ಕನ್ನಡ ವಾರ್ತೆಗಳು

ಮಂಗಳೂರಿನಲ್ಲಿ ಅಡಿ ಕ್ಯೂ 3 ಹೊಸ ಕಾರು ಮಾರುಕಟ್ಟೆಗೆ ಬಿಡುಗಡೆ

Pinterest LinkedIn Tumblr

Audi_Q3_carlounch_1

ಮಂಗಳೂರು,ಜೂನ್.27: ಜರ್ಮನಿಯ ಸುವಿಹಾರಿ ಕಾರು ಉತ್ಪಾದಕ ಸಂಸ್ಥೆ ಆಡಿಯ ಹೊಸ “ಆಡಿ ಕ್ಯೂ 3” ಕಾರು ಮಂಗಳೂರಿನಲ್ಲಿ ಶುಕ್ರವಾರ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಕಂಕನಾಡಿಯಲ್ಲಿರುವ ಆಡಿ ಶೋ ರೂಂನಲ್ಲಿ ಜರಗಿದ ಸಮಾರಂಭದಲ್ಲಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷ (ಕರ್ನಾಟಕ/ ಹುಬ್ಬಳಿ) ಗಜಾನನ ಹೆಗಡೆಕಟ್ಟೆ ಅವರು ಹೋಸ ಕಾರನ್ನು ಬಿಡುಗಡೆ ಮಾಡಿದರು. ಮಂಗಳೂರು ಶೋ ರೂಂನ ಜನರಲ್ ಮ್ಯಾನೇಜರ್ ರವೀಂದ್ರ ಪೈ ಉಪಸ್ಥಿತರಿದ್ದರು.

ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸದಾನಂದ ಹೆಗಡೆಕಟ್ಟೆ ಅವರು, ಆಡಿ ಕ್ಯೂ 3 ಕಾರು ಈ ವರ್ಷ ಬಿಡುಗಡೆಯಾದ ಆಡಿ ಕಂಪೆನಿಯ 5ನೇ ಕಾರು ಆಗಿರುತ್ತದೆ. ಅಕರ್ಷಕ ನೋಟ, ಸೂರ್ಯನ ಶಾಖವನ್ನನ್ನುಸರಿಸಿ ಸ್ವಯಂ ಚಾಲಿತವಾಗಿ ಬದಲಾಗುವ ಹವಾನಿಯಂತ್ರಿತ ವ್ಯವಸ್ಥೆ, ಎಲ್ಇಡಿ ಹೆಡ್ ಲೈಟ್. ಪೆಡಲ್ ಶಿಫ್ಟ್ ಈ ಕಾರಿನ ಪ್ರಮುಖ ವೈಶಿಷ್ಟ್ಯಗಳು ಎಂದು ತಿಳಿಸಿದರು.

Audi_Q3_carlounch_2 Audi_Q3_carlounch_3 Audi_Q3_carlounch_4 Audi_Q3_carlounch_5 Audi_Q3_carlounch_6 Audi_Q3_carlounch_7 Audi_Q3_carlounch_8 Audi_Q3_carlounch_9 Audi_Q3_carlounch_10 Audi_Q3_carlounch_11 Audi_Q3_carlounch_12 Audi_Q3_carlounch_14 Audi_Q3_carlounch_15 Audi_Q3_carlounch_16 Audi_Q3_carlounch_17

2012ರಿಂದ ಆಡಿ ಕ್ಯೂ 3 ಕಾರು ಮಾರುಕಟ್ಟೆಗೆ ಬಂದಿದ್ದು, ಪ್ರತಿ ವರ್ಷ ಅದು ಪರಿಷ್ಕಾರಗೊಳ್ಳುತ್ತಾ ಹೊಸ ರೂಪದಲ್ಲಿ ಬರುತ್ತಿದೆ. ಇದೀಗ ಹೊಸ ಮಾಡೆಲ್ ನಲ್ಲಿ ಮಾರುಕಟ್ಟೆಗೆ ಬಂದಿದೆ. ಮಂಗಳೂರಿನಲ್ಲಿ ಈ ಕಾರಿನ ಎಕ್ಸ್ ಶೋರೂಂ ಬೆಲೆ 29,74,೦೦೦ರೂ.ಗಳಿಂದ ಮೊದಲ್ಗೊಂಡು 38 ಲಕ್ಷ ರೂ.ವರೆಗೂ ಇರುತ್ತದೆ. 6 ಆಕರ್ಷಕ ಬಣ್ಣಗಳಲ್ಲಿ ಇದು ಲಭ್ಯ ಎಂದು ಹೇಳಿದರು.

ಮಂಗಳೂರಿನಲ್ಲಿ ಆಡಿ ಕಾರುಗಳಿಗೆ ಉತ್ತಮ ಮಾರುಕಟ್ಟೆ ಇದ್ದು ಈ ವರೆಗೆ 250 ಕಾರುಗಳು ಮಾರಾಟವಾಗಿವೆ. ಮುಂದಿನ 6 ತಿಂಗಳಲ್ಲಿ 45-50 ಕಾರು ಮಾರಾಟದ ಗುರಿ ಹೊಂದಲಾಗಿದೆ ಎಂದು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಶೋ ರೂಂನ ಜನರಲ್ ಮ್ಯಾನೇಜರ್ ರವೀಂದ್ರ ಪೈ ಹಾಗೂ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಶಿವಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

Write A Comment