ಉಳ್ಳಾಲ,ಜುಲೈ.04 : ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ವತಿಯಿಂದ ದಾರುಲ್ ಇರ್ಶಾದ್ ಮಾಣಿಯ ಬೆಳ್ಳಿ ಹಬ್ಬದ ಪ್ರಯುಕ್ತ ವಾಟರ್ ಕೂಲರನ್ನು ಕೊಣಾಜೆ ಪೊಲೀಸ್ ಠಾಣೆಗೆ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ, ಹಾಫಿಳ್ ಯಾಕೂಬ್ ಸಅದಿ ನಾವೂರು, ಕೊಣಾಜೆ ಪೋಲೀಸ್ ಠಾಣಾಧಿಕಾರಿ ರಾಘವ ಪಡೀಲ್‌ರಿಗೆ ಹಸ್ತಾಂತರಿಸಿದರು.
ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ಮುಖಂಡರುಗಳಾದ ಜಮಾಲುದ್ದೀನ್ ಸಖಾಫಿ ಮುದುಂಗಾರುಕಟ್ಟೆ, ಹನೀಫ್ ಸಖಾಫಿ ನಾಟೆಕಲ್, ಶರೀಫ್ ಮುಡಿಪು, ಸಫೀರ್ ರೆಂಜಾಡಿ, ರಿಯಾಜ್ ಸಜೀಪ, ಜಬ್ಬಾರ್ ಮುಸ್ಲಿಯಾರ್ ನ್ಯೂಪಡ್ಪು, ಸಿ.ಎಂ ಫಾರೂಖ್ ತಿಬ್ಲೆಪದವು, ಎಸ್ಸೆಸ್ಸೆಫ್ ತಿಬ್ಲೆಪದವು ಶಾಖಾಧ್ಯಕ್ಷ ರಫೀಕ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.