ಮಂಗಳೂರು,ಆಗಸ್ಟ್.10: ಉತ್ತಮ ಆರೋಗ್ಯಕ್ಕಾಗಿ “ಜಾಗಿಂಗ್-ವಾಕಿಂಗ್ ಕ್ಲಬ್ ಮಣಿಪಾಲ” ನ್ನು ಪ್ರೋ. ಜಿ. ಪರ್ವಧವರ್ಧಿನಿ, ಪ್ರಾಂಶುಪಾಲೆ, ವೆಲ್ಕಂಗ್ರೂಪ್ ಗ್ರಾಜ್ಯೂವೇಟ್ ಸ್ಕೂಲ್ ಆಫ್ ಹೋಟೇಲ್ ಅಡ್ಮಿನಿಸ್ಟ್ರೇಷನ್ ಇವರು ಮಣಿಪಾಲದ ಫಾರ್ಚೂನ್ ಇನ್ ವ್ಯಾಲಿ ವ್ಯೂ ನ ಮುಂಬಾಗದಲ್ಲಿ ಉಧ್ಘಾಟಿಸಿದರು.
ಕರ್ನನಲ್ ಬದರೀ ನಾರಾಯಣನನ್ ಡೈರೆಕ್ಟರ್-ಪರ್ಚೇಸ್, ಮಣಿಪಾಲ ಯುನಿವರ್ಸಿಟಿ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಣಿಪಾಲ ಯುನಿವರ್ಸಿಟಿಯ ಕ್ರೀಡಾ ನಿರ್ದೇಶಕರಾದ ಡಾ. ಕೆಂಪರಾಜು ಎಚ್ ಬಿ ಇವರ ಮುಂದಾಳತ್ವದಲ್ಲಿ ಪ್ರಾರಂಭವಾದ ಈ ಕ್ಲಬ್ ನ ಈ ಕಾರ್ಯಕ್ರಮವನ್ನು ರೋಟರಿ ಕ್ಲಬ್ ಮಣಿಪಾಲ ಟೌನ್ ಆಯೋಜಿಸಿದ್ದರು.
ಉಧ್ಘಾಟನೆಯ ನಂತರ ಎಲ್ಲರೂ ಮಣಿಪಾಲದ ಎಂಡ್ ಪಾಯಿಂಟ್ ಗೆ ತೆರಳಿ ಅಲ್ಲಿ ಅತಿಥಿಗಣ್ಯರೊಳಗೊಂಡು ಸಸಿಗಳನ್ನು ನಡಲಾಯಿತು. ನಂತರ ಡಾ. ಕೆಂಪರಾಜು ಎಚ್ ಬಿ ಮತ್ತು ಪ್ರಜ್ವಲ್ ಕುಮಾರ್ ಟಿ ಇವರ ಮಾರ್ಗದರ್ಶನದಲ್ಲಿ ವ್ಯಾಯಾಮ ಮತ್ತು ಯೋಗವನ್ನು ಅಭ್ಯಾಸಿಸಲಾಯಿತು.
ಸುಮಾರು 100ಕ್ಕೂ ಮಿಕ್ಕಿ ಪಾಲ್ಗೋಂಡಿದ್ದ ಈ ಕಾರ್ಯಕ್ರಮದಲ್ಲಿ ರೋ. ಕೆ. ಎಸ್. ಜೈ ವಿಠಲ್, ರೋಟರಿ ಕ್ಲಬ್ ಮಣಿಪಾಲ ಟೌನ್ ಇದರ ಕಾರ್ಯದರ್ಶಿ ರಾಘವೇಂದ್ರ ಜಿ, ಕಾರ್ಯಕ್ರಮ ನಿರ್ವಾಹಕರಾಗಿ ತನುಜಾ ಮೆಬನ್, ಸರಕಾರಿ ಪಾಲಿಟೆಕ್ನಿಕ್ ಮಣಿಪಾಲದ ರೋಟರಾಕ್ಟ್ ವಿದ್ಯಾರ್ಥಿಗಳು ಮತ್ತು ಇತರ ಸದಸ್ಯರುಗಳು ಪಾಲ್ಗೋಡಿದ್ದರು. ಅಧ್ಯಕ್ಷರಾದ ಫ್ರೋ ಸೇಸಪ್ಪ ಎ ರೈ ಇವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ನಡೆಸಲಾಯಿತು.
ಕ್ಲಬ್ ವತಿಯಿಂದ ಪ್ರತಿ ಭಾನುವಾರದಂದು ಒಟ್ಟಾಗಿ ಹೀಗೆಯೇ ಮಣಿಪಾಲದ ಇತರ ಜಾಗಗಳಿಗೆ “ಜಾಗಿಂಗ್-ವಾಕಿಂಗ್” ಮೂಲಕ ಆರೋಗ್ಯ ಹಾಗೂ ಸಮಾಜಕ್ಕೆ ಉತ್ತಮವಾಗುವಂತಹ ಚಟುವಟಿಕೆಗಳೋಂದಿಗೆ ತೆರಳುವುದು ಎಂದು ಪ್ರಕಟಿಸಲಾಗಿದೆ.
_ಆರೀಫ್ ಕಲ್ಕಟ್ಟ