ವರದಿ : ಈಶ್ವರ ಎಂ. ಐಲ್/ಚಿತ್ರ,: ದಿನೇಶ್ ಕುಲಾಲ್
ಮುಂಬಯಿ: ಪೊವಾಯಿ ಹಾಗೂ ಕುರ್ಲಾದಲ್ಲಿರುವ ಬಂಟರ ಸಂಘದ ಎರಡು ಶಿಕ್ಷಣ ಕೇಂದ್ರಗಳಲ್ಲಿ ಒಟ್ಟು 15 ಸಾವಿರ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಸಂಘವು ಶಿಕ್ಷಣದ ಜತೆಗೆ ವಿದ್ಯಾರ್ಥಿಗಳ ಮಾನಸಿಕ, ದೈಹಿಕ ವಿಕಸನಕ್ಕಾಗಿ ಸಾಂಸ್ಕೃತಿಕ, ಕ್ರೀಡೆಯ ಬಗ್ಗೆಯೂ ಗಮನ ಹರಿಸುತ್ತಿದೆ. ಯುವಜನ ಹಬ್ಬವು ಕೇವಲ ಸ್ಪರ್ಧೆಯಾಗಿರದೆ ವಿದ್ಯಾರ್ಥಿಗಳ ಪ್ರತಿಭಾ ವಿಕಸನಕ್ಕೆ ಒಂದು ವೇದಿಕೆಯಾಗಿದೆ. ಜತೆಗೆ ವಿದ್ಯಾರ್ಥಿಗಳೊಂದಿಗಿನ ಅನ್ಯೋನ್ಯ ಬಾಂಧವ್ಯಕ್ಕೆ ಸೋಪಾನವಾಗಿದೆ ಎಂದು ಬಂಟರ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಆ. 10ರಂದು ಬಂಟರ ಸಂಘ ಮುಂಬಯಿ ಎಸ್.ಎಂ. ಶೆಟ್ಟಿ ವಿಜ್ಞಾನ, ವಾಣಿಜ್ಯ ಹಾಗೂ ಮ್ಯಾನೇಜ್‌ಮೆಂಟ್‌ಸ್ಟಡೀಸ್‌ಪೊವಾಯಿ ಶಿಕ್ಷಣ ಸಂಸ್ಥೆಯಲ್ಲಿ ಜರಗಿದ ಮುಂಬಯಿ ವಿಶ್ವವಿದ್ಯಾಲಯದ 48ನೇ ಯುವಜನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕಿರುತೆರೆ ನಟ ಮೋಹಿತ್ ರೈನಾ ಮಾತನಾಡಿ, ಭವಿಷ್ಯದ ಕಲ್ಪನೆಯಲ್ಲಿ ಕಾಲ ಕಳೆಯುತ್ತಿರುವ ಈ ದಿನಗಳಲ್ಲಿ ಸ್ಪರ್ಧೆ-ಪ್ರತಿಸ್ಪರ್ಧೆಗಳು, ಸೋಲು-ಗೆಲುವುಗಳು ಅಗತ್ಯವಾಗಿವೆ ಎಂದರು.
ಪೊವಾಯಿ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಜಯರಾಮ ಎನ್. ಶೆಟ್ಟಿ ಮಾತನಾಡುತ್ತಾ, ಪ್ರತಿಭೆ ಅರಳಲು, ಭಾವನೆ ಚಿಗುರಲು ಇಂತಹ ವೇದಿಕೆಯ ನಿರ್ಮಾಣ ಆವಶ್ಯಕವಾಗಿದೆ. ಪ್ರತಿಯೊಬ್ಬರಲ್ಲೂ ಪ್ರತಿಭೆ ಅಡಕವಾಗಿದೆ. ಆದರೆ ಅದಕ್ಕೆ ಅವಕಾಶ ಮಾಡಿಕೊಟ್ಟಾಗ ಮಾತ್ರ ಅದು ಸಾಧ್ಯವಾಗುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ| ಶ್ರೀಧರ್‌ಶೆಟ್ಟಿ ಮಾತನಾಡಿ, ಭಾರತೀಯರು ರಾಜಕೀಯ, ಕ್ರಿಕೆಟ್‌ಹಾಗೂ ಬಾಲಿವುಡ್‌ಇಲ್ಲದೆ ಎಂದೂ ಜೀವಿಸಲಾರರು. ಏಕತೆಯಲ್ಲಿ ವಿವಿಧತೆಯನ್ನು ಹೊಂದಿರುವ ನಮ್ಮ ಭಾರತೀಯ ಸಂಸ್ಕೃತಿ ಅನನ್ಯವಾಗಿದೆ. ಮುಂಬಯಿ ವಿಶ್ವವಿದ್ಯಾಲಯವು ಬಂಟರ ಸಂಘದ ಎಸ್.ಎಂ. ಶೆಟ್ಟಿ ಕಾಲೇಜಿನಲ್ಲಿ ಇಂತಹ ಸಾಂಸ್ಕೃತಿಕ ಸಂಭ್ರಮವನ್ನು ನಡೆಸುತ್ತಿರುವುದು ನಮ್ಮ ಸಂಸ್ಥೆಯ ಬಹುದೊಡ್ಡ ಸೌಭಾಗ್ಯವಾಗಿದೆ ಎಂದರು.
ಜಿಲ್ಲಾ ಸಮನ್ವಯಕಿ ಡಾ| ಮನಾಲಿ ಲೋಂಡೆ, ಮುಂಬಯಿ ವಿಶ್ವವಿದ್ಯಾಲಯದ ಸಾಂಸ್ಕೃತಿಕ ಸಮನ್ವಯಕ ನೀಲೇಶ್‌ತಾವೆ ಮಾತನಾಡಿದರು. ಮೀನಾ ಶರ್ಮಾ ಕಾರ್ಯಕ್ರಮ ನಿರೂಪಿಸಿದರು. ಉಪ ಪ್ರಾಂಶುಪಾಲೆ ಡಾ| ಲಿಜಿ ಸಂತೋಷ್‌ವಂದಿಸಿದರು. ವೇದಿಕೆಯಲ್ಲಿ ಪೊವಾಯಿ ಶಿಕ್ಷಣ ಸಂಸ್ಥೆಯ ಉಪ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಕೋಶಾಧಿಕಾರಿ ಪ್ರವೀಣ್‌ಬಿ. ಶೆಟ್ಟಿ, ಪ್ರೊ| ನಿಧಿ ಚಂದಾರ್ಕರ್‌ಉಪಸ್ಥಿತರಿದ್ದರು.
ಸುಮಾರು 32 ಕಾಲೇಜುಗಳ 800 ವಿದ್ಯಾರ್ಥಿಗಳು ನೃತ್ಯ, ಸಂಗೀತ, ನಾಟಕ, ಕಲೆ, ಮಿಮಿಕ್ರಿ ಹೀಗೆ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಯುವ ಜನೋತ್ಸವ ಸಂಭ್ರಮಕ್ಕೆ ಮೆರುಗು ತಂದರು.
ಬಂಟರ ಸಂಘದ ಗೌ| ಪ್ರಧಾನ ಕಾರ್ಯದರ್ಶಿ ಉಳೂ¤ರು ಮೋಹನ್‌ದಾಸ್‌ಶೆಟ್ಟಿ, ಗೌ| ಕೋಶಾಧಿಕಾರಿ ಸಿಎ ಐ. ಆರ್. ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್‌ಕುಮಾರ್‌ಕುತ್ಯಾರ್, ಜತೆ ಕೋಶಾಧಿಕಾರಿ ಮಹೇಶ್‌ಎಸ್. ಶೆಟ್ಟಿ, ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಕಾರ್ಯದರ್ಶಿ ಬಿ. ಆರ್. ಶೆಟ್ಟಿ, ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ, ಸಾಂಸ್ಕೃತಿಕ ಮತ್ತು ಸಾಹಿತ್ಯ ವಿಭಾಗದ ಕಾರ್ಯಾಧ್ಯಕ್ಷ ರವೀಂದ್ರನಾಥ ಭಂಡಾರಿ, ಉನ್ನತ ಶಿಕ್ಷಣ ಸಮಿತಿಯ ಕೋಶಾಧಿಕಾರಿ ಸಿಎ ಹರೀಶ್‌ಶೆಟ್ಟಿ, ಪೊವಾಯಿ ಶಿಕ್ಷಣ ಸಂಸ್ಥೆಯ ವಿಶ್ವಸ್ತ ಡಾ| ಪ್ರಭಾಕರ ಶೆಟ್ಟಿ ಬಿ., ಕ್ರೀಡಾ ಕಾರ್ಯಾಧ್ಯಕ್ಷ ರಾಜೇಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು