ಕನ್ನಡ ವಾರ್ತೆಗಳು

ಗೋಕರ್ಣನಾಥೇಶ್ವರ ಪದವಿ ಕಾಲೇಜಿನ ದೈಹಿಕ ನಿರ್ದೇಶಕರಾದ ಪುರುಷೋತ್ತಮ ಪೂಜಾರಿಯವರಿಗೆ ಬೀಳ್ಗೊಡುಗೆ.

Pinterest LinkedIn Tumblr

pt_techer_sendoff

ಮಂಗಳೂರು,ಆಗಸ್ಟ್ .06: ಶ್ರೀ ಗೋಕರ್ಣನಾಥೇಶ್ವರ ಪದವಿ ಕಾಲೇಜಿನಲ್ಲಿ ಕಳೆದ ಮೂರು ದಶಕಗಳಿಂದ ದೈಹಿಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಕ್ರೀಡಾಪಟುಗಳಾದ ಮಮತಾ ಪೂಜಾರಿ, ಸಹನಾ ಕುಮಾರಿ, ಶ್ರೀಮಾ ಪ್ರಿಯದರ್ಶಿನಿ, ಹೆರಾಲ್ಡ್ ಪಾಯಸ್, ದೀಪಾ ಕುಲಾಲ್ ಮುಂತಾದವರನ್ನು ತರಬೇತುಗೊಳಿಸಿ ಕ್ರೀಡಾ ಕ್ಷೇತ್ರಕ್ಕೆ ಅಪೂರ್ವ ಕೊಡುಗೆಯನ್ನು ನೀಡಿರುವ, ಪ್ರಸ್ತುತ ಮಂಗಳೂರು ವಿಶ್ವ ವಿದ್ಯಾನಿಲಯ ದೈಹಿಕ ಶಿಕ್ಷಕರುಗಳ ಸಂಘದ ಅಧ್ಯಕ್ಷರು ಹಾಗೂ ದ ಕ ಜಿಲಾ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಶನ್ ನ ಪಧಾನ ಕಾರ್ಯದರ್ಶಿಗಳಾದ ಶ್ರೀ ಪುರುಷೋತ್ತಮ ಪೂಜಾರಿಯವರು ಸೇವಾ ನಿವೃತ್ತಿಯನ್ನು ಹೊಂದಿದ ದಿನಾಂಕ ಜುಲಾಯಿ 31 ರಂದು ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕ ವರ್ಗ, ಶಿಕ್ಷಕೇತರರ ವತಿಯಿಂದ ಗೌರವ ಪೂರ್ವಕ ಬೀಳ್ಗೊಡುಗೆ ಸಮಾರಂಭವನ್ನು ಕಾಲೇಜಿನಲ್ಲಿ ಏರ್ಪಡಿಸಲಾಗಿತ್ತು.

ಕಾಲೇಜಿನ ಸಂಚಾಲಕರಾದ ಶ್ರೀ ಎಸ್ ಜಯವಿಕ್ರಮ್ ಮಾತನಾಡಿ, ‘ಸಂಸ್ಥೆಯ ಧೇಯೋದ್ದೇಶಗಳನ್ನು ಅರಿತು ಪ್ರಾಮಾಣಿಕ ರೀತಿಯಲ್ಲಿ ಕಾರ್ಯ ನಿರ್ವಹಿಸಿದಾಗ ಸಂಸ್ಥೆಗೆ ಗೌರವ ಬರುತ್ತದೆ, ಈ ನಿಟ್ಟಿನಲ್ಲಿ ಪುರುಷೋತ್ತಮ ಪೂಜಾರಿಯವರ ಸಾಧನೆ ಅಪೂರ್ವವಾದುದು’ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಗಂಗಾಧರ್ ಮಾತನಾಡಿ, ‘ಸಾಧಕರಿಗೆ ನಿವೃತ್ತಿಯೆಂಬುದಿಲ್ಲ, ನಿವೃತ್ತಿಯ ನಂತರವೂ ತಮ್ಮನ್ನು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಲ್ಲಿ ಜೀವನ ಸಾರ್ಥಕವಾಗುವುದು, ಕ್ರೀಡಾ ಕ್ಷೇತ್ರದಲ್ಲಿ ಕಾಲೇಜಿನ ಹೆಸರನ್ನು ಅತ್ತ್ಯುನ್ನತ ಮಟ್ಟಕ್ಕೆ ಏರಿಸಿರುವ ಶ್ರೀ ಪುರುಷೋತ್ತಮ ಪೂಜಾರಿಯವರ ಸಾಧನೆ, ಸೇವೆ ಶ್ಲಾಘನೀಯ’ ಎಂದು ಅಭಿನಂದಿಸಿದರು.

ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘದ ಅಧ್ಯಕ್ಷರಾದ ಶ್ರೀ ಬಿ ದೇವದಾಸ್, ಕಾರ್ಯದರ್ಶಿ ಶ್ರೀ ವಸಂತ ಕಾರಂದೂರು, ಆಡಳಿತ ಮಂಡಳಿಯ ಡಾ. ಬಿ ಜಿ ಸುವರ್ಣ, ಶ್ರೀ ಅರುಣ್ ಕುಮಾರ್, ಶ್ರೀ ಪ್ರವೀಣ್ ಕುಮಾರ್ ಹಾಗೂ ಶ್ರೀ ಬಿ ಪಿ ಹರೀಶ್ ಕುಮಾರ್ ಉಪಸ್ಥಿತರಿದ್ದ ಸಭೆಯಲ್ಲಿ ಇಡೀ ಶಿಕ್ಷಣ ಸಂಸ್ಥೆಯ ಸರ್ವ ಶಿಕ್ಷಕ ಶಿಕ್ಷಕೇತರರ ಪರವಾಗಿ ಶ್ರೀ ಪುರುಷೋತ್ತಮ ಪೂಜಾರಿಯವರನ್ನು ಅಭಿನಂದಿಸಲಾಯಿತು.

ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಕ್ಷಮಾ ಎನ್ ರಾವ್, ಬಿ ಎಡ್ ಪ್ರಾಂಶುಪಾಲರಾದ ಶ್ರೀ ಉದಯಕುಮಾರ್, ಪ್ರೊ. ನಾಗರಾಜ್ ಕೆ ಪಿ, ಲೋಕನಾಥ್ ಪೂಜಾರಿ, ಡಾ ದಿನಕರ್ ಪಚ್ಚನಾಡಿ, ಯತೀಶ್ ಅಮೀನ್, ಪ್ರವೀಣ್ ಬೆಳ್ತಂಗಡಿ, ಮೋಹನ್ ಹಾಗೂ ಗೋಪಾಲ್ ಇವರುಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಶ್ರೀ ಪುರುಷೋತ್ತಮ ಪೂಜಾರಿಯವರು ಸಂಸ್ಥೆಯಲ್ಲಿ ಸೇವೆ ಮಾಡಲು ಕೊಟ್ಟ ಅವಕಾಶಕ್ಕಾಗಿ ಸಂಬಂದಪಟ್ಟವರಿಗೆ ಕೃತಜ್ಣತೆ ಸಲ್ಲಿಸಿದರು. ಸೇವಾ ಅವಧಿಯಲ್ಲಿ ಸಹಕರಿಸಿದ ಎಲ್ಲಾ ಸಹೋದ್ಯೋಗಿಗಳನ್ನು ಹಾಗೂ ವಿದ್ಯಾರ್ಥಿ ವೃಂದವನ್ನು ಕೊಂಡಾಡಿದರು.

ಉಪನ್ಯಾಸಕ ಡಾ. ಉಮ್ಮಪ್ಪ ಪೂಜಾರಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರೆ, ಉಪನ್ಯಾಸಕಿ ದಿವ್ಯಾ ಪ್ರಾರ್ಥಿಸಿದರು.

Write A Comment