ಸುರತ್ಕಲ್,ಜುಲೈ.04 : ನವಮಂಗಳೂರು ಬಂದರಿಂದ ಜೋಕಟ್ಟೆ ಮಾರ್ಗವಾಗಿ ಎಂಆರ್‌ಪಿಎಲ್ ವಿಸ್ತರಣಾ ಯೋಜನೆಗೆ ಸಾಗಿಸಲಾಗುತ್ತಿದ್ದ ಬೃಹತ್ ಯಂತ್ರವೊಂದು ಜೋಕಟ್ಟೆ ಪೇಟೆಯಲ್ಲಿ ಶುಕ್ರವಾರ ಮುಂಜಾನೆಯಿಂದ ಸಿಲುಕಿಹಾಕಿಕೊಂಡಿದ್ದು ಇದನ್ನು ಸ್ಥಳಾಂತರಿಸಲು ಬಿಡದೆ ಪ್ರತಿಭಟನೆ ನಡೆಸಿದ ಸ್ಥಳೀಯರು ಈ ಮೂಲಕ ಎಂಆರ್‌ಪಿಎಲ್ ವಿರುದ್ದ ಇದ್ದ ತಮ್ಮ ಅಸಮಾಧಾನವನ್ನೂ ಹೊರಹಾಕಿದರು ಎನ್ನಲಾಗಿದೆ.
ಘಟನೆ ಸ್ಥಳಕ್ಕೆ ಹೋಗಿದ್ದ ಮೆಸ್ಕಾಂ ಬೈಕಂಪಾಡಿ ಕಚೇರಿಯ ಜೆಇ ಮತ್ತು ಎಇಇಗೆ ಸ್ಥಳೀಯರು ಹಲ್ಲೆ ನಡೆಸಲು ಮುಂದಾಗಿದ್ದು ಸ್ಥಾವರ ಸಾಗಿಸಲು ವಿದ್ಯುತ್ ತಂತಿ ಸರಿಸಲು ಬಿಡಲಿಲ್ಲ. ಸ್ಥಳೀಯ ಆಕ್ರೋಶಕ್ಕೆ ಈ ಯಂತ್ರ ಸಾಗಾಟ ಸಂದರ್ಭ ರಮ್ಜಾನ್ ಉಪವಾಸಕ್ಕೆ ಅಡಚಣೆಯಾಗಿರುವುದು ಮುಖ್ಯ ಕಾರಣ ಎನ್ನಲಾಗಿದೆ.
ಸ್ಥಳೀಯರ ಪ್ರಕಾರ ಜೋಕಟ್ಟೆಯಲ್ಲಿ ಗುರುವಾರ ತಡರಾತ್ರಿ 12-45ಕ್ಕೆ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ. ವಾರದಲ್ಲಿ ಆಗಾಗ ವಿದ್ಯುತ್ ಕಡಿತ ಸಾಮಾನ್ಯವಾಗಿದೆ ಎಂದರು ಸ್ಥಳೀಯರು ದೂರಿದರು.
ಇದರ ಒಂದು ಭಾಗವನ್ನು ಇದಕ್ಕೆ ಮೊದಲು ಕೆಬಿಎಸ್ ಮೂಲಕ ವಿವಿವ ಕಾರಿಡಾರ್ ರಸ್ತೆಗೆ ಸಾಗಿಸಲಾ ಗಿತ್ತು. ಬಳಿಕ ದೊಡ್ಡದಾದ ಈ ಯಂತ್ರ ಸಾಗಿಸಬೇಕಾಗಿದ್ದು ಕೆಬಿಎಸ್ ದಾಟುವಷ್ಟರಲ್ಲಿ ಕಾರಿಡಾರ್ ರಸ್ತೆ ಕಡೆಗೆ ಸಾಗ ಬೇಕಾಗಿದ್ದ ಇದು ಜೋಕಟ್ಟೆ ರಸ್ತೆಕಡೆಗೆ ಮುಂಜಾನೆ 3 ಗಂಟೆ ಸುಮಾರಿಗೆ ಸಾಗಿತ್ತು ಅಷ್ಟರಲ್ಲಿ ಇದನ್ನು ಹಿಂದೆ ತೆಗೆಯುವ ಪ್ರಯತ್ನ ಆರಂಭವಾದರೂ ಸ್ಥಳೀಯರ ಪ್ರತಿ ಭಟನೆ ಕಾರಣ ಸ್ಥಳಾಂತರ ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಸ್ಥಾವರ ಮುಂದಕ್ಕೆ ಸಾಗಿಸಬಾರದು ಪೊಲೀಸ್ ಠಾಣೆಗೆ ಕೊಂಡೊಯ್ಯಬೇಕು ಎಂದು ಸ್ಥಳೀಯರು ಆಗ್ರಹಿಸಿದರು. ಈ ಬಗ್ಗೆ ಲಿಖಿತ ದೂರು ನೀಡಿದಲ್ಲಿ ಕಂಪನಿಯರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪಣಂಬೂರು ಡಿಸಿಪಿ ಮದನ್ ಗಾಂವ್‌ಕರ್ ಉತ್ತರಿಸಿದರೂ ಅದನ್ನು ಸ್ಥಳೀಯರು ಕೇಳಲಿಲ್ಲ.
ಇಂಥಾ ಸ್ಥಾವರ ಅನಧಿಕತವಾಗಿ ಸಾಗಿಸಲು ಬಿಡುವುದೇಕೆ ಎಂದು ಪೊಲೀಸರನ್ನೇ ಡಿಸಿಪಿ ತರಾಟೆಗೆ ತೆಗೆದುಕೊಂಡರು. ಪ್ರತಿಭಟನೆಯಲ್ಲಿ ನಾಗರಿಕ ಸಮಿತಿ ಮೊದಲಾದ ಸಂಘಟನೆಗಳು ಭಾಗವಹಿಸಿದ್ದವು. ಪೊಲೀಸರ ಪ್ರಕಾರ ಇದರ ಸಾಗಾಟಕ್ಕೆ ಮೆಸ್ಕಾನ ಬೈಕಂಪಾಡಿ ಕಚೇರಿಯ ಅಧಿಕಾಗಳು ಗುಟ್ಟಿನಲ್ಲಿ ಅನುಮತಿ ನೀಡಿದ್ದರು. ಆದರೆ ಪೊಲೀಸರಿಗೆ ಮತ್ತು ಪಂಚಾಯಿತಿಗೆ ಈ ಬಗ್ಗೆ ತಿಳಿಸಿರಲಿಲ್ಲ.
ಈ ಘಟನೆಯಿಂದ ಜೋಕಟ್ಟೆ ಮೂಲಕ ಬಸ್ ಸಂಚಾರ ಸ್ಥಗಿತವಾಯಿತು. ಬಂದೋ ಬಸ್ತ್‌ನಲ್ಲಿ ಪಣಂಬೂರು ಪಿಐ ಎಸಿ ಲೋಕೇಶ್, ಪಣಂಬೂರು ಎಸ್‌ಐ ಮೊದಲಾದವರು ನೇತತ್ವ ವಹಿಸಿದ್ದರು.