ಕನ್ನಡ ವಾರ್ತೆಗಳು

ಸತತ ಪಯತ್ನ ಹಾಗೂ ಕಠಿಣ ಪರಿಶ್ರಮದ ಮೂಲಕ ಪೋಷಕರ ಕನಸನ್ನು ಸಕಾರಗೊಳಿಸಿ : ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ವಿಧ್ಯಾರ್ಥಿ ಸಂಘ ಉದ್ಘಾಟಿಸಿ ಡಾ.ಪ್ರಶಾಂತ್ ನಾಯ್ಕ್

Pinterest LinkedIn Tumblr

Gk_Student_Council_1

ವರದಿ / ಚಿತ್ರ : ಸತೀಶ್ ಕಾಪಿಕಾಡ್

ಮಂಗಳೂರು,ಆ.1; ವಿಧ್ಯಾರ್ಜನೆಗೆ ವಿಪುಲ ಅವಕಾಶಗಳಿರುವ ಈ ಕಾಲ ಘಟ್ಟದಲ್ಲಿ ವಿಧ್ಯಾರ್ಥಿಗಳು ಅವಕಾಶಗಳನ್ನು ಉಪಯೋಗಿಸಿಕೊಂಡು ಸತತ ಪಯತ್ನ ಹಾಗೂ ಕಠಿಣ ಪರಿಶ್ರಮದಿಂದ ತನ್ನ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳುವ ಮೂಲಕ ಪೋಷಕರ ಕನಸನ್ನು ಸಕಾರಗೊಳಿಸಬೇಕು ಎಂದು ಮಂಗಳೂರು ವಿಶ್ವ ವಿಧ್ಯಾನಿಲಯದ ಉಪ ಕುಲಸಚಿವ (ಪರೀಕ್ಷಾಂಗ) ಡಾ.ಪ್ರಶಾಂತ್ ನಾಯ್ಕ್ ಅವರು ಕರೆ ನೀಡಿದರು.

ಅವರು ನಗರದ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ 2015-16ನೇ ಸಾಲಿನ ವಿಧ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು . ಖ್ಯಾತ ವಿಜ್ಞಾನಿ ಅಬ್ದುಲ್ ಕಲಾಂ ಅವರ ಅದರ್ಶ, ಧ್ಯೆಯಗಳನ್ನು ಅಳವಡಿಸಿಕೊಂಡು ನಿರಂತರ ಪ್ರಯತ್ನಗಳ ಮೂಲಕ ಸಾಧನೆ ಮಾಡಿದಾಗ ವಿಧ್ಯಾರ್ಥಿಗಳು ತಮ್ಮ ಗುರಿ ಮುಟ್ಟಲು ಸಾಧ್ಯ ಎಂದರು.

ಜ್ಞಾನವೇ ಬೆಳಕು, ಜ್ಞಾನದ ಮೂಲಕ ನಿಮ್ಮ ಭವಿಷ್ಯ ರೂಪಿಸಿಕೊಂಡು ಸಮಾಜದ ಕತ್ತಲನ್ನು ಹೊಡೆದೊಡಿಸುವ ಕಾರ್ಯ ವಿದ್ಯಾರ್ಥಿಗಳಿಂದ ಅಗಬೇಕು ಎಂದು ಹೇಳಿದ ಅವರು, ಈ ವಿಧ್ಯಾರ್ಥಿ ಸಂಘದ ಮೂಲಕ ಕಾಲೇಜಿನ ಅಭಿವೃದ್ಧಿಗೆ ಸಹಕಾರಿಯಾಗುವಂತಹ ಉತ್ತಮ ಕೆಲಸ ಕಾರ್ಯಗಳಾಗಲಿ, ಕಾಲೇಜಿನ ಕೀರ್ತಿ ಇನ್ನಷ್ಟು ಬೆಳಗಿಸಿ ಎಂದು ಶುಭ ಹಾರೈಸಿದರು.

Gk_Student_Council_2 Gk_Student_Council_3 Gk_Student_Council_4 Gk_Student_Council_5 Gk_Student_Council_6 Gk_Student_Council_7 Gk_Student_Council_8 Gk_Student_Council_9 Gk_Student_Council_10 Gk_Student_Council_11 Gk_Student_Council_12 Gk_Student_Council_13 Gk_Student_Council_14 Gk_Student_Council_15

ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಉದ್ಯಮಿ ಹಾಗೂ ಕಾಲೇಜಿನ ಹಿರಿಯ ವಿಧ್ಯಾರ್ಥಿ ಸಂಘದ ಉಪಧ್ಯಾಕ್ಷ ಶ್ರೀ ಸುನೀಲ್ ದತ್ತ್ ಪೈ ಅವರು ಮಾತನಾಡಿ, ಸತತ ಸಾಧನೆ, ಕಠಿಣ ಪರಿಶ್ರಮದಿಂದ ಉತ್ತಮ ಅದರ್ಶಗಳನ್ನು ರೂಪಿಸಿಕೊಂಡು ನಡೆದಾಗ ಯಶಸ್ಸು ಸಾಧ್ಯ . ವಿಧ್ಯಾರ್ಥಿಗಳು ಅತ್ಮ ವಿಶ್ವಾಸ ಬೆಳಸಿಕೊಂಡು ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಸಾಧನೆಗಳ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಕಾಲೇಜಿನ ಸಂಚಾಲಕ ಶ್ರೀ. ಎಸ್ ಜಯವಿಕ್ರಮ ಅವರು ಮಾತನಾಡಿ, ವಿಧ್ಯಾರ್ಥಿಗಳು ತಾವು ಆಶಕ್ತರೆಂಬ ಭಾವನೆ ತೊಡೆದು ಹಾಕಿ, ಸ್ವಸಾಮಾರ್ಥ್ಯ ಬೆಳೆಸಿಕೊಂಡು ಅತ್ಮ ವಿಶ್ವಾಸದೊಂದಿಗೆ ಮುನ್ನುಗಿ ಅವಕಾಶಗಳನ್ನು ಬಳಸಿಕೊಂಡು ಜೀವನದಲ್ಲಿ ಮೋಸ ವಂಚನೆಗೆ ಒಳಗಾಗದೇ ಸತ್ಕಾರ್ಯಗಳಲ್ಲಿ ತಮ್ಮನ್ನು ತಾವು ತೋಡಗಿಸಿಕೊಳ್ಳುವ ಮೂಲಕ ಮಾದರಿ ವ್ಯಕ್ತಿಗಳಾಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶೀ ವೆಂಕಟೇಶ ಶಿವಭಕ್ತಿ ಯೋಗ ಸಂಘದ ಅಧ್ಯಕ್ಷರಾದ ಶ್ರೀ .ಬಿ. ದೇವದಾಸ್ ಅವರು ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳಿಗೆ ಅವರು ಕಡತ ವಿತರಿಸಿದರು.

Gk_Student_Council_16 Gk_Student_Council_19 Gk_Student_Council_20 Gk_Student_Council_22 Gk_Student_Council_23 Gk_Student_Council_24 Gk_Student_Council_25 Gk_Student_Council_26 Gk_Student_Council_27 Gk_Student_Council_28 Gk_Student_Council_29 Gk_Student_Council_30 Gk_Student_Council_31

ಕಾರ್ಯಕ್ರಮದ ಮೊದಲಿಗೆ ಇತ್ತೀಚಿಗೆ ನಿಧನರಾದ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರಿಗೆ ಶೃದ್ದಾಂಜಲಿ ಅರ್ಪಿಸಲಾಯಿತು.

ವಿದ್ಯಾರ್ಥಿಗಳ ಅಭಿವೃದ್ಧಿ ಮಂಡಳಿ ಅಧಿಕಾರಿ ಡಾ.ಉಮ್ಮಪ್ಪ ಪೂಜಾರಿ.ಪಿ, ಪ್ರಾಂಶುಪಾಲ ಡಾ.ಗಂಗಾಧರ ಬಿ, ನೂತನ ವಿಧ್ಯಾರ್ಥಿ ಸಂಘದ ಅಧ್ಯಕ್ಷ ನಾಗೇಂದ್ರ, ಕಾರ್ಯದರ್ಶಿ ಮುರಳಿಧರ್ ಕೆ, ಜಂಟಿ ಕಾರ್ಯದರ್ಶಿ ದೀಕ್ಷಾ ಶೆಟ್ಟಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ. ಗಾಂಗಾಧರ್ ಸ್ವಾಗತಿಸಿದರು, ವಿಧ್ಯಾರ್ಥಿನಿ ದೀಕ್ಷಿತ ಕಾರ್ಯಕ್ರಮ ನಿರೂಪಿಸಿದರು, ದೀಕ್ಷಾ ಶೆಟ್ಟಿ ವಂದಿಸಿದರು. ವಿಧ್ಯಾರ್ಥಿಗಳಾದ ಪೂಜಿತ, ರೇಶ್ಮಾ ಹಾಗೂ ಪ್ರಜ್ಞಾ ಪ್ರಾರ್ಥನೆ ನೇರವೇರಿಸಿದರು.

Write A Comment