ಉಳ್ಳಾಲ,ಆ.01 : ಸ್ಕೂಟರಿನಲ್ಲಿ ಅಕ್ರಮವಾಗಿ 30ಕೆಜಿ ದನದ ಮಾಂಸ ಸಾಗಾಟ ನಡೆಸುತ್ತಿದ್ದ ಯುವಕನನ್ನು ಬಜರಂಗದಳದ ಕಾರ್ಯಕರ್ತರು ಹಿಡಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿರುವ ಘಟನೆ ಪಂಡಿತ್ ಹೌಸ್ ಬಳಿ ಶನಿವಾರ ನಡೆದಿದೆ.
ಘಟನೆ ವಿವರ : ಉಳ್ಳಾಲದ ಮೇಲಂಗಡಿ ನಿವಾಸಿ ಮಲಿಕ್ ಬಂಧನಕ್ಕೊಳಗಾದ ವ್ಯಕ್ತಿ. ಮದನಿ ನಗರದಿಂದ ಉಳ್ಳಾಲದ ಕಡೆಗೆ ಅಕ್ರಮವಾಗಿ ಸ್ಕೂಟರಿನಲ್ಲಿ ಮಾಂಸವನ್ನು ಸಾಗಾಟ ನಡೆಸುತ್ತಿರುವ ಮಾಹಿತಿಯನ್ನು ಬಜರಂಗದಳದ ಕಾರ್ಯಕರ್ತರು ಪಡೆದಿದ್ದರು. ಎಂದಿನಂತೆ ಇಂದು ಮಲಿಕ್ ಉಳ್ಳಾಲದಿಂದ ಮದನಿ ನಗರಕ್ಕೆ ಆಕ್ಟಿವಾ ಸ್ಕೂಟರಿನಲ್ಲಿ ತೆರಳಿ , ಬಳಿಕ ವಾಪಸಾಗುವ ಸಂದರ್ಭ ಕಾದು ಕುಳಿತ ಬಜರಂಗದಳದ ಕಾರ್ಯಕರ್ತರು ಪಂಡಿತ್ ಹೌಸ್ ಸಮೀಪ ಅಡ್ಡ ಹಾಕಿದ್ದಾರೆ. ಬಳಿಕ ಉಳ್ಳಾಲ ಪೊಲೀಸರಿಗೆ ಆರೋಪಿಯನ್ನು ಸ್ಕೂಟರ್ ಸಮೇತ ವಶಕ್ಕೊಪ್ಪಿಸಿದ್ದಾರೆ.
ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ