ಚಿತ್ರ : ಮಂಜು ನೀರೆಶ್ವಾಲ್ಲ್ಯ
ಮಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಮಾನ್ಯ ನ. ಕೃಷ್ಣಪ್ಪರವರು 11-08-2015 ರ ಬೆಳಗ್ಗೆ 10.55 ಕ್ಕೆ ಬೆಂಗಳೂರಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೇಂದ್ರ ಕಛೇರಿ ಕೇಶವ ಕೃಪಾದಲ್ಲಿ ಸ್ವರ್ಗಸ್ಥರಾದರು. ಅವರಿಗೆ ಶ್ರದ್ಧಾಂಜಲಿ ಸಭೆಯನ್ನು 12-08-2015 ರಂದು ಮಂಗಳೂರಿನ ಸಂಘನಿಕೇತನದಲ್ಲಿ ಸಂಜೆ 6.30 ಕ್ಕೆ ಏರ್ಪಡಿಸಲಾಯಿತು
ಸಭೆಯಲ್ಲಿ ಅಖಿಲ ಭಾರತೀಯ ಕುಟುಂಬ ಪ್ರಬೋಧನ್ ಪ್ರಮುಖರಾದ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್, ನಿಟ್ಟೆ ವಿದ್ಯಾಸಂಸ್ಥೆಯ ಶ್ರೀ ವಿನಯ್ ಹೆಗ್ಡೆ, ವಿಶ್ವ ಹಿಂದು ಪರಿಷತ್ನ ಶ್ರೀ ಎಂ. ಬಿ. ಪುರಾಣಿಕ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಡಾ. ವಾಮನ್ ಶೆಣೈ ಡಾ. ಸತೀಶ್ ರಾವ್, ಮಹಾನಗರ ಸಂಘಚಾಲಕರು ಹಾಗೂ ಅವರ ಒಡನಾಟದಲ್ಲಿದ್ದ ಹಿರಿಯರು, ಹಿತೈಷಿಗಳು ಭಾಗವಹಿಸಿದರು.
ಮಾನ್ಯ ನ. ಕೃಷ್ಣಪ್ಪರವರ ಸಂಕ್ಷಿಪ್ತ ಪರಿಚಯ :
1932 ರ ಕೃಷ್ಣಜನ್ಮಾಷ್ಟಮಿಯಂದು ನರಸಿಂಹಯ್ಯ ಮತ್ತು ಸಾವಿತ್ರಿಯಮ್ಮ ದಂಪತಿಯ ಎರಡನೇ ಮಗನಾಗಿ ಮೈಸೂರಿನಲ್ಲಿ ಜನಿಸಿದ ನ. ಕೃಷ್ಣಪ್ಪನವರು ಸಂಸ್ಕೃತದಲ್ಲಿ ಪದವಿ (ಃಂ ಊoಟಿoಡಿs) ಶಿಕ್ಷಣ ಪಡೆದಿದ್ದಾರೆ. ಕಾಲೇಜು ದಿನಗಳಲ್ಲಿಯೇ ಸಂಘದ ಸ್ವಯಂಸೇವಕರಾಗಿದ್ದ ಅವರು 1954 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ಹೊರಟ ಅವರು ಚಾಮರಾಜನಗರದ ತಾಲೂಕು ಪ್ರಚಾರಕರಾಗಿ ನಿಯುಕ್ತಿಗೊಂಡರು.
1955-56ರಲ್ಲಿ ನ. ಕೃಷ್ಣಪ್ಪ ಅವರು ಶಿವಮೊಗ್ಗ ಜಿಲ್ಲಾ ಪ್ರಚಾರಕರಾದರು. / 1959ರಲ್ಲಿ ಅವರು ಮಂಗಳೂರು ಜಿಲ್ಲಾ ಪ್ರಚಾರಕರಾದರು. / 1960 ರಿಂದ 1962 ರ ತನಕ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಚಾರಕರಾಗಿದ್ದರು. / 1962 ರಲ್ಲಿ ತುಮಕೂರು ವಿಭಾಗ ಪ್ರಚಾರಕರಾದರು. / 1966 ರಲ್ಲಿ ಮಂಗಳೂರು ವಿಭಾಗ ಪ್ರಚಾರಕರಾಗಿ ನಿಯುಕ್ತಿಗೊಂಡರು. ನಂತರ ಆಗಿದ್ದ ಮಂಗಳೂರು ವಿಭಾಗ ಬಳ್ಳಾರಿಯ ತನಕ ವಿಸ್ತಾರಗೊಂಡಿದ್ದ ಪ್ರದೇಶವಾಗಿತ್ತು. / 1975 ರಲ್ಲಿ ಮಂಗಳೂರು ವಿಭಾಗದಾದ್ಯಂತ ತುರ್ತುಪರಿಸ್ಥಿತಿ ವಿರುದ್ಧದ ಚಳವಳಿಯ ನೇತೃತ್ವ ವಹಿಸಿದರು. ಈ ಚಳವಳಿ ದೇಶದ ಪ್ರಭಾವೀ ಚಳವಳಿಗಳಲ್ಲಿ ಒಂದಾಗಿತ್ತು. ಈ ಸಂದರ್ಭದಲ್ಲಿ ಅವರು ಮಂಗಳೂರಿನ ಜೈಲಿನಲ್ಲಿ ಸೆರೆಮನೆವಾಸ ಅನುಭವಿಸಿದರು. / 1978ರಲ್ಲಿ ನ. ಕೃಷ್ಣಪ್ಪ ಅವರು ಪ್ರಾಂತ ಬೌದ್ಧಿಕ ಪ್ರಮುಖರಾಗಿ ನಿಯುಕ್ತಿಗೊಂಡರು. /1980ರಲ್ಲಿ ಕರ್ನಾಟಕ ಪ್ರಾಂತ ಪ್ರಚಾರಕರಾದರು. / 1989 ರಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳನ್ನೊಳಗೊಂಡ ಕ್ಷೇತ್ರೀಯ ಪ್ರಚಾರಕರಾಗಿಯೂ ಬೆಂಗಳೂರು ಕೇಂದ್ರವಾಗಿರಿಸಿಕೊಂಡು ಕಾರ್ಯ ನಿರ್ವಹಿಸಿದರು. / 2004 ರಿಂದ 2014 ರ ತನಕ ಅವರು ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯರಾಗಿದ್ದರು ಇದೇ ವೇಳೆ ಪ್ರರಿವಾರ ಪ್ರಬೋಧನ್ ಅದರ ಅಖಿಲ ಬಾರತೀಯ ಸಂಯೋಜಕರಾಗಿ ದೇಶದಾದ್ಯಂತ ಪ್ರವಾಸ ಕೈಗೊಂಡಿದ್ರು. / 2014 ರ ಮಾರ್ಚ್ನಿಂದ ಆರೋಗ್ಯ ಹದಗೆಟ್ಟ ಕಾರಣದಿಂದ ಕೆಲ ತಿಂಗಳುಗಳ ಕಾಲ ಚಿಕಿತ್ಸೆ ಪಡೆದರು. / ನ. ಕೃಷ್ಣಪ್ಪ ಅವರು ಹಿಂದೂ ಕುಟುಂಬ ಪದ್ಧತಿಯಲ್ಲಿನ ವೈಯಕ್ತಿಕ ಮೌಲ್ಯಗಳ ಕುರಿತು ಶಿಕ್ಷಣ ನೀಡುವ ‘ಕುಟುಂಬ ಪ್ರಬೋಧನ’ ಕಲ್ಪನೆಯ ಹರಿಕಾರರೆಂದೇ ಖ್ಯಾತರಾಗಿದ್ದರು. / ನ. ಕೃಷ್ಣಪ್ಪನವರು ಕರ್ನಾಟಕದಲ್ಲಿ ಪ್ರಾರಂಭಗೊಂಡ ಸಂಘದ ಅನೇಕ ಹೊಸ ಚಿಂತನೆಗಳಿಗೆ ಮಾರ್ಗದರ್ಶಕರಾಗಿದ್ದರು. / ಹಿಂದು ಕುಟುಂಬಪದ್ಧತಿಯ ಮೌಲ್ಯಗಳನ್ನು ತಿಳಿಸುವ ಮನೆಯೇ ಮಾಂಗಲ್ಯ ಪುಸ್ತಕ ರಚನೆಗೆ ಪ್ರೋತ್ಸಾಹ. /ವೇದವಿಜ್ಞಾನ ಗುರುಕುಲ, ಪ್ರಭೋದಿನಿ ಗುರುಕುಲ, ಮೈತ್ರೇಯಿ ಗುರುಕುಲ ಮುಂತಾದ ಸಂಘಟನೆಗಳ ಹಾಗೂ ಕನ್ನಡದ ಖ್ಯಾತ ಸಂಘಪ್ರೇರಿತ ಮಾಸ ಪತ್ರಿಕೆ ‘ಅಸಿಮಾ’ ಮುಂತಾದ ಪತ್ರಿಕೆಗಳ ಹುಟ್ಟು ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. / ಒಬ್ಬ ಉತ್ಕೃಷ್ಟ ಓದುಗರಾಗಿದ್ದ ಅವರು ಪ್ರಚಲಿತ ವಿಷಯಗಳ ಬಗೆಗೂ ಕರಾರುವಕ್ಕಾಗಿ ಮಾತನಾಡಬಲ್ಲವರಾಗಿದ್ದರು. ಅವರು ವೇದ ಸಂಬಂಧಿತ ತತ್ತ್ವಶಾಸ್ತ್ರಗಳ ಬಗೆಗೆ ಆಳ ಜ್ಞಾನ ಹೊಂದಿದ್ದರು. / ಖ್ಯಾತ ವಿದ್ವಾಂಸ ಹಾಗೂ ಕಾದಂಬರಿಕಾರ ಎಸ್.ಎಲ್. ಭೈರಪ್ಪರು ಅವರು ನ. ಕೃಷ್ಣಪ್ಪ ಅವರ ಬಾಲ್ಯದ ಸ್ನೇಹಿತರಾಗಿದ್ದರು. ತಮ್ಮ ಮೊದಲ ಕಾದಂಬರಿ ‘ಧರ್ಮಶ್ರೀ’ಯಲ್ಲಿ ಅವರು ‘ಶಂಕರ’ ಎಂಬ ಹೆಸರಿನ ಮೂಲಕ ನ. ಕೃಷ್ಣಪ್ಪನವರ ವ್ಯಕ್ತಿತ್ವವನ್ನು ಪರಿಚಯಿಸಿದ್ದಾರೆ ಎಂಬುದು ಅನೇಕರ ಅಭಿಪ್ರಾಯ. / ನ. ಕೃಷ್ಣಪ್ಪ ಅವರು ದಕ್ಷಿಣ ಭಾರತದ ಆರೆಸ್ಸೆಸ್ನ ಸಾವಿರಾರು ಕಾರ್ಯಕರ್ತರನ್ನು ರೂಪಿಸಿದ್ದಾರೆ.
ಚಿತ್ರ : ಮಂಜು ನೀರೆಶ್ವಾಲ್ಲ್ಯ