ಉಳ್ಳಾಲ, ಜುಲೈ. 04 : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫಡರೇಶನ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ಇದರ ಆಶ್ರಯದಲ್ಲಿ ರಂಝಾನ್ ಕಿಟ್ ವಿತರಿಸಲಾಯಿತು. ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್‌ನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯು.ಎಚ್. ಲೋಜೆಸ್ತಿಕ್ ಮಾಲಕ ಯು.ಎಚ್. ಹಸೈನಾರ್ ಕಿಟ್ ವತರಣೆಗೆ ಚಾಲನೆ ನೀಡಿದರು.40 ಸಾವಿರ ಮೌಲ್ಯದ ಕಿಟ್‌ನ್ನು ಈ ಸಂದರ್ಭ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಟ್ಲಾಸ್ ಜ್ಯುವೆಲ್ಲರಿ ಮಾಲಕ ಅನೀಸ್ ತೊಕ್ಕೊಟ್ಟು, ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ಚಯರ್‌ಮ್ಯಾನ್ ಅಲ್ತಾಫ್ ಕುಂಪಲ, ಕೋಶಾಧಿಕಾರಿ ಸಮೀರ್ ಸೇವಂತಿಗುಡ್ಡೆ, ರಿಯಾಝ್ ಅಳೇಕಲ, ಲತೀಫ್ ಅಳೇಕಲ ಮೊದಲಾದವರು ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್‌ನ ಕನ್ವೀನರ್ ಅನ್ಸಾರ್ ಅಳೇಕಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಜಾಫರ್ ಯು.ಎಸ್. ವಂದಿಸಿದರು.