ಕನ್ನಡ ವಾರ್ತೆಗಳು

ಎಲ್ಲೆಡೆ ಮಿಂಚುತ್ತಿರುವ ಟೇಬಲ್ ಟೆನಿಸ್ ಪ್ರತಿಭೆ – ಸೃಷ್ಟಿ ಹಳೆಯಂಗಡಿ

Pinterest LinkedIn Tumblr

Srushti_shining_star_1

ಪ್ರತಿಭೆಯಿದ್ದವರಿಗೆ ಅವಕಾಶವನ್ನು ಕಲ್ಪಿಸಿಕೊಡುವ ಮುಂಬಯಿ ಮಹಾನಗರದಲ್ಲಿ ಪ್ರತಿಭಾವಂತ ಕನ್ನಡಿಗರಿಗೆ ಬರಗಾಲವಿಲ್ಲ. ತನ್ನ ಏಳನೆಯ ವಯಸ್ಸಲ್ಲಿಕ್ರೀಡೆಯಲ್ಲಿ ತನ್ನನ್ನು ತೊಡಗಿಸಿ ಅಂದಿನಿಂದ ಇಂದಿನ ತನಕ ರಾಜ್ಯ, ರಾಷ್ತ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮೆರೆದ ಯುವ ಕ್ರೀಡಾ ಪಟು, ಯಶಸ್ವಿಟೇಬಲ್ ಟೆನಿಸ್ ಆಟಗಾರ್ತಿ ದಹಿಸರಿನ ಸೃಷ್ಟಿ ಹಳೆಯಂಗಡಿ, ನಗರದ ಬ್ಯಾಂಕೊಂದರಲ್ಲಿ ಹಿರಿಯ ಪ್ರಭಂದಕರಾಗಿರುವ,  ಸಮಾಜ ಸೇವಕ ಸುರೇಂದ್ರನಾಥಹಳೆಯಂಗಡಿ ಮತ್ತು ಹೇಮಲತಾ ದಂಪತಿಯ ಪುತ್ರಿ, ದಹಿಸರ್ ಪೂರ್ವ ವಿದ್ಯಾ ಮಂದಿರ ಶಾಲೆಯ ಹತ್ತನೆಯ ತರಗತಿ ವಿದ್ಯಾರ್ಥಿನಿ.

ದಹಿಸರ್ ಸ್ಪೋಟ್ಸ್ ಪೌಂಡೇಶನನಿನಲ್ಲಿ ಕ್ರೀಡಾಬ್ಯಾಸ ತೊಡಗಿದ ಕೇವಲ ಆರು ತಿಂಗಳಲ್ಲೇ ಜುಹು ಜಿಮ್ಖಾನದಲ್ಲಿ ಜರಗಿದ ಟೂರ್ನಮೆಂಟ್ ನಲ್ಲಿ ಮೆಡಲನ್ನುಗಳಿಸಿದ್ದು ಮುಂದೆ ಇದು ಈ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹಾಗೂ ಸ್ಪೂರ್ತಿ ದೊರಕಿತು.  ಟೇಬಲ್ ಟೆನಿಸ್ ನಲ್ಲಿ ಈಕೆಯ ಸಾಧನೆ ಬಗ್ಗೆ ಕೆಲವನ್ನುಹೆಸರಿಸುದಾದರೆ, ತನ್ನ ಮೊದಲನೇ ವರ್ಷದಲ್ಲಿ ಮುಂಬಯಿಯ ಟೇಬಲ್ ಟೆನಿಸ್ ಟೀಮ್ ಪ್ರತಿನಿಧಿಯಾಗಿ ಸಾಂಗ್ಲಿಗೆ ಆಯ್ಕೆಯಾಗಿದ್ದಳು. ಆ ನಂತರಮಹಾರಾಷ್ಟ್ರದ ಪ್ರತಿನಿಧಿಯಾಗಿ ಆಯ್ಕೆಯಾಗಿ ಇಂಡೊರ್ ನಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ್ದಳು. ಅಂದಿನಿಂದ ನಿರಂತರವಾಗಿ ಮಹಾರಾಷ್ಟ್ರದ ಟೀಮನ್ನುಪ್ರತಿನಿಧೀಕರಿಸುತ್ತಿರುವುದು ಅಬಿಮಾನದ ಸಂಗತಿ. ಹದಿನೈದು ವರ್ಷಗಳ ಕೆಳಗಿನವರಲ್ಲಿ ರಾಷ್ಟ್ರಮಟ್ಟದಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ಎರಡನೇ ಸ್ಥಾನಗಳಿಸಿದ ಸೃಷ್ಟಿ ಹಳೆಯಂಗಡಿ ಥಾಯ್ಲೇಂಡ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಇಂಡಿಯಾ ಟೀಮ್ ಗೆ ಆಯ್ಕೆಯಾಗಿ ಭಾರತವನ್ನು ಪ್ರತಿನಿಧಿಕರಿಸಿದ್ದು ಭಾರತ ಟೀಮ್ಬ್ರೋನ್ಸ್ ಮೆಡಲನ್ನು ತನ್ನದಾಗಿಸಿದೆ.

Srushti_shining_star_2 Srushti_shining_star_3 Srushti_shining_star_4

ಇತ್ತೀಚೆಗೆ ದೆಹಲಿಯಲ್ಲಿ ಜರಗಿದ ಸೌತ್ ಏಶ್ಯನ್ ಚಾಂಪಿಯನ್ ಶಿಫ್ ನಲ್ಲಿ ಈಕೆ ಭಾರತವನ್ನು ಪ್ರತಿನಿಧೀಕರಿಸಿದ್ದು ಭಾರತವು ಗೊಲ್ಡ್ ಮೆಡಲನ್ನು ಗಳಿಸಿದೆಮಾತ್ರವಲ್ಲದೆ ಸೃಷ್ಟಿ ಯು ಕೂಡಾ ಗೋಲ್ಡ್ ಮೆಡಲನ್ನು ಗಳಿಸಿ ಹದಿನೈದರ ಕೆಳಗಿನ ಸೌತ್ ಏಶ್ಯನ್ ಚಾಂಪಿಯನ್ ಆಗಿರುವಳು. ಇದೇ ಜೂನ್ 20 ಮತ್ತು21ರಂದು ನಗರದಲ್ಲಿ ಜರಗಿದ ಮುಂಬಯಿ ಸೂಪರ್ ಲೀಗ್ ನಲ್ಲಿ ಟೋಪ್ 8 ರ್ರ್ಯಾಂಕಿನಲ್ಲಿ 8 ಟೀಂನ ಮಾಲಕರು ಹರಾಜು ನಡಿಸಿದ್ದು ಈಕೆಗೆ ಅತ್ಯದಿಕ ಬಿಡ್ದೊರಕಿದ್ದು ಇದು ತನ್ನ ಕ್ರೀಡಾ ಪ್ರತಿಭೆಗೆ ಸಂದ ಗೌರವವಾಗಿದೆ.

ದೇಶದ ವಿವಿಧೆಡೆಯಲ್ಲಿ ನಡೆದ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಈ ತನಕ ನೂರಾರು ಮೆಡಲ್ ಗಳನ್ನು ಪಡೆದಿರುವಳು. ವಿದೇಶ, ಮುಂಬಯಿಮಾತ್ರವಲ್ಲದೆ, ಮಹಾರಾಷ್ಟ್ರದ ವಿವಿದೆಡೆ, ದುರ್ಗಾಪುರ, ಗಾಂಧಿಧಾಮ, ಆಲೆಪ್ಪಿ ಹಾಗೂ ಇನ್ನಿತರ ಕಡೆಗಳಲ್ಲಿ ಮಾತ್ರವಲ್ಲದೆ ಅಂತರ್ ಶಾಲಾ ಮಟ್ಟದಲ್ಲಿ 15ವರ್ಷದ ಕೆಳಗಿನ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಕೆಲವು ಗೋಲ್ಡ್, ಸಿಲ್ವರ್, ಗಳಿಸಿದ ಕೀರ್ತಿ ಸೃಷ್ಟಿ ಹಳೆಯಂಗಡಿ ಗೆ ಸಲ್ಲುತ್ತದೆ.

ಇವಳ ಯಸಸ್ಸಿಗೆ ಶಾಲೆಯಿಂದ ಮಾತ್ರವಲ್ಲದೆ, ತಂದೆ, ತಾಯಿಯ ಪ್ರೋತ್ಸಾಹದೊಂದಿಗೆ ತನ್ನ ಕೋಚ್ ಸಚಿನ್ ಶೆಟ್ಟಿ ಯವರ ಮಾರ್ಗದರ್ಶನವೂಕಾರಣವಾಗಿದೆ. ಟೇಬಲ್ ಟೆನಿಸ್ ಕ್ರೀಡೆಯಲ್ಲಿ ಮಿಂಚುತ್ತಿರುವ ಈ ಉದಯೋನ್ಮುಕ ಪ್ರತಿಭೆ ಸೃಷ್ಟಿ ಎಸ್ . ಹಳೆಯಂಗಡಿ ಉತ್ತಮ ಭವಿಷ್ಯದತ್ತಮುನ್ನಡೆಯುತ್ತಿರುವಲ್ಲಿ ಸಂದೇಹವಿಲ್ಲ.

 – ಈಶ್ವರ ಎಂ. ಐಲ್

Write A Comment