ಕನ್ನಡ ವಾರ್ತೆಗಳು

ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ‘ವಿ.ವಿ ನೋಡಬನ್ನಿ’ ವಿನೂತನ ಕಾರ್ಯಕ್ರಮ.

Pinterest LinkedIn Tumblr

VV_open_campus_1

ಮಂಗಳೂರು, ಜೂ.13:  ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಮಂಗಳೂರು ವಿಶ್ವ ವಿದ್ಯಾನಿಲಯ ವಿವಿಧ ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ನೇರವಾಗಿ ಪರಿಚಯಿಸುವ ಉದ್ದೇಶದಿಂದ ಹಾಗೂ ವಿದ್ಯಾರ್ಥಿಗಳನ್ನು ಸಶಕ್ತರನ್ನಾಗಿ ಮಾಡುವ ದೃಷ್ಟಿಯಿಂದ ಕ್ಯಾಂಪಸ್ ನೋಡಬನ್ನಿ ಎಂಬ ವಿನೂತನ ಕಾರ್ಯಕ್ರಮವನ್ನು ಮಂಗಳೂರು ವಿಶ್ವ ವಿದ್ಯಾನಿಲಯ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದರು.

VV_open_campus_2 VV_open_campus_3 VV_open_campus_4 VV_open_campus_5

ಅವರು  ಮಂಗಳೂರು ವಿ.ವಿ.ಯಲ್ಲಿ ಹಮ್ಮಿಕೊಂಡ ಎರಡು ದಿನಗಳ ಮಂಗಳೂರು ‘ವಿ.ವಿ. ನೋಡಬನ್ನಿ’ (ಓಪನ್ ಹೌಸ್)ವಿಶೇಷ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಕ್ಕೆ ಮಂಗಳ ಗಂಗೋತ್ರಿ  ವಾಚನಾಲಯದ ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ನಿಟ್ಟಿನಲ್ಲಿ, ಅವರ ಮುಂದಿನ ಬೆಳವಣಿಗೆಗೆ ಪೂರಕವಾಗಿ ವಿಧಾನ ಸಭೆ, ಸಂಸತ್, ಅಧಿಕಾರಿಗಳ ಎ.ಸಿ. ಕಚೇರಿಯಲ್ಲಿ ಕುಳಿತು ನೀತಿ ನಿಯಮಾವಳಿ ರೂಪಿಸಿದರೆ ಸಾಕಾಗುವುದಿಲ್ಲ. ವಿದ್ಯಾರ್ಥಿಗಳ ಬಳಿಗೆ ನೇರವಾಗಿ ತೆರಳಿ ಮಾಹಿತಿ ನೀಡುವುದು ಉತ್ತಮ ಕಾರ್ಯಕ್ರಮ. ಮಂಗಳೂರು ವಿಶ್ವ ವಿದ್ಯಾನಿಲಯ ಮುಂದಿನ ದಿನಗಳಲ್ಲಿ ರಾಜ್ಯದ ನಂಬರ್ ಒನ್ ವಿಶ್ವ ವಿದ್ಯಾನಿಲಯವಾಗಬೇಕು ಎಂದು ತಾನು ಆಶಿಸುವುದಾಗಿ ಹೇಳಿದ ಖಾದರ್ ಸಮಾರಂಭಕ್ಕೆ ಶುಭ ಹಾರೈಸಿದರು.

VV_open_campus_6 VV_open_campus_7 VV_open_campus_8 VV_open_campus_9 VV_open_campus_10

ಇದರಿಂದ ಹೊಸದಾಗಿ ವಿಶ್ವ ವಿದ್ಯಾನಿಲಯಕ್ಕೆ ಸೇರಬಯಸುವ ವಿದ್ಯಾರ್ಥಿಗಳಿಗೆ ಯಾವ ವಿಷಯಗಳನ್ನು ಆರಿಸಿಕೊಂಡರೆ ಒಳ್ಳೆಯದು ಎಂಬ ಬಗ್ಗೆ ಸೂಕ್ತ ಮಾರ್ಗದರ್ಶನ ದೊರೆಯಲಿದೆ ಕ್ಯಾಂಪಸ್ ನೋಡಬನ್ನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿದೇಶದಲ್ಲಿ ಈ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಕುಲಪತಿ ಪ್ರೊ.ಕೆ.ಭೈರಪ್ಪ ತಿಳಿಸಿದರು.

ಕುಲಸಚಿವ ಪಿ.ಎಸ್. ಯಡಪಡಿತ್ತಾಯ ಸ್ವಾಗತಿಸಿದರು. ಪ್ರೊ.ಕೆ.ಆರ್.ಚಂದ್ರಶೇಖರ ವಂದಿಸಿದರು.

Write A Comment