದರು. ಹರಿಣಿ ಎಂ. ಶೆಟ್ಟಿ ಅವರು ಸಮ್ಮಾನ ಪತ್ರವನ್ನು ವಾಚಿಸಿದರು.

ಸಮ್ಮಾನಕ್ಕೆ ಉತ್ತರಿಸಿದ ಕೆ. ರಾಜಗೋಪಾಲ್‌ಅವರು, ಮುಂಬಯಿಗೆ ಬರುವ ಎರಡನೇ ಅವಕಾಶ ಲಭಿಸಿದೆ. ಮೊದಲ ಬಾರಿ ಬೇಡಿಕೆಗಳನ್ನು ಮುಂದಿಟ್ಟು ಬಂದಿದ್ದೆ. ಆದರೆ, ಈ ಬಾರಿ ಬೇಡಿಕೆಗಳ ಈಡೇರಿಕೆಗಾಗಿ ಕೃತಜ್ಞತೆ ಅರ್ಪಿಸಲು ಬಂದಿರುವೆ. ಹಳೆ ವಿದ್ಯಾರ್ಥಿಗಳ ಪ್ರೀತಿ ವಿಶ್ವಾಸಕ್ಕಾಗಿ ಚಿರಋಣಿಯಾಗಿರುವೆ. ಮುಂದೆಯೂ ನೀವು ಶೈಕ್ಷಣಿಕ ಸೇವೆಯಲ್ಲಿ ತೊಡಗಿ ತೃಪ್ತಿ ಕಂಡುಕೊಳಿ ಎಂದು ಹಳೆವಿದ್ಯಾರ್ಥಿಗಳಿಗೆ ಕಿವಿಮಾತು ನೀಡಿದರು. ಶಿರ್ವದಲ್ಲಿ ನೆಲೆಸಿದ ನನಗೆ ಸುಮಾರು 39 ವರ್ಷಗಳಲ್ಲಿ ಚಿರಸ್ಮರಣೀಯ ಸಮ್ಮಾನವನ್ನು ಮಾಡಿರುವುದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.

Write A Comment