ಕನ್ನಡ ವಾರ್ತೆಗಳು

ರೈತರ ಆತ್ಮಸ್ಥೈರ್ಯ ತುಂಬಲು ಸಾಂತ್ವನ ಯಾತ್ರೆ ‘ಬದುಕು ಬೇಸಾಯ’ಕ್ಕೆ ಚಾಲನೆ.

Pinterest LinkedIn Tumblr

Raitha_besaya_rai_1

ಮಂಗಳೂರು,ಆಗಸ್ಟ್. 04 : ರೈತರ ಆತ್ಮಹತ್ಯೆ ತಡೆಯಲು ಅವರಲ್ಲಿ ಆತ್ಮಸ್ಥೆರ್ಯ ಮೂಡಿಸುವ ಸಲುವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಡೆಸುವ ‘ಬದುಕು-ಬೇಸಾಯ’ ಅಭಿಯಾನ ಕಾರ್ಯಕ್ರಮಕ್ಕೆ ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಸೋಮವಾರ ಜಿ.ಪಂ. ಆವರಣದಲ್ಲಿ ಚಾಲನೆ ನೀಡಿದರು.

ರೈತರ ಮನ ಪರಿವರ್ತನೆ ಮಾಡಲು ಹಾಗೂ ಅವರಲ್ಲಿ ಆತ್ಮಸ್ಥೈರ್ಯ ತುಂಬುವುದು ಇದರ ಉದ್ದೇಶವಾಗಿದೆ. ಬದುಕಿನಲ್ಲಿ ಬರುವ ಕಷ್ಟಗಳಿಗೆ ಆತ್ಮಹತ್ಯೆ ಯೊಂದೇ  ಪರಿಹಾರವಲ್ಲ, ಸಮಸ್ಯೆಯನ್ನು ಮೆಟ್ಟಿನಿಂತರೆ ಬದುಕು ಹಸನಾಗುತ್ತದೆ ಎನ್ನುವ ಜಾಗೃತಿಯನ್ನು ವಿವರಿಸುವುದು ಯಾತ್ರೆಯ ಉದ್ದೇಶ.

Raitha_besaya_rai_2

ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯು ಈ ಯಾತ್ರೆಯನ್ನು ಸಂಘಟಿಸಿದ್ದು, ತಜ್ಞರ ಸಹಕಾರ ಪಡೆದು ಜನರ ಮನ ಮುಟ್ಟುವ ಬೀದಿ ನಾಟಕ ಹಾಗೂ ಜನಪದ ಹಾಡಿನ ಮೂಲಕ ಈ ಜಾಗೃತಿ ಕಾರ್ಯಕ್ರಮ ನಡೆಯಿತು. ಆತ್ಮಹತ್ಯೆ ತಡೆಯುವ ಸಂದೇಶವಿರುವ ಬೀದಿನಾಟಕ, ಆತ್ಮಹತ್ಯೆ ಮಾಡಿಕೊಳ್ಳದೆ ಬದುಕಿನಲ್ಲಿ ಸಾಧಿಸುವುದಕ್ಕೆ ಇರುವ ಅವಕಾಶ ಹಾಗೂ ಸವಾಲುಗಳನ್ನು ಎದುರಿಸಿ ಬದುಕಿನಲ್ಲಿ ಮುಂದೆ ಸಾಗುವ ಬಗ್ಗೆ ರೈತರಲ್ಲಿ ಹುಮ್ಮಸ್ಸು ಮೂಡಿಸುವ ಸಂದೇಶವನ್ನು ಈ ಸಂಧರ್ಭದಲ್ಲಿ ನಿಡಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷಿಯನ್ನು ಪ್ರೋತ್ಸಾಹಿಸಿ, ರೈತರಲ್ಲಿ ಆತ್ಮಸ್ಥೈರ್ಯ ಮೂಡಿಸಲು ನೀಡಿರುವ ಸಂದೇಶವನ್ನು ಧ್ವನಿಮುದ್ರಿಸಲಾಗಿದ್ದು, ಅದನ್ನು ಯಾತ್ರೆಯುದ್ದಕ್ಕೂ ಬಿತ್ತರಿಸಲಾಯಿತು. ಅಷ್ಟು ಮಾತ್ರವಲ್ಲದೇ ಇದಕ್ಕೆ ಪೂರಕವಾದ ಕರಪತ್ರಗಳನ್ನು ವಿತರಿಸಲಾಯಿತು. ರೈತರ ಆತ್ಮಹತ್ಯೆ ತಡೆ ಜಾಗೃತಿ ಮೂಡಿಸುವ ಫಲಕಗಳನ್ನು ಹೆದ್ದಾರಿಗಳ ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗಿತು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ, ಉಪಾಧ್ಯಕ್ಷ ಸತೀಶ್ ಕುಂಪಲ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ ಮತ್ತಿತರರು ಉಪಸ್ಥಿತರಿದ್ದರು.

Write A Comment