ಮಂಗಳೂರು :ಮಂಗಳೂರಿನ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ ಎಕ್ಸ್‌ಪರ್ಟ್ ಕೋಚಿಂಗ್ ಕ್ಲಾಸಸ್ ಮತ್ತು ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು 2014-15ನೇ ಶೈಕ್ಷಣಿಕ ಸಾಲಿನ ಪಿಯುಸಿ ಫಲಿತಾಂಶದಲ್ಲಿ ಮತ್ತು ಸಿಇಟಿಯಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ.
ಎಂಜಿನಿಯರಿಂಗ್, ಮೆಡಿಕಲ್, ಐಎಸ್‌ಎಂಎಚ್, ಪಶುವೈದ್ಯಕೀಯ, ಕೃಷಿ ವಿಜ್ಞಾನ ಹೀಗೆ ಐದು ವಿಭಾಗದ ಸಿಇಟಿ ಪರೀಕ್ಷೆಯಲ್ಲಿ ಮೊದಲ ಐವತ್ತು ರ್‍ಯಾಂಕ್‌ಗಳಲ್ಲಿ 41 ರ್‍ಯಾಂಕ್‌ಗಳನ್ನು ಪ್ರತಿಷ್ಠಿತ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು ಮತ್ತು ಎಕ್ಸ್‌ಪರ್ಟ್ ಕೋಚಿಂಗ್ ಕ್ಲಾಸಸ್‌ನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ ಎಂದು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ|| ನರೇಂದ್ರ ಎಲ್.ನಾಯಕ್ ತಿಳಿಸಿದರು.
ಕಾಲೇಜಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಎಕ್ಸ್‌ಪರ್ಟ್ ಕೋಚಿಂಗ್ ಕ್ಲಾಸಸ್‌ನ ಮಾನಸ ಎಲ್. ಮೆಡಿಕಲ್‌ನಲ್ಲಿ ೨ ನೇ ರ್‍ಯಾಂಕ್, ಐಎಸ್‌ಎಂಎಚ್‌ನಲ್ಲಿ ೧ನೇ ರ್‍ಯಾಂಕ್, ಕಿಶೋರ್ ಎಂ.ಎಸ್. ಮೆಡಿಕಲ್‌ನಲ್ಲಿ ೬ನೇ ರ್‍ಯಾಂಕ್, ಐಎಸ್‌ಎಂಎಚ್‌ನಲ್ಲಿ ೭ನೇ ರ್‍ಯಾಂಕ್, ಸುದೀಪ್ ಜಿ.ಸಿ ಮೆಡಿಕಲ್‌ನಲ್ಲಿ ೮ನೇ ರ್‍ಯಾಂಕ್, ಐಎಸ್‌ಎಂಎಚ್‌ನಲ್ಲಿ ೬ನೇ ರ್‍ಯಾಂಕ್, ಪುನೀತ್ ವಿ.ಭಟ್ ಮೆಡಿಕಲ್‌ನಲ್ಲಿ ೯ನೇ ರ್‍ಯಾಂಕ್, ಅಪೂರ್ವ ಎಸ್.ನಾಯಕ್ ಮೆಡಿಕಲ್‌ನಲ್ಲಿ ೩೨ನೇ ರ್‍ಯಾಂಕ್, ಐಎಸ್‌ಎಂಎಚ್‌ನಲ್ಲಿ ೧೪ನೇ ರ್‍ಯಾಂಕ್, ಚಿನ್ಮಯ್ ಎಂಜಿನಿಯರಿಂಗ್‌ನಲ್ಲಿ ೧೧ನೇ ರ್‍ಯಾಂಕ್ ಮತ್ತು ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ನೀರಜ್ ಕುಮಾರ್ ಕೆ.ಎಸ್ ಮೆಡಿಕಲ್‌ನಲ್ಲಿ ೧೩ನೇ ರ್‍ಯಾಂಕ್, ಐಎಸ್‌ಎಂಎಚ್‌ನಲ್ಲಿ ೨೭ನೇ ರ್‍ಯಾಂಕ್, ಪಶುವೈದ್ಯಕೀಯ ವಿಭಾಗದಲ್ಲಿ ೧೩ನೇ ರ್‍ಯಾಂಕ್, ವಿಖ್ಯಾತ್ ಡಿ ಪ್ರಸಾದ್ ಮೆಡಿಕಲ್‌ನಲ್ಲಿ ೨೧ನೇ ರ್‍ಯಾಂಕ್, ಐಎಸ್‌ಎಂಎಚ್‌ನಲ್ಲಿ ೧೫ನೇ ರ್‍ಯಾಂಕ್, ಕೃಷಿ ವಿಜ್ಞಾನ ೧೮ನೇ ರ್‍ಯಾಂಕ್, ಪಶುವೈದ್ಯಕೀಯ ವಿಭಾಗದಲ್ಲಿ ೨೧ನೇ ರ್‍ಯಾಂಕ್, ನಿಶಾಂತ್ ಭಟ್ ಕೆ. ಮೆಡಿಕಲ್‌ನಲ್ಲಿ ೩೧ನೇ ರ್‍ಯಾಂಕ್, ಐಎಸ್‌ಎಂಎಚ್‌ನಲ್ಲಿ ೪೨ನೇ ರ್‍ಯಾಂಕ್, ಕೃಷಿ ವಿಜ್ಞಾನದಲ್ಲಿ ೪೪ನೇ ರ್‍ಯಾಂಕ್, ಪಶುವೈದ್ಯಕೀಯ ವಿಭಾಗದಲ್ಲಿ ೩೧ನೇ ರ್‍ಯಾಂಕ್, ಅಭಿನ್ ರೈ ಕೆ.ಎಸ್ ಮೆಡಿಕಲ್‌ನಲ್ಲಿ ೩೩ನೇ ರ್‍ಯಾಂಕ್, ಎಂಜಿನಿಯರಿಂಗ್‌ನಲ್ಲಿ ೫೭ನೇ ರ್‍ಯಾಂಕ್, ಐಎಸ್‌ಎಂಎಚ್‌ನಲ್ಲಿ ೧೭ನೇ ರ್‍ಯಾಂಕ್, ಕೃಷಿ ವಿಜ್ಞಾನದಲ್ಲಿ ೭ನೇ ರ್‍ಯಾಂಕ್, ಪಶುವೈದ್ಯಕೀಯ ವಿಭಾಗದಲ್ಲಿ ೩೩ನೇ ರ್‍ಯಾಂಕ್, ಮೇಘಾ ಎ.ಸಿ ಮೆಡಿಕಲ್‌ನಲ್ಲಿ ೩೪ನೇ ರ್‍ಯಾಂಕ್, ಐಎಸ್‌ಎಂಎಚ್‌ನಲ್ಲಿ ೩೧ನೇ ರ್‍ಯಾಂಕ್, ಪಶುವೈದ್ಯಕೀಯ ವಿಭಾಗದಲ್ಲಿ ೩೪ನೇ ರ್‍ಯಾಂಕ್, ದಿಶಾ ಎಸ್ ಮೆಡಿಕಲ್‌ನಲ್ಲಿ ೩೫ನೇ ರ್‍ಯಾಂಕ್, ಎಂಜಿನಿಯರಿಂಗ್‌ನಲ್ಲಿ ೧೬ನೇ ರ್‍ಯಾಂಕ್, ಐಎಸ್‌ಎಂಎಚ್‌ನಲ್ಲಿ ೧೦ನೇ ರ್‍ಯಾಂಕ್, ಕೃಷಿ ವಿಜ್ಞಾನದಲ್ಲಿ ೪ನೇ ರ್‍ಯಾಂಕ್, ಪಶುವೈದ್ಯಕೀಯ ವಿಭಾಗದಲ್ಲಿ ೩೧ನೇ ರ್‍ಯಾಂಕ್, ಅನುಷಾ ಜಿ.ಸಜ್ಜನ್ ಮೆಡಿಕಲ್‌ನಲ್ಲಿ ೩೮ನೇ ರ್‍ಯಾಂಕ್, ಐಎಸ್‌ಎಂಎಚ್‌ನಲ್ಲಿ ೨೦ನೇ ರ್‍ಯಾಂಕ್, ಕೃಷಿ ವಿಜ್ಞಾನದಲ್ಲಿ ೧೩ನೇ ರ್‍ಯಾಂಕ್, ಪಶುವೈದ್ಯಕೀಯ ವಿಭಾಗದಲ್ಲಿ ೩೮ನೇ ರ್‍ಯಾಂಕ್, ಗಿರೀಶ್ ಆರ್. ಭಾಗವತ್ ಮೆಡಿಕಲ್‌ನಲ್ಲಿ ೪೦ನೇ ರ್‍ಯಾಂಕ್, ಐಎಸ್‌ಎಂಎಚ್‌ನಲ್ಲಿ ೩೬ನೇ ರ್‍ಯಾಂಕ್, ಕೃಷಿ ವಿಜ್ಞಾನದಲ್ಲಿ ೧೪ನೇ ರ್‍ಯಾಂಕ್, ಪಶುವೈದ್ಯಕೀಯ ವಿಭಾಗದಲ್ಲಿ ೪೦ನೇ ರ್‍ಯಾಂಕ್, ದೀಪಾಲಿ ಜೆ.ಶೆಟ್ಟಿ ಮೆಡಿಕಲ್‌ನಲ್ಲಿ ೪೭ನೇ ರ್‍ಯಾಂಕ್, ಐಎಸ್‌ಎಂಎಚ್‌ನಲ್ಲಿ ೪೬ನೇ ರ್‍ಯಾಂಕ್, ಕೃಷಿ ವಿಜ್ಞಾನದಲ್ಲಿ ೨೦ನೇ ರ್‍ಯಾಂಕ್, ಪಶುವೈದ್ಯಕೀಯ ವಿಭಾಗದಲ್ಲಿ ೪೭ನೇ ರ್‍ಯಾಂಕ್, ಶೇಷಾ ಶೈಲೇಶ್ ಬಸವರಾಜ್ ಮೆಡಿಕಲ್‌ನಲ್ಲಿ ೪೮ನೇ ರ್‍ಯಾಂಕ್, ಪಶುವೈದ್ಯಕೀಯ ವಿಭಾಗದಲ್ಲಿ ೪೮ನೇ ರ್‍ಯಾಂಕ್, ಸುಖಿತ್ ಟಿ ಆರ್ ಮೆಡಿಕಲ್‌ನಲ್ಲಿ ೪೯ನೇ ರ್‍ಯಾಂಕ್, ಪಶುವೈದ್ಯಕೀಯ ವಿಭಾಗದಲ್ಲಿ ೪೯ನೇ ರ್‍ಯಾಂಕ್, ನವೀನ್ ಎಂ.ವಿ ಐಎಸ್‌ಎಂಎಚ್‌ನಲ್ಲಿ ೪೩ನೇ ರ್‍ಯಾಂಕ್, ಸುದೀಪ್ ಅತ್ರೇಯಾ ಎನ್. ಎಂಜಿನಿಯರಿಂಗ್‌ನಲ್ಲಿ ೩೩ನೇ ರ್‍ಯಾಂಕ್ ಇವರುಗಳು ರ್‍ಯಾಂಕ್ ಪಡೆದ ಪ್ರಮುಖರು ಎಂದರು.
ಎಕ್ಸ್‌ಪರ್ಟ್ ಕಾಲೇಜಿನ ದಿಶಾ ಎಸ್. ಪದವಿ ಪೂರ್ವ ಪರೀಕ್ಷೆಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರ ಹೀಗೆ ನಾಲ್ಕೂ ವಿಷಯಗಳಲ್ಲಿ ತಲಾ ೧೦೦ ಕ್ಕೆ ೧೦೦ ಅಂಕಗಳನ್ನು ಪಡೆದಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಎ.ಶಿವಾನಿ ಪೂವಯ್ಯ ೫೯೧ ಅಂಕದೊಂದಿಗೆ ೯೮.೫ ಶೇಕಡ ಅಂಕಗಳೊಂದಿಗೆ ಕಾಲೇಜಿನಲ್ಲಿ ಪ್ರಥಮ ಸ್ಥಾನವನ್ನು ಮತ್ತು ಕೋಚಿಂಗ್ ಕ್ಲಾಸಸ್‌ನಲ್ಲಿ ಸುಖ ಯೋಗೀಶ್ವರ್ ೫೯೦ ಅಂಕವನ್ನು ಪಡೆದಿದ್ದಾರೆ.
ಇದರ ಜತೆಯಲ್ಲಿಯೇ ರಾಷ್ಟ್ರೀಯ ಗೌರವಧನಕ್ಕೆ ಈ ಬಾರಿ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನಿಂದ ೧೪ ವಿದ್ಯಾರ್ಥಿಗಳು ಆಯ್ಕೆ ಆಗಿದ್ದಾರೆ. (KVPY) ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಡೆಸುವ ೨೦೧೪-೧೫ ನೇ ಸಾಲಿನ ಕಿಶೋರ್ ವೈಜ್ಞಾನಿಕ್ ಪೋತ್ಸಾಹನ್ ಯೋಜನಾ ಪರೀಕ್ಷೆಯಲ್ಲಿ ಈ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ೧೪೦೦ ವಿದ್ಯಾರ್ಥಿಗಳಲ್ಲಿ ಒಳಗೊಂಡಿರುತ್ತಾರೆ.
ಆಯ್ಕೆ ಆಗಿರುವ ವಿದ್ಯಾರ್ಥಿಗಳು ಮೂಲ ವಿಜ್ಞಾನದಲ್ಲಿ ಶಿಕ್ಷಣ ಮುಂದುವರಿಸಿದರೆ ಅವರಿಗೆ ವಾರ್ಷಿಕ ಸುಮಾರು ೧.೨೦ ಲಕ್ಷ ರೂ ಗಳವರೆಗೆ ಕೇಂದ್ರ ಸರಕಾರ ಪ್ರೋತ್ಸಾಹಧನ ನೀಡುತ್ತದೆ. ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಾದ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್, ಎಜುಕೇಶನ್ ಆಂಡ್ ರೀಸರ್ಚ್ ಮುಂತಾದ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ. ಕೆವಿಪಿವೈ ಆಯ್ಕೆ ಪರೀಕ್ಷೆಯು ಲಿಖಿತ ಹಾಗೂ ಮೌಖಿಕ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ.
ಎಕ್ಸ್‌ಪರ್ಟ್ ಕಾಲೇಜಿನ ಇನ್ನೋರ್ವ ವಿದ್ಯಾರ್ಥಿ ಗಿರೀಶ್ ಆರ್.ಭಾಗವತ್ ಇಂಡಿಯನ್ ನ್ಯಾಶನಲ್ ಬಯೋಲಾಜಿ ಒಲಿಂಪಿಯಾಡ್ ೨೦೧೫ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅಖಿಲ ಭಾರತ ಮಟ್ಟದಲ್ಲಿ ಒಟ್ಟು ತೇರ್ಗಡೆಯಾದ ೩೦ ವಿದ್ಯಾರ್ಥಿಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.
ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ೭೧ ವಿದ್ಯಾರ್ಥಿಗಳು ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಜೆಇಇ ಎಡ್ವಾನ್ಸ್‌ಡ್ ಪರೀಕ್ಷೆ ಬರೆಯಲು ಅರ್ಹತೆ ಪಡೆದಿರುತ್ತಾರೆ.
ಈ ಬಾರಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಎಕ್ಸ್‌ಪರ್ಟ್‌ನ ೭೬ ವಿದ್ಯಾರ್ಥಿಗಳು ಭೌತಶಾಸ್ತ್ರದಲ್ಲಿ ೧೦೦ಕ್ಕೆ ನೂರು, ೫೨ ವಿದ್ಯಾರ್ಥಿಗಳು ರಸಾಯನಶಾಸ್ತ್ರದಲ್ಲಿ ೧೦೦ಕ್ಕೆ ನೂರು, ೪೨ ವಿದ್ಯಾರ್ಥಿಗಳು ಗಣಿತದಲ್ಲಿ ೧೦೦ಕ್ಕೆ ನೂರು, ೬೪ ವಿದ್ಯಾರ್ಥಿಗಳು ಸಂಖ್ಯಾಶಾಸ್ತ್ರದಲ್ಲಿ ೧೦೦ಕ್ಕೆ ನೂರು ಹಾಗೂ ೩೪ ವಿದ್ಯಾರ್ಥಿಗಳು ಜೀವಶಾಸ್ತ್ರದಲ್ಲಿ ೧೦೦ಕ್ಕೆ ನೂರು ಅಂಕಗಳನ್ನು ಪಡೆದಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಎಕ್ಸ್‌ಪರ್ಟ್ ಶಿಕ್ಷಣ ಪ್ರತಿಷ್ಠಾನ ಸಿಇಟಿಯಲ್ಲಿ ಮೊದಲ ೫೦ ರೊಳಗೆ ಕಾಮೆಡ್‌ಕೆಯಲ್ಲಿ ಮೊದಲ ೨೦ ರೊಳಗೆ, ಜೆಇಇ ಮೈನ್ಸ್‌ನಲ್ಲಿ ಮೊದಲ ನೂರರೊಳಗೆ ಜೆಇಇ ಎಡ್ವಾನ್ಸ್‌ಡ್‌ನಲ್ಲಿ ಮೊದಲ ೧೦೦೦ ದೊಳಗೆ ರ್‍ಯಾಂಕ್ ಪಡೆದ ಹಾಗೂ ಕೆವಿಪಿವೈ ಮತ್ತು ಒಲಿಂಪಿಯಾಡ್ ಪರೀಕ್ಷೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಉನ್ನತ ಶಿಕ್ಷಣ ಪಡೆಯುವಲ್ಲಿ ಪ್ರೋತ್ಸಾಹಿಸಲು ಸತತ ನಾಲ್ಕು ವರ್ಷಗಳ ಕಾಲ ಸ್ಕೋಲರ್ ಶಿಪ್ ನೀಡಿ ಪ್ರೋತ್ಸಾಹಿಸುತ್ತಿದೆ.ಹೀಗೆ ಪದವಿ ಪೂರ್ವ ಶಿಕ್ಷಣ ಕ್ಷೇತ್ರದಲ್ಲಿ ಪ್ರತಿವರ್ಷ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಮಾಡುವ ಸಾಧನೆಯ ಬಗ್ಗೆ ಹೆಮ್ಮೆ ಎನಿಸುತ್ತಿದೆ ಎಂದು ಪ್ರೊ|| ನರೇಂದ್ರ ಎಲ್.ನಾಯಕ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಸಂಚಾಲಕಿ ಮತ್ತು ಕಾರ್ಯದರ್ಶಿ ಶ್ರೀಮತಿ ಉಷಾಪ್ರಭಾ ಎನ್.ನಾಯಕ್, ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಮಚಂದ್ರ ಭಟ್, ಸಂಸ್ಥೆಯ ಬಯೋಲಜಿ ವಿಭಾಗದ ಮುಖ್ಯಸ್ಥ ಹಾಗೂ ಶೈಕ್ಷಣಿಕ ಸಲಹೆಗಾರರಾದ ಶ್ರೀ ಪ್ರದೀಪ್ ಕುಮಾರ್, ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕರುಣಾಕರ ಬಳ್ಕೂರು ಮುಂತಾದವರು ಉಪಸ್ಥಿತರಿದ್ಧರು.