ಮಂಗಳೂರು,ಜುಲೈ.04: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮದಿಪು ಸಾಹಿತ್ಯ ಸ್ಪರ್ಧೆಯ ಬಹುಮಾನ ವಿತರಣೆ ಮತ್ತು ಮದಿಪು 66 ನೇ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಶುಕ್ರವಾರ ನಗರದ ತುಳು ಸಾಹಿತ್ಯ ಅಕಾಡೆಮಿ ಚಾವಡಿಯಲ್ಲಿ ನಡೆಯಿತು.
ಮದಿಪು -66 ವಿಶೇಷ ಸಂಚಿಕೆ ಬಿಡುಗಡೆಗೊಳಿಸುವ ಆಕೃತಿ ಆಶಯ ಪಬ್ಲಿಕೇಶನ್ ನ ಕಲ್ಲೂರು ನಾಗೇಶ್ ಮಾತನಾಡಿ ಅಕಾಡೆಮಿ ಮುಖವಾಣಿಯಾಗಿ 1995 ರಿಂದ ಮದಿಪು ನಿರಂತರ ಪ್ರಕಟಗೊಳ್ಳುತ್ತಿದೆ. ಇದರಲ್ಲಿ ಇದುವರೆಗೆ ಸುಮಾರು 4 ಸಾವಿರ ಛಾಯಾಚಿತ್ರಗಳು 400ಕ್ಕೂ ಹೆಚ್ಚು ಮಂದಿಯ ಲೇಖನಗಳು ಪ್ರಕಟಗೊಂಡಿದ್ದು, ತುಳು ಸಾಹಿತ್ಯಕ್ಕೆ ಇದರ ಕೊಡುಗೆ ದೊಡ್ಡದಾಗಿದೆ ಎಂದರು.
ತುಳುವಿನ ಹೃದಯದ ಭಾಷೆಯನ್ನು ಅಕ್ಷರ ರೂಪದಲ್ಲಿ ನೀಡಲು ಸಾಧ್ಯವೇ ಎಂಬ ಅನುಮಾನಗಳಿಗೆ ಇಂತಹ ಕೃತಿಗಳ ಮೂಲಕ ಉತ್ತರ ಲಭಿಸಲು ಸಾಧ್ಯ66 ನೇ ಸಂಚಿಕೆ ತುಳು ಸಾಹಿತ್ಯದ ಪ್ರೋಟೀನ್ ನಂತಿದೆ. ತುಳುವಿನ ರಚನ್ಮಾತಕ ಅಂಶ, ತುಳುವಿನ ಧ್ವನಿ, ತುಳು ಆಶಯ, ಸಾಮರಸ್ಯದ ಚಿಂತನೆ ಹೀಗೆ ನಾನಾ ವಿಷಯಗಳು ಇದರಲಿದ್ದೆ ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಎಂ.ಜಾನಕಿ ಬ್ರಹ್ಮಾವರ, ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸ ಡಾ. ಗಣೇಶ್ ಅಮೀನ್ ಸಂಕಮಾರ್, ಮೊದಲಾದವರು ಉಪಸ್ಥಿತರಿದ್ದರು.
ಆಕಾಡೆಮಿ ರಿಜಿಸ್ಟಾರ್ ಚಂದ್ರಹಾಸ್ ರೈ ಬಿ ಸ್ವಾಗತಿಸಿದರು, ಡಿ.ಎಮ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.