ಮಂಗಳೂರು,ಜೂನ್.17 : ಐಪಿಎಲ್ ಹಗರಣದ ರೂವಾರಿ ಲಲಿತ್ ಮೋದಿಗೆ ಇಂಗ್ಲೆಂಡ್‌ನಿಂದ ಪೋರ್ಚುಗಲ್‌ಗೆ ಹೋಗಲು ನೆರವು ನೀಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಲಾಲ್‌ಬಾಗ್‌ನ ಮಹಾತ್ಮ ಗಾಂಧಿ ಪ್ರತಿಮೆ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.
ಶಾಸಕ ಬಿ.ಎ.ಮೊಹಿದಿನ್ ಬಾವಾ ಮಾನತಾಡಿ, ಕಪ್ಪು ಹಣ ಹಾಗೂ ಹಗರಣಗಳ ಬಗ್ಗೆ ಇಡೀ ದೇಶಕ್ಕೆ ಉಪದೇಶ ಮಾಡುತ್ತಿದ್ದ ಬಿಜೆಪಿ ಮುಖಂಡರ ನಿಜ ಬಣ್ಣ ಬಯಲಾಗಿದೆ. ಗಂಭೀರ ಆರೋಪ ಹೊತ್ತಿರುವ ಆರೋಪಿಯ ವಿದೇಶ ಪ್ರಯಾಣಕ್ಕೆ ಅವಕಾಶ ಒದಗಿಸುವ ಮೂಲಕ ಸಚಿವರು ತಮ್ಮ ಸ್ಥಾನವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.
ಸಂಘಟನೆ ಕಾರ‌್ಯಕರ್ತರು ಹಾಗೂ ಮುಖಂಡರು ಸುಷ್ಮಾ ಸ್ವರಾಜ್ ಮತ್ತು ಲಲಿತ್ ಮೋದಿ ಭಾವಚಿತ್ರದ ಫಲಕಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿ, ಸುಷ್ಮಾ ರಾಜೀನಾಮೆ ನೀಡುವ ತನಕ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದರು.
ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಮಿಥುನ್ ರೈ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಕಾರ್ಪೊರೇಟರ್‌ಗಳಾದ ನವೀನ್ ಡಿಸೋಜ, ಅಶೋಕ್ ಡಿ.ಕೆ., ಪ್ರವೀಣ್‌ಚಂದ್ರ ಆಳ್ವ, ಮುಖಂಡರಾದ ಸುರೇಶ್ ಬಲ್ಲಾಳ್, ವಿಶ್ವಾಸ್ ಕುಮಾರ್ ದಾಸ್, ಮೆಲ್ವಿನ್ ಡಿಸೋಜ, ಅಮೃತ್ ಕದ್ರಿ, ಮೆರಿಲ್ ರೇಗೊ, ಪ್ರಸಾದ್ ಮಲ್ಲಿ, ನಝೀರ್ ಬಜಾಲ್, ಅರುಣ್ ಕ್ರಾಸ್ತ, ರಮಾನಂದ ಪೂಜಾರಿ, ನಝೀರ್ ಕೊಣಾಜೆ, ಗಿರೀಶ್ ಶೆಟ್ಟಿ, ಹಬೀಬ್ ಕಾಟಿಪಳ್ಳ, ಚೇತನ್ ಕುಮಾರ್, ಪದ್ಮನಾಭ ಅಮೀನ್, ಕೇಶವ ಮರೋಳಿ, ನವಾಝ್ ಜಪ್ಪು ಮತ್ತಿತರರಿದ್ದರು.