ಮಂಗಳೂರು,ಜೂನ್.13 : ಬಾಲಕಾರ್ಮಿಕ ಪದ್ಧತಿ ವಿರೋಧಿ ಆಂದೋಲನ ಕರ್ನಾಟಕ (ಸಿ.ಎ.ಸಿ.ಎಲ್-ಕೆ) ಮತ್ತು ಮಂಗಳೂರು ನಾಗರಿಕ ಸಮಾಜದ ಸಮಾನ ಮನಸ್ಕರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಬಾಲಕಾರ್ಮಿಕ ಪದ್ಧತಿ ನಿಷೇಧ ಮತ್ತು ಸರ್ಕಾರದ ಧೋರಣೆ ಕುರಿತು ಸಮಾಲೋಚನಾ ಸಭೆಯು ನಗರದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯದ ಸಭಾಂಗಣದಲ್ಲಿ ಶುಕ್ರವಾರ ಡಾ|| ರೀಟಾ ನೊರ್‍ಹೋನಾ ರವರು ನಡೆಸಿಕೊಟ್ಟರು.
ಬಾಲಕಾರ್ಮಿಕ ಪದ್ಧತಿ ಕುರಿತು ಬರಲಿರುವ ಮಸೂಧೆಯ ತಿದ್ದುಪಡೆಯನ್ನು ಪ್ರಸ್ತಾಪಿಸುತ್ತಾ 14 ವರ್ಷದ ಕೆಳಗಿನ ಮಕ್ಕಳು ಮನೋರಂಜನೆ ಉಧ್ಯಮಗಳಾದ ಸಿನೆಮಾ, ಜಾಹಿರಾತು ಹಾಗೂ 14 ವರ್ಷದ ಕೆಳಗಿನ ಮಕ್ಕಳು ಕೌಟುಂಬಿಕ ಉದ್ಯೋಗಗಲ್ಲಿ ಕೆಲಸ ಮಾಡಲು ಅನುಕೂಲವಾಗುವಂತೆ ಮಸೂಧೆಯಲ್ಲಿ ತಿದ್ದುಪಡಿ ಮಾಡುವುದರ ಬಗ್ಗೆ ಕ್ಯಾಬಿನೇಟ್ ತೆಗೆದುಕೊಂಡ ನಿರ್ಧಾರವನ್ನು ಮಾಧ್ಯಮದ ಮೂಲಕ ಪ್ರಕಟಿಸಿದ್ದು ಸಾರ್ವಜನಿಕರಲ್ಲಿ ಗೊಂದಲ ಮತ್ತು ಆತಂಕವನ್ನುಂಟು ಮಾಡಿಸಿದೆ. ಆದಕಾರಣ ಬರಲಿರುವ ಮಸೂಧೆಯ ಕರಡನ್ನು ಜಿಲ್ಲಾ ಮಟ್ಟದಲ್ಲಿ ವ್ಯಾಪಕ ಚರ್ಚೆ ಹಾಗೂ ಸಂವಾದಕ್ಕೆ ಅವಕಾಶ ಮಾಡಿಕೊಟ್ಟು ನಂತರ ಮಸೂಧೆಯನ್ನು ಅಂತಿಮಗೊಳಿಸಬೇಕು ಎಂದು ಅವರು ಸಂಧರ್ಭದಲ್ಲಿ ಹೇಳಿದರು.