ಮಂಗಳೂರು,ಜೂನ್.13 : ಕರಾವಳಿಯ್ಯಾದಂತ ಮಾರ್ಸ್ ಕಾಯಿಲೆಯ ಸೋಂಕು ಅಂಟುತಿದ್ದು ಸೂಕ್ತ ಚಿಕಿತ್ಸೆಸೆ ಕೊಡಿ ಅಥವಾ ತಾವೇ ಚಿಕಿತ್ಸೆ ಪಡೆಯಲು ರಜೆ ನೀಡಬೇಕೆಂದು ಅಗ್ರಹಿಸಿ ವಿಧ್ಯಾರ್ಥಿಗಳಿಂದ ಶನಿವಾರ ನಗರದ ಲಕ್ಷಿ ಎಜುಕೇಷನ್ ಟ್ರಸ್ಟ್ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.
ಈಗಾಗಲೇ ಐರೋಪ್ಯ ರಾಷ್ಟ್ರಗಳಲ್ಲಿ ಜನರ ನಿದ್ರೆಗೆಡಿಸಿರುವ ಮರ್ಸ್ ಕಾಯಿಲೆ ಮಂಗಳೂರಿನಲ್ಲಿಯೂ ಕಂಡು ಬಂದಿರುವುದು ಇಲ್ಲಿಯ ಜನರನ್ನು ಆತಂಕದಲ್ಲಿ ತಳ್ಳಿದೆ.
ಲಕ್ಷ್ಮೀ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್ ನ ಹೆಚ್ಚಿನ ವಿದ್ಯಾರ್ಥಿನಿಯರು ಕೇರಳದವರಾಗಿದ್ದಾರೆ. ಗಾಳಿಯ ಮೂಲಕ ಹರಡುವ ಈ ರೋಗವನ್ನುಂಟು ಮಾಡುವ ಬ್ಯಾಕ್ಟೀರಿಯಾಗಳು ಪ್ರತಿರೋಧಕಗಳಿಗೆ ಮಣಿಯುವುದಿಲ್ಲ ಮತ್ತು ಮಾರಣಾಂತಿಕ ಸೋಂಕುಗಳನ್ನುಂಟು ಮಾಡಬಲ್ಲವು. ಕಾಲೇಜಿನ ಆಡಳಿತ ಮಂಡಳಿ ಆರಂಭದಲ್ಲಿ ರೋಗ ಕಾಣಿಸಿಕೊಂಡಿದ್ದನ್ನು ನಿರಾಕರಿಸಿತ್ತಾದರೂ ಇದೀಗ ಕಾಯಿಲೆಗೆ ಗುರಿಯಾಗಿರುವ ವಿದ್ಯಾರ್ಥಿನಿಯರ ವೈದ್ಯಕೀಯ ವೆಚ್ಚವನ್ನು ಭರಿಸಲು ಒಪ್ಪಿಕೊಂಡಿದೆಯೆನ್ನಲಾಗಿದೆ.
ಸುಮಾರು 120 ನರ್ಸಿಂಗ್ ವಿದ್ಯಾರ್ಥಿನಿಯರಲ್ಲಿ ಮರ್ಸ್ ಸೋಂಕಿನ ಲಕ್ಷಣಗಳು ಪತ್ತೆಯಾಗಿವೆ ಎಂದು ಕೊಟ್ಟಾಯಮ್ ನ ವಿದ್ಯಾರ್ಥಿನಿಯೋರ್ವರು ಹೇಳಿದ್ದರು. ಆಸ್ಪತ್ರೆಯಲ್ಲಿಯ ಪ್ರಸವಾನಂತರದ ಶುಶ್ರೂಷಾ ಕೋಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಕೆಲವು ವಿದ್ಯಾರ್ಥಿನಿಯರಲ್ಲಿ ಮೊದಲು ರೋಗದ ಲಕ್ಷಣಗಳು ಕಂಡು ಬಂದಿ ದ್ದವು. ನಮ್ಮ ತಂಡ ಕರ್ತವ್ಯಕ್ಕಾಗಿ ಕಳುಹಿಸಲ್ಪಟ್ಟಾಗ ಆಡಳಿತ ಮಂಡಳಿ ಈ ವಿಷಯವನ್ನು ನಮಗೆ ತಿಳಿಸಿರಲಿಲ್ಲ. ಹಿಂದಿನ ತಂಡದ ವಿದ್ಯಾರ್ಥಿನಿಯರನ್ನು ತಪಾಸಣೆಗೊಳಪಡಿಸಿದಾಗ ಪಾಸಿಟಿವ್ ರಿಪೋರ್ಟ್ ಬಂದಿದ್ದು, ನಮ್ಮನ್ನೂ ತಪಾಸಣೆಗೊಳಪಡಿಸಲಾಗಿತ್ತು. ನಮ್ಮಲ್ಲಿಯೂ ಕಾಯಿಲೆಯ ಲಕ್ಷಣಗಳಿರುವುದು ದೃಢಪಟ್ಟಿದೆ ಎಂದರು.
ಫಲಿತಾಂಶವನ್ನು ದೃಢಪಡಿಸಿಕೊಳ್ಳಲು ಎರಡನೇ ಬಾರಿಗೆ ತಪಾಸಣೆ ನಡೆಸುವಂತೆ ನಾವು ಕೋರಿದರೂ ಅದನ್ನು ನಿರಾಕರಿಸಿರುವ ಆಸ್ಪತ್ರೆ ನಮ್ಮನ್ನು ಇತರರಿಂದ ಪ್ರತ್ಯೇಕವಾಗಿರುವಂತೆ ಸೂಚಿಸಿದೆ. ಆಡಳಿತ ಮಂಡಳಿಯು ಪಾಸಿಟಿವ್ ಎಂದು ದೃಢಪಟ್ಟಿರುವ ವಿದ್ಯಾರ್ಥಿನಿಯರನ್ನು ಮತ್ತೆ ಮುಂದಿನ ವಾರಕ್ಕೆ ಪೋಸ್ಟ್ ಮೆಟರ್ನಿಟಿ ವಾರ್ಡ್ ನಲ್ಲಿ ಕರ್ತವ್ಯಕ್ಕೆ ನಿಯೋಜಿಸಿದೆ ಎಂದು ತಿಳಿದು ಬಂದಿದೆ. ಪ್ರಾಂಶುಪಾಲರನ್ನು ವಿಚಾರಿಸಿದಾಗ, ವಿದ್ಯಾರ್ಥಿನಿಯರಲ್ಲಿ ಎಚ್ ಐವಿ ಪಾಸಿಟಿವ್ ವರದಿ ಬಂದರೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂಬ ಧಿಮಾಕಿನ ಉತ್ತರ ನೀಡಿದ್ದಾರೆ ಎಂದು ಇನ್ನೋರ್ವ ವಿದ್ಯಾರ್ಥಿನಿ ತಿಳಿಸಿದರು.
ಆದರೆ, ಕೆಲವೇ ವಿದ್ಯಾರ್ಥಿನಿಯರಲ್ಲಿ ರೋಗದ ಲಕ್ಷಣಗಳು ಕಂಡು ಬಂದಿದ್ದು, ಅವರಿಗೆ ಆಂಟಿ ಬಯೋಟಿಕ್ಸ್ ನೀಡಲಾಗಿದೆ ಎನ್ನುತ್ತಾರೆ ಪ್ರಾಂಶುಪಾಲೆ ಡಾ.ಲರಿಸಾ ಮಾರ್ಥಾ ಸ್ಯಾಮ್ಸ್.