(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)
ಮುಂಬಯಿ,ಅ.20: ವಿಶ್ವ ಮನ್ನಣೆ ಪಡೆದ ತುಳು-ಕನ್ನಡಿಗ ಮಾತ್ತು ಯುರೋಪಿಯನ್ ಕಾಂಟಿನೆಂಟಲ್ ಯುನಿವರ್ಸಿಟಿಯಿಂದ ಡಾಕ್ಟರೇಟ್ ಪಡೆದುಕೊಂಡಿದ್ದ ಅತ್ತೂರು ಡಾ| ಶಿವರಾಮ್ ಕೆ.ಭಂಡಾರಿ ಆಡಳಿತ್ವದ ಪ್ರಸಿದ್ಧ ಕೇಶ ವಿನ್ಯಾಸ ಸಂಸ್ಥೆ ಶಿವಾ’ಸ್ ಹೇರ್ ಡಿಝೈನರ್‍ಸ್ ಪ್ರೈವೇಟ್ ಲಿಮಿಟೆಡ್ ತನ್ನ ಮಹಿಳೆಯರಿಗಾಗಿ ಅತ್ಯಾಧುನಿಕ, ಸುಸಜ್ಜಿತ ಶಾಖೆಯನ್ನು ಕಳೆದ ಶುಕ್ರವಾರ ಅಂಧೇರಿ ಪಶ್ಚಿಮದ ಲೊಖಾಂಡ್‌ವಾಲ ಕಾಂಪ್ಲೆಕ್ಸ್ ಮುಂಭಾಗದಲ್ಲಿನ ಗ್ರೀನ್ ವಿಲ್ಲೆ, ಶಾಪ್ ನಂ. 3ರಲ್ಲಿ ಉದ್ಘಾಟಿಸಲ್ಪಟ್ಟಿತು.
ಬೃಹನ್ಮುಂಬಯಿಯಲ್ಲಿ ಹೇರ್ ಸ್ಟೈಲೋ ಮೂಲಕ ಪ್ರಸಿದ್ಧಿ ಗಿಟ್ಟಿಸಿ ಕೊಂಡಿರುವ ಶಿವಾ’ಸ್ ಹೇರ್ ಡಿಝೈನರ್‍ಸ್‌ನ ಶಾಖೆಯನ್ನು ಶಿವಸೇನೆಯ ಚಲನಚಿತ್ರ ನಿರ್ದೇಶಕ ಮಧುರ್ ಭಂಡಾರ್ಕರ್ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿsಗಳಾಗಿ ಚಲನಚಿತ್ರ ನಿರ್ದೇಶಕಿ ಸಂಗೀತ ಹೈರ್ ಅವರು ಉಪಸ್ಥಿತರಿದ್ದರು. ಗೌರವ ಅತಿಥಿsಗಳಾಗಿ ಫಿಲ್ಮ್ ಕ್ಯಾಲೆಂಡರ್ ನಟಿಯರು ಉಪಸ್ಥಿತರಿದ್ದು ಪತ್ನಿ ಅನುಶ್ರೀ ಶಿವರಾಮ್, ಮಕ್ಕಳಾದ ಮಾ| ರೋಹಿಲ್ ಶಿವರಾಮ್ ಹಾಗೂ ಬೇಬಿ ಆರಾಧ್ಯ ಶಿವರಾಮ್ ಅವರನ್ನೊಳಗೊಂಡು ನೂರಾರು ಗಣ್ಯರು ಆಗಮಿಸಿ ಶಿವಾ’ಸ್‌ಗೆ ಅಭಿನಂದಿಸಿದರು.
ಬಾಲಿವುಡ್‌ನ ಹೆಸರಾಂತ ಕೇಶ ರೂಪಕ ಎಂದೇ ಪ್ರಸಿದ್ಧಿಯ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಅತ್ತೂರು ಧರೆಗುಡ್ಡೆ ನಿವಾಸಿ ಶಿವರಾಮ ಅವರು 1998 ರ ಸಾಲಿನ ಸೆಲೂನ್ ಇಂಟರ್‌ನ್ಯಾಶನಲ್ ಪುರಸ್ಕಾರದಲ್ಲಿ ವಿಶ್ವದ ಖ್ಯಾತ 84 ಪ್ರತಿಷ್ಠಿತ ಕೇಶ ವಿನ್ಯಾಸಗಾರರಲ್ಲಿ ಶಿವಾಸ್ ಭಾರತೀಯನಾಗಿ ಪುರಸ್ಕೃತರಾಗಿದ್ದರು. ಹೇರ್ ಕಟ್ಟಿಂಗ್ ಸಲೂನ್‌ಗೆ ಹೊಸ ಆಯಾಮ ನೀಡಿ ತನ್ನ ಉದ್ಯಮವನ್ನು ಪ್ರೈವೇಟ್ ಲಿಮಿಟೆಡ್ ಆಗಿಸಿ ಶಿವಾಸ್ ಹೇರ್ ಸ್ಟೈಲೋ ಡಿಸೈನರ್ ನಗರದದ್ಯಾಂತ ವೃತ್ತಿ ನಿರತವಾಗಿದ್ದಾರೆ. ಭಂಡಾರಿ ಸೇವಾ ಸಮಿತಿ ಮುಂಬಯಿ ಸಂಸ್ಥೆಯ ಪದಾಧಿಕಾರಿಯಾಗಿ ಸೇವಾ ನಿರತ ಶಿವರಾಮ್ ಸದಾ ತೆರೆಯ ಮರೆಯಲ್ಲೇ ಸಮಾಜ ಸೇವೆಯಲ್ಲಿ ತೊಡಗಿಸಿರುವ ಸಜ್ಜನ ವ್ಯಕ್ತಿಯಾಗಿದ್ದಾರೆ.