ಮಂಗಳೂರು,ಆಗಸ್ಟ್.13: ನಗರದ ಭವಂತಿ ಸ್ಟ್ರೀಟ್‌ನ ಪ್ರೇಮ ಪ್ಲಾಜಾ ಕಟ್ಟಡದ ಎರಡನೇ ಮಹಡಿಯಲ್ಲಿ ಕಾರ್ಯ ನಿರ್ವಾಹಿಸುತ್ತಿದ್ದ ದೈವಜ್ಞ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ. ನ ಪ್ರದಾನ ಕಛೇರಿಯು ಇದೇ ಕಟ್ಟಡದ ನೆಲ ಮಹಡಿಗೆ ಸ್ಥಳಾಂತರಗೊಂಡಿದ್ದು, ಗುರುವಾರ ಬೆಳಿಗ್ಗೆ ನೂತನ ಕಛೇರಿಯ ಉದ್ಘಾಟನೆ ನೆರೆವೇರಿತು.
ಸೊಸೈಟಿಯ ಅಧ್ಯಕ್ಷ ಶ್ರೀ ಎಸ್.ರಮಾನಂದ ಶೇಟ್ ಅವರು ನೂತನ ಕಛೇರಿಯನ್ನು ಉದ್ಘಾಟಿಸಿ, ಶುಭಾ ಹಾರೈಸಿದರು.
ದೈವಜ್ಞ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಮಾಜಿ ಅಧ್ಯಕ್ಷ ಹಾಗೂ ಜನತಾ ಬಜಾರ್‌ನ ನಿರ್ದೇಶಕ ಶ್ರೀ ಆಶೋಕ್ ಶೇಟ್, ಸೊಸೈಟಿಯ ಉಪಧ್ಯಾಕ್ಷ ಶ್ರೀ ಮನೋಹರ್ ಶೆಟ್, ನಿರ್ದೇಶಕರುಗಳಾದ ಶ್ರೀ ಕಮಲಾಕರ್ ಸಾನು, ಶ್ರೀ ಗೋಪಾಲ ಶೇಟ್, ಶ್ರೀ ಗಣೇಶ್ ಶೇಟ್, ಶ್ರೀ ಎಸ್.ಕುಮಾರ್ ಶೇಟ್, ಶ್ರೀ ಸುಧಾಕರ್ ಶೇಟ್, ಶ್ರೀ ಗುರುಪ್ರಸಾದ್ ಶೇಟ್, ಶ್ರೀ ವಿನೋದ್ ಶೇಟ್, ಶ್ರೀ ಶ್ರೀಪಾದ್ ರಾಯ್ಕರ್, ಶ್ರೀಮತಿ ನಾಗರತ್ನ ವಿ ಶೇಟ್, ಶ್ರೀಮತಿ ಗಾಂಗಾ ಪ್ರಕಾಶ್ ಹಾಗೂ ಕಾರ್ಯದರ್ಶಿ ಶ್ರೀಮತಿ ಚಿತ್ರಾ ರಾವ್ ಮತ್ತು ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗ, ಗ್ರಾಹಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
1992ರಲ್ಲಿ ಆರಂಭಗೊಂಡ ದೈವಜ್ಞ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ. ಸಂಸ್ಥೆಯು ಕಳೆದ 23 ವರ್ಷಗಳಿಂದ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ನಗರದ ಕುದ್ರೋಳಿ ಸಮೀಪ ಆಳಕೆಯಲ್ಲಿ ಸೊಸೈಟಿಯ ಇನ್ನೊಂದು ಶಾಖೆ ಕಾರ್ಯನಿರ್ವಹಿಸುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ನೆಲ ಅಂತಸ್ತು, ಪ್ರೇಮ ಪ್ಲಾಜಾ, ಭವಂತಿ ಸ್ಟ್ರೀಟ್ , ಮಂಗಳೂರು – 575001 / ಪೋನ್ :0824-2422204 ಹಾಗೂ Email : daivajna1992@gmail.com ಅನ್ನು ಸಂಪರ್ಕಿಸುವಂತೆ ಸೊಸೈಟಿಯ ಅಧ್ಯಕ್ಷ ಶ್ರೀ ಎಸ್.ರಮಾನಂದ ಶೇಟ್ ಅವರು ತಿಳಿಸಿದ್ದಾರೆ.