ಉಳ್ಳಾಲ,ಜುಲೈ.04 : ಬೆಳ್ಮ ಗ್ರಾಮ ಪಂಚಾಯತ್‌ಗೆ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ವಿಜಯ ಕೃಷ್ಣಪ್ಪ ಅಧ್ಯಕ್ಷರಾಗಿ ಬಿ.ಎಂ.ಅಬ್ದುಲ್ ಸತ್ತಾರ್ ಬೆಳ್ಮ ದೋಟ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬೆಳ್ಮ ಗ್ರಾಮ ಪಂಚಾಯತ್‌ನಲ್ಲಿ 17 ಸದಸ್ಯರಿದ್ದು, ಕಾಂಗ್ರೆಸ್ ಬೆಂಬಲಿತ12 , ಜೆಡಿಎಸ್ ಬೆಂಬಲಿತ 5 ಸದಸ್ಯರಿದ್ದಾರೆ. ವಿಜಯ ಕೃಷ್ಣಪ್ಪ ಎರಡನೇ ಅವಧಿಗೆ ಸದಸ್ಯರಾಗಿ, ಒಂದು ಅವಧಿಗೆ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಅಬ್ದುಲ್ ಸತ್ತಾರ್ ಪ್ರಥಮ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಮಂಗಳೂರು ತಾಲೂಕು ಪಂಚಾಯತ್ ಮಾಜಿ ಸದಸ್ಯ ಮೈಸೂರು ಇಬ್ರಾಹಿಂ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಕಾರ್ಮಿಕ ಘಟಕದ ಅಧ್ಯಕ್ಷ ಟಿ.ಎಂ. ಫಾರೂಕ್, ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ. ಅಬ್ದುಲ್ ಹಮೀದ್, ಕಾಂಗ್ರೆಸ್ ಮುಖಂಡರಾದ ರವೂಫ್ ರೆಂಜಾಡಿ, ರವಿರಾಜ್ ಶೆಟ್ಟಿ ದೇರಳಕಟ್ಟೆ, ಶರೀಫ್ ಟಿ.ಎಂ. ವೆಂಕಟೇಶ್, ಇಬ್ರಾಹಿಂ ಬದ್ಯಾರ್, ಶಾಮಣ್ಣ ಶೆಟ್ಟಿ, ಪಂಚಾಯತ್ ಮಾಜಿ ಅಧ್ಯಕ್ಷ ಯೂಸುಫ್ ಬಾವ ಉಪಸ್ಥಿತರಿದ್ದರು.
ಚುನಾವಣಾ ಅಧಿಕಾರಿಯಾಗಿ ಜೋ ಪ್ರವೀಣ್ ಡಿ.ಸೋಜಾ ಭಾಗವಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಅಕಾರಿ ನವೀನ್ ಹೆಗ್ಡೆ ಸಹಕರಿಸಿದರು.