ಉಡುಪಿ: ಇಲ್ಲಿನ ಹೆಬ್ರಿ ಸಮೀಪದ ಸೇಳಂಜೆ, ಬುಡನ್ಸಾಬ್ ಅವರ ಪತ್ನಿ ಶಹನಾಜಿ (೨೧) ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮನೆಯಲ್ಲಿ ಪತ್ತೆಯಾಗಿದ್ದಾರೆ.
ಆಕೆಯ ಮದುವೆಯಾಗಿ ನಾಲ್ಕು ತಿಂಗಳಾಗಿದ್ದು ಮೂರು ತಿಂಗಳ ಗರ್ಭಿಣಿ. ಮಗಳ ಸಾವಿನ ಹಿಂದೆ ಗಂಡ, ಅತ್ತೆ, ಮಾವನ ಕೈವಾಡವಿದ್ದು ಅವರು ಕೊಲೈಗೈದಿರುವ ಶಂಕೆಯನ್ನು ಮೃತಳ ತಾಯಿ ವ್ಯಕ್ತಪಡಿಸಿದ್ದಾರೆ. ಪೊಲೀಸರು ಹಾಗೂ ತಹಶೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.