ವರದಿ : ಸತೀಶ್ ಕಾಪಿಕಾಡ್
ಮಂಗಳೂರು ,ಆಗಸ್ಟ್.07: ನಗರದಲ್ಲಿ ಅಳವಡಿಸಲಾಗಿದ್ದ ರಸ್ತೆ ಸೂಚನಾ ಫಲಕವೊಂದು ತನ್ನ ಮೈಬಣ್ಣ ಕಳೆದುಕೊಂಡು ಅಸ್ಪಷ್ಟವಾಗಿದ್ದು, ದಾರಿ ಹೋಕರಿಗೆ ಓದಲು ಕಷ್ಟಸಾಧ್ಯವಾಗಿರುವುದನ್ನು ಮನಗಂಡ ಮಂಗಳೂರಿನ ರಾಮಕೃಷ್ಣ ಮಿಶನ್ ಪೌಂಡೇಶನ್ ಸಂಸ್ಥೆಯು ಸ್ವಚ್ಛ ಮಂಗಳೂರು ಅಭಿಯಾನದಡಿಯಲ್ಲಿ ಈ ದಾರಿ ಸೂಚನಾ ಫಲಕವನ್ನು ಸರ್ಕಾರದ ಬಿಡುಗಾಸು ಅನುದಾನವನ್ನು ಪಡೆಯದೆ ಸಾರ್ವಜನಿಕರ ಅನುಕೂಲತೆಗಾಗಿ ನವೀಕರಿಸಿತ್ತು.
ಅದರೇ ಮಂಗಳೂರು ವಿಶ್ವ ವಿದ್ಯಾಲಯದ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವಿದ್ಯಾರ್ಥಿಗಳು ತಮ್ಮ ಚುನಾವಣಾ ಪ್ರಚಾರದ ಕರಪತ್ರಗಳನ್ನು ಈ ದಾರಿ ಸೂಚನಾ ಫಲಕದ ಮೇಲೆ ಅಂಟಿಸುವ ಮೂಲಕ ಅವಿದ್ಯಾವಂತರಂತೆ ವರ್ತಿಸಿದ್ದಾರೆ. ಇವರೆಂತಹ ವಿದ್ಯಾರ್ಥಿಗಳು. ತಮ್ಮ ಪರಿಸರದ ಬಗ್ಗೆ ಕಾಳಜಿ ಇಲ್ಲದೆ ತಮ್ಮ ಸ್ವಾರ್ಥಕ್ಕಾಗಿ ಸರಿ ಇರುವುದನ್ನು ಹಾಳುಗೆಡವ ಇವರು ಭವಿಷ್ಯದಲ್ಲಿ ಉತ್ತಮ ನಾಗರೀಕರಾಗಲು ಸಾಧ್ಯವೇ… ಇಂತಹ ವಿಧ್ಯಾರ್ಥಿಗಳಿಂದ ಸಮಾಜ ಏನನ್ನು ನಿರೀಕ್ಷಿಸಲು ಸಾಧ್ಯ..
ಇಡೀ ಭಾರತ ಜಾತಿ, ಮತ, ಭೇಧವಿಲ್ಲದೇ ರಾಜಕೀಯವನ್ನು ಬದಿಗಿಟ್ಟು ದೇಶದ ಸ್ವಚ್ಚತೆಯ ಬಗ್ಗೆ ಕೈಜೋಡಿಸುತ್ತಿದ್ದರೆ, ಇಂತಹ ಕೆಲವೇ ಕೆಲವು ವಿದ್ಯಾರ್ಥಿಗಳು ತಮಗೆ ಇದು ಸಂಬಂಧವೇ ಇಲ್ಲ ಎಂಬಾಂತೆ ವರ್ತಿಸಿದರೆ ಉಳಿದ ವಿದ್ಯಾರ್ಥಿಗಳ ಹೆಸರಿಗೂ ಕಪ್ಪು ಚುಕ್ಕೆಯಾತ್ತದೆ ಎಂಬ ಒಂದು ಸಣ್ಣ ಪರಿಜ್ಞಾನ ಕೂಡ ಈ ವಿದ್ಯಾರ್ಥಿಗಳಲ್ಲಿ ಇಲ್ಲವೇ….
ಸ್ವಚ್ಚತೆ ನಮ್ಮ ಧ್ಯೇಯ ಎಂದು ಭಾಷಣ ಮಾಡಿದರೇ ಸಾಲದು, ಬದಲಿಗೆ ಸ್ವಚ್ಚತೆ ಅಭಿಯಾನ ನಡೆಸುವವರ ಬಗ್ಗೆಯು ಸಾಸಿವೇಯಷ್ಟು ಗೌರವ ನೀಡಬೇಕು.
ಇಂದಿನ ಕೆಲವು ವಿದ್ಯಾರ್ಥಿಗಳಿಗೆ ಸ್ವಚ್ಚತೆ ಬಗ್ಗೆ ಸೂಕ್ಷ್ಮವಾದ ಅರಿವು ಇಲ್ಲದಿದ್ದರೆ… ಸ್ವಚ್ಚತೆಯ ಬಗ್ಗೆಯೇ ಅರಿವು ಮೂಡಿಸುವ ನಿಟ್ಟಿನಲ್ಲಿ ಇತ್ತೀಚಿಗೆ ತಮ್ಮಣ್ಣ ಶೆಟ್ಟಿಯವರ ನೇತ್ರತ್ವದಲ್ಲಿ ಮೂಡಿ ಬಂದಂತಹ, ಇದೀಗ ಮಂಗಳೂರಿನಾದ್ಯಂತ ಯಶಸ್ವಿ ಪ್ರದರ್ಶನ ಕಾಣುತಿರುವ “ಕನಸು – ಕಣ್ಣು ತೆರೆದಾಗ” ಕನ್ನಡ ಸಿನಿಮಾ ವೀಕ್ಷಿಸುವ ಮೂಲಕ ಸ್ವಲ್ಪವಾದರೂ ಅರಿವು ಮೂಡಿಸಿಕೊಳ್ಳಲ್ಲಿ.