ಮಂಗಳೂರು / ಉಡುಪಿ : ಮಣಿಪಾಲ, ಜೂ. 26: ಏಸ್ಸೆಲ್ ಕಂಪನಿ ಅಧ್ಯಕ್ಷ ಡಾ. ಸುಭಾಷ್ ಚಂದ್ರ ಅವರು ಜೂನ್ 29 ರಂದು ಬೆಳಗ್ಗೆ ಮಣಿಪಾಲ್ ಟಿಎ ಪೈ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದು ತಮ್ಮ ಪ್ರಖ್ಯಾತ ಡಿಎಸ್ ಸಿ ಶೋದ ಮುಂದಿನ ಭಾಗವನ್ನು ನಡೆಸಿಕೊಡಲಿದ್ದಾರೆ. ಎಸ್ಸೆಲ್ ಸಂಸ್ಥೆ ಮತ್ತು ಜೀ ಸಮೂಹದ ಸಂಯೋಜನೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಸ್ತುನಿಷ್ಠತೆ ಕಳೆದುಕೊಳ್ಳುತ್ತಿರುವ ಮಾಧ್ಯಮದ ಕುರಿತಾಗಿ ಡಾ. ಸುಭಾಷ್ ಚಂದ್ರ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಕಾಯ್ರಕ್ರಮ ಶನಿವಾರ ರಾತ್ರಿ 10 ಗಂಟೆಗೆ ಜೀ ನ್ಯೂಸ್ ನಲ್ಲಿ, ಸಂಜೆ 7 ಗಂಟೆಗೆ ಜೀ ಬಿಸಿನಸ್ ವಾಹಿನಿಯಲ್ಲಿ ಮತ್ತು ಭಾನುವಾರ ಬೆಳಗ್ಗೆ 11 ಗಂಟೆಗೆ ಮರುಪ್ರಸಾರವಾಗಲಿದೆ.
1992 ರಲ್ಲಿ ಟಿವಿ ಮಾಧ್ಯಮಕ್ಕೆ ಕಾಲಿಟ್ಟ ಸುಭಾಷ್ ಚಂದ್ರ ಇಂದು ಅನೇಕ ವಾಹಿನಿಗಳ ನೇತೃತ್ವ ವಹಿಸಿದ್ದಾರೆ. ಅವರು ತಮ್ಮ ಜೀವನದ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.