ಮಂಗಳೂರು: ನೆರಿಯಾ ಸುಂದರ ಮಲೆ ಕುಡಿಯರ ಮೇಲೆ ದೌರ್ಜನ್ಯ ನಡೆಸಿ ಅವರ ಕೈಯನ್ನೇ ಕಳೆ ಕೊಚ್ಚುವ ಯಂತ್ರದಿಂದ ಕೊಚ್ಚಿ ಹಾಕಿದ ಭೂಮಾಲಕ ಗೋಪಾಲ ಗೌಡನನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಲೆ ಕುಡಿಯರ ಸಂಘದ ವತಿಯಿಂದ ಗುರುವಾರದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಕೇಮಾರು ಈಶ ವಿಠಲದಾಸ ಸ್ವಾಮೀಜಿ ಅವರು, ಓರ್ವ ಬಡ ವ್ಯಕ್ತಿಯ ಮೇಲೆ ಇಷ್ಟು ದೊಡ್ಡ ರೀತಿಯ ದೌರ್ಜನ್ಯ ನಡೆದಿದ್ದರೂ ಆರೋಪಿಯನ್ನು ಇದುವರೆಗೆ ಬಂಧಿಸಿದೇ ಜಿಲ್ಲಾಡಳಿತಾ ಹಾಗೂ ಪೊಲೀಸ್ ಇಲಾಖೆ ಅಸಹಾಯಕತೆ ತೋರಿಸಿದೆ.
ತಕ್ಷಣವೇ ಪೊಲೀಸರು ಆರೋಪಿ ಗೋಪಾಲ ಗೌಡನನ್ನು ಬಂಧಿಸಬೇಕು, ಮಾತ್ರವಲ್ಲದೇ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮಾತ್ರವಲ್ಲದೇ ಕಾನೂನು ಕೈಗೆತ್ತಿಕೊಳ್ಳುವರ ವಿರುದ್ಧ ಜಿಲ್ಲಾಡಳಿತ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕೆಂದು ಸ್ವಾಮೀಜಿ ಒತ್ತಾಯಿಸಿದ್ದಾರೆ.