ಮಂಗಳೂರು, ಜೂನ್.12: ಕೊಂಕಣಿ ಬಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಇವುಗಳ ಬಗ್ಗೆ ಶೈಕ್ಷಣಿಕ ಅಧ್ಯಯನವನ್ನು ಪ್ರಾರಂಭಿಸುವ ಸಲುವಾಗಿ ಮಂಗಳುರು ವಿಶ್ವವಿದ್ಯಾನಿಲಯದಲ್ಲಿ ಕೊಂಕಣಿ ಅಧ್ಯಯನ ಪೀಠ ಇಂದು ಅಧಿಕೃತವಾಗಿ ಉದ್ಘಾಟನೆಗೊಳ್ಳುವುದರೊಂದಿಗೆ ಕೊಂಕಣಿ ಮಾತನಾಡುವ ಜನರ ಬಹುದಿನಗಳ ಕನಸು ನನಸಾಯಿತು ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಭವನದಲ್ಲಿ ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರು ಕೊಂಕಣಿ ಅಧ್ಯಯನ ಪೀಠವನ್ನು ಉದ್ಘಾಟಿಸಿ ಮಾತನಾಡಿದರು.
ಈಗಾಗಲೇ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇತರ ಅಧ್ಯಯನ ಕೇಂದ್ರಗಳೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಅವುಗಳ ಸಾಲಿಗೆ ಕೊಂಕಣಿ ಕೂಡಾ ಸೇರಿರುವುದು ಸಂತಸದ ವಿಚಾರವೆಂದರು.
ಸಮಾರಂಭದಲ್ಲಿ ಮಂಗಳೂರು ಬಿಷಪ್ ರೆ.ಫಾ.ಅಲೋಶಿಯಸ್ ಪಾವ್ಲ್ ಡಿಸೋಜ ಆಶೀರ್ವಚನ ನೀಡಿದರು. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಜೆ.ಆರ್.ಲೋಬೋ, ಐವನ್ ಡಿಸೋಜಾ, ಮಂಗಳೂರು ವಿ.ವಿ.ಕುಲಪತಿ ಪ್ರೊ.ಭೈರಪ್ಪ, ಮಂಗಳೂರು ಮೇಯರ್ ಜೆಸಿಂತಾ ಅಲ್ಫ್ರೆಡ್ ಡಿಸೋಜಾ, ಕರ್ನಾಟಕ ಕೊಂಕಣಿ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೋ, ಬಸ್ತಿ ವಾಮನ ಶೆಣೈ ಮೊದಲದವ್ರು ಗೌರವ ಅಥಿತಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.