ಕನ್ನಡ ವಾರ್ತೆಗಳು

ಕಯ್ಯರ ಕಿಞ್ಞಣ್ಣ ರೈಯವರಿಗೆ 20 ವರ್ಷಗಳ ಹಿಂದೆಯೇ ಪಂಪ ಪ್ರಶಸ್ತಿ ಬರಬೇಕಿತ್ತು : ಕಯ್ಯರರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಡಾ.ವಿವೇಕ ರೈ

Pinterest LinkedIn Tumblr

Kayyar_mourn_prg1

ಮಂಗಳೂರು, ಆ.12: ಕಯ್ಯರ ಕಿಞ್ಞಣ್ಣ ರೈಯವರಿಗೆ ಕಳೆದ ಬಾರಿ ಪಂಪ ಪ್ರಶಸ್ತಿ ಬಂದಿದೆ. ಆದರೆ ಈ ಪ್ರಶಸ್ತಿ ಅವರಿಗೆ 20 ವರ್ಷಗಳ ಹಿಂದೆಯೇ ಬರಬೇಕಿತ್ತು. ಸಾಹಿತ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ (ಬೆಂಗಳೂರು ಕೇಂದ್ರೀಕೃತವಾಗಿ) ರಾಜಕೀಯದಿಂದ ಅವರಿಗೆ ಪ್ರಶಸ್ತಿ ವಿಳಂಬವಾಗಿ ಪ್ರಾಪ್ತವಾಗಿದೆ ಎಂದು ಕರ್ನಾಟಕ ವಿವಿಯ ವಿಶ್ರಾಂತ ಕುಲಪತಿ, ಸಾಹಿತಿ ಡಾ.ವಿವೇಕ ರೈ ಅಭಿಪ್ರಾಯಪಟ್ಟರು.

ನಗರದ ಎಸ್‌ಡಿಎಂ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ನಡೆದ ದಿ.ಕಯ್ಯರ ಕಿಞ್ಞಣ್ಣ ರೈಯವರಿಗೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸಾರ್ವಜನಿಕ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

Kayyar_mourn_prg2 Kayyar_mourn_prg3 Kayyar_mourn_prg4

ಕಾವ್ಯವಾಚನವನ್ನು ಬೇಂದ್ರೆಯವರಂತೆ ಜನರ ಬಳಿಗೆ ಅದ್ಭುತವಾಗಿ ತಲುಪಿಸುವುದರಲ್ಲಿ ಕೈಯಾರರು ಪ್ರಮುಖರಾಗಿದ್ದರು. ಅವರು ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗೆ ಅವರಿಗೆ ಇನ್ನಷ್ಟು ಪ್ರಶಸ್ತಿ ಪುರಸ್ಕಾರಗಳು ಸಲ್ಲಬೇಕಿತ್ತು. ಆದರೆ ಕಯ್ಯಾರರು ಅವುಗಳ ಹಿಂದೆ ಹೋದವರಲ್ಲ ಎಂದವರು ನುಡಿದರು.

ನುಡಿನಮನ ಸಲ್ಲಿಸಿ ಮಾತನಾಡಿದ ಪ್ರೊ.ರಾಮಚಂದ್ರ, ನಾಡೋಜ ಕಯ್ಯೊರರ ಬಹುತೇಕ ಆಸೆಗಳು ಕೈಗೂಡಿದರೂ ಅವರ ಕೊನೆಯ ಆಸೆಯಾಗಿದ್ದ ಕಾಸರಗೋಡು ಮತ್ತೆ ಕರ್ನಾಟಕಕ್ಕೆ ಸೇರಬೇಕು ಎನ್ನುವುದು ಕೈಗೂಡದೆ ಹೋಯಿತು ಎಂದರು. ಈ ಸಂದರ್ಭ ಏರ್ಯಲಕ್ಷ್ಮಿನಾರಾಯಣ ಆಳ್ವ, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್‌ಕುಮಾರ ಕಲ್ಕೂರ ಮೊದಲಾದವರು ನುಡಿನಮನ ಸಲ್ಲಿಸಿದರು.

Write A Comment