ಕನ್ನಡ ವಾರ್ತೆಗಳು

ಸೌಕೂರು ದುರ್ಗಾಪರಮೇಶ್ವರಿ ದೇವಳದಲ್ಲಿ ಖದೀಮ ಕಳ್ಳರ ಕೈಚಳಕ; 50 ಲಕ್ಷಕ್ಕೂ ಅಧಿಕ ಕನ್ನ

Pinterest LinkedIn Tumblr

Soukru_ Temple_ Theaft (18)

ಕುಂದಾಪುರ : ತಾಲ್ಲೂಕಿನ ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದ್ದ ಸೌಕೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಶುಕ್ರವಾರ ತಡರಾತ್ರಿ ಕಳ್ಳರು ದೇವಸ್ಥಾನದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನು ದೋಚಿರುವ ಘಟನೆ ನಡೆದಿದೆ. ಶುಕ್ರವಾರ ರಾತ್ರಿಯ ಪೂಜೆಗಳನ್ನು ಪೂರೈಸಿದ ಬಳಿಕ ದೇಗುಲದ ದ್ವಾರ ಬಾಗಿಲು ಸೇರಿದಂತೆ ಮೂರು ದ್ವಾರಗಳನ್ನು ಭದ್ರ ಪಡಿಸಿ ಅರ್ಚಕರು ಹಾಗೂ ಸಿಬ್ಬಂದಿಗಳು ಮನೆಗೆ ತೆರಳಿದ್ದರು. ಶನಿವಾರ ಮುಂಜಾನೆ ದೈನಂದಿನ ಪೂಜಾ ವಿಧಿಗಳ ನಿರ್ವಹಣೆಗಾಗಿ ಬಂದಿದ್ದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಘಟನೆ ವಿವರ : ಇತಿಹಾಸ ಪ್ರಸಿದ್ದವಾದ ಸೌಕೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಸುತ್ತ-ಮುತ್ತಲಿನ ಹಲವು ಗ್ರಾಮದ ಜನರು ಭಕ್ತಿಯಿಂದ ನಡೆದುಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿದ್ದ ಕಾವ್ರಾಡಿ ಅಶೋಕಕುಮಾರ ಶೆಟ್ಟಿಯವರು ತಮ್ಮ ತಾಯಿಯ ಹೆಸರಿನಲ್ಲಿ ಬೆಳ್ಳಿಯ ಮುಖವಾಡಗಳನ್ನು ಅರ್ಪಿಸಿದ್ದರು.

Soukru_ Temple_ Theaft (3)

((ಕಳವಾದ ಲಕ್ಷಾಂತರ ಬೆಲೆಬಾಳುವ ಚಿನ್ನದ ಉತ್ಸವ ಮೂರ್ತಿ))

ಕಳೆದ ಕೆಲವು ವರ್ಷಗಳ ಹಿಂದೆ ಭಕ್ತರ ಸಹಕಾರದಿಂದ ಸುಮಾರು 1 ಕೆ.ಜಿ 350 ಗ್ರಾಂ ತೂಕದಲ್ಲಿ ಚಿನ್ನದ ಉತ್ಸವ ಮೂರ್ತಿ, ಚಿನ್ನದ ಮುಖವಾಡ ಹಾಗೂ ಬೆಳ್ಳಿಯ ಪ್ರಭಾವಳಿಗಳನ್ನು ಮಾಡಲಾಗಿತ್ತು. ಶಿಲಾಮಯವಾದ ಗರ್ಭಗುಡಿಯ ಒಳ ಭಾಗದಲ್ಲಿ ಕೇವಲ ಅರ್ಚಕರಿಗೆ ಮಾತ್ರ ಪ್ರವೇಶಾವಕಾಶ ಇದ್ದುದರಿಂದ ದೇವರ ನಿತ್ಯ ಸೇವೆಗಳಿಗೆ ಬಳಸಲಾಗುತ್ತಿದ್ದ ಪ್ರಮುಖ ಚಿನ್ನ ಹಾಗೂ ಬೆಳ್ಳಿಯ ವಸ್ತುಗಳನ್ನು ಈ ಭಾಗಗಳಲ್ಲಿಯೇ ಇರಿಸಲಾಗುತ್ತಿತ್ತು ಎನ್ನಲಾಗಿದೆ. ಹಿಂದಿನ ಆಡಳಿತ ಮಂಡಳಿಯ ಅಧಿಕಾರವಧಿ ಮುಕ್ತಾಯವಾಗಿದ್ದರಿಂದ ಆ.6 ರಂದು ಕುಂದಾಪುರದ ತಹಸೀಲ್ದಾರರು ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

Soukru_ Temple_ Theaft (19) Soukru_ Temple_ Theaft (27) Soukru_ Temple_ Theaft (21) Soukru_ Temple_ Theaft (20) Soukru_ Temple_ Theaft (26) Soukru_ Temple_ Theaft (23) Soukru_ Temple_ Theaft (24) Soukru_ Temple_ Theaft (22) Soukru_ Temple_ Theaft (25) Soukru_ Temple_ Theaft (17) Soukru_ Temple_ Theaft (16) Soukru_ Temple_ Theaft (13) Soukru_ Temple_ Theaft (10) Soukru_ Temple_ Theaft (11) Soukru_ Temple_ Theaft (12) Soukru_ Temple_ Theaft (15) Soukru_ Temple_ Theaft (14) Soukru_ Temple_ Theaft (2) Soukru_ Temple_ Theaft (1) Soukru_ Temple_ Theaft (4) Soukru_ Temple_ Theaft (6) Soukru_ Temple_ Theaft (9) Soukru_ Temple_ Theaft (8) Soukru_ Temple_ Theaft (5) Soukru_ Temple_ Theaft (7) Soukru_ Temple_ Theaft

ದೇವರ ಭಂಡಾರಗಳಿಗೆ ಕೈ ಇಕ್ಕಿರುವ ಅಪರಿಚಿತ ಕಳ್ಳರು ದುರ್ಗಾ ಪರಮೇಶ್ವರಿ ದೇವಿಯ ಉತ್ತವ ಮೂರ್ತಿ, ಮುಖವಾಡ, ಪ್ರಭಾವಳಿ, ಚಿನ್ನದ ಕರಿಮಣಿ, ವೀರಭದ್ರ ದೇವರ ಮುಖವಾಡ, ಭಕ್ತರು ಹುಂಡಿಗೆ ಕಾಣಿಕೆಯಾಗಿ ಅರ್ಪಿಸಿದ್ದ ಚಿನ್ನಾಭರಣಗಳು ಸೇರಿ ಅಂದಾಜು 50 ಲಕ್ಷಕ್ಕಿಂತಲೂ ಹೆಚ್ಚಿನ ಮೌಲ್ಯದ ಬೆಲೆ ಬಾಳುವ ವಸ್ತುಗಳನ್ನು ಅಪರಿಸಿದ್ದಾರೆ.

ಸಿ.ಸಿ. ಕ್ಯಾಮೇರಾ ಇರಲಿಲ್ಲ: ಜಿಲ್ಲೆಯಲ್ಲಿ ನಡೆದಿರುವ ದೇವಸ್ಥಾನಗಳ ಕಳ್ಳತನ ಪ್ರಕರಣಗಳ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದ್ದಪೊಲೀಸ್ ಅಧಿಕಾರಿಗಳು ಸಿ.ಸಿ ಕ್ಯಾಮರಾ ಅಳವಡಿಕೆಯ ಜತೆಯಲ್ಲಿ ಭದ್ರತೆ ಹೆಚ್ಚಿಸುವ ಕುರಿತು ಹೇಳಿದ್ದರು. ದೇವಸ್ಥಾನದಲ್ಲಿ ಸಿ.ಸಿ ಕ್ಯಾಮರಾ ಅಳವಡಿಸದೆ ಇರುವುದು ಭದ್ರತೆಯ ನಿರ್ಲಕ್ಷ್ಯವಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸ್ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿದ್ದರು. ಕುಂದಾಪುರ ಡಿವೈ‌ಎಸ್‌ಪಿ ಎಂ.ಮಂಜುನಾಥ ಶೆಟ್ಟಿ, ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ ಪಿ.ಎಂ, ಕುಂದಾಪುರ ತಹಶಿಲ್ದಾರ್ ಗಾಯತ್ರಿ ನಾಯಕ್ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Write A Comment