ಕನ್ನಡ ವಾರ್ತೆಗಳು

ನಮ್ಮೂರಿಗೆ ಬಾರು ಬೇಡ, ಮಾಡೋದಿದ್ರೇ ಪ್ಯಾಕ್ಟರಿ ಮಾಡಿ ನಮಗೆ ಕೆಲಸ ಕೊಡಿ; ಕಾಳಾವರ ಮಹಿಳೆಯರ ಆಗ್ರಹ

Pinterest LinkedIn Tumblr

ಕುಂದಾಪುರ: ಕಾಳಾವರ ಪಂಚಾಯತ್ ವ್ಯಾಪ್ತಿಯ ಕಾಳಾವರ ಪೇಟೆಯಲ್ಲಿ ಮದ್ಯದಂಗಡಿ ತೆರೆಯಲು ನಿರಪೇಕ್ಷಣಾ ಪತ್ರ ವಿಚಾರವಾಗಿ ಶನಿವಾರ ತುರ್ತು ಗ್ರಾಮಸಭೆ ಕರೆದು ನಿರಪೇಕ್ಷಣಾ ಪತ್ರ ನೀಡುವ ಕುರಿತು ಚರ್ಚೆ ನಡೆಸಲಾಯಿತು. ಗ್ರಾ.ಪಂ. ಹೊರಗೆ ಮಹಿಳೆಯರು ಹಾಗೂ ನಾಗರೀಕರು ನಮಗೆ ಮದ್ಯದಂಗಡಿ ಬೇಡ, ಮಾಡುವುದಿದ್ದರೇ ಯಾವುದಾದರೂ ಫ್ಯಾಕ್ಟರಿ ತೆರೆದು ನಮಗೆ ಉದ್ಯೋಗವಕಾಶ ಕಲ್ಪಿಸಲಿ ಎಂದು ತಮ ಬೇಡಿಕೆಯನ್ನು ಮುಂದಿಡುತ್ತಿರುವ ಹೊತ್ತಿನಲ್ಲೇ ಒಳಗೆ ನಡೆದ ಸಭೆಯಲ್ಲಿ ಮದ್ಯದಂಗಡಿಗೆ ನಿರಪೇಕ್ಷಣಾ ಪತ್ರ ನೀಡುವ ಕುರಿತು ನಿರ್ಣಯ ನಡೆಸಿದ ಕಾಳಾವರ ಪಂಚಾಯತ್ ವಿರುದ್ಧ ಸ್ಥಳೀಯ ಸಂಘಟನೆಗಳು, ನಾಗರೀಕರು, ಮಹಿಳೆಯರು ತೀವ್ರ ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಕಾಳಾವರದಲ್ಲಿ ಮದ್ಯದಂಗಡಿಗೆ ನಿರಪೇಕ್ಷಣಾ ಪತ್ರ ನೀಡುವಂತೆ ಈ ಹಿಂದೆ ಮದ್ಯದಂಗಡಿಗೆ ಸಂಬಂಧಪಟ್ಟವರು ಗ್ರಾ.ಪಂ.ಗೆ ಮನವಿ ನೀಡಿದ್ದು ಕಾಳಾವರದಲ್ಲಿ ಮದ್ಯದಂಗಡಿ ನಡೆಸಲು ಯಾವುದೇ ಕಾರಣಕ್ಕೂ ನಿರಪೇಕ್ಷಣಾ ಪತ್ರ ನೀಡಬಾರದು ಎಂದು ಆಗ್ರಹಿಸಿ ಮೂರ್ನಾಲ್ಕು ದಿನಗಳ ಹಿಂದೆ ಕಾಳಾವರ ಪಂಚಾಯತ್ ಎದುರು ಮಹಿಳೆಯರು, ವಿವಿಧ ಸಂಘಟನೆಗಳು, ನಾಗರೀಕರು ಪ್ರತಿಭಟನೆ ನಡೆಸಿದ್ದು ಶನಿವಾರ ನಡೆದ ಬೆಳವಣಿಗೆಯಲ್ಲಿ ಸಭೆಯಲ್ಲಿದ್ದ 16 ಮಂದಿ ಪೈಕಿ 11 ಮಂದಿ ಮದ್ಯದಂಗಡಿ ನಿರಪೇಕ್ಷಣಾ ಪತ್ರ ನೀಡಲು ಸೂಚಿಸಿದ್ದು ಐವರು ಮಾತ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಸದಸ್ಯರ ಬಹುಮತವನ್ನಾಧರಿಸಿ ಕಾಳಾವರದಲ್ಲಿ ಮದ್ಯದಂಗಡಿ ತೆರೆಯಲು ಪಂಚಾಯತ್ ವತಿಯಿಂದ ನಿರಪೇಕ್ಷಣಾ ಪತ್ರ ನೀಡಲು ನಿರ್ಣಯ ಕೈಗೊಳ್ಳಲಾಯಿತು.

Kalavara_Panchayt_People Protest (4) Kalavara_Panchayt_People Protest (3) Kalavara_Panchayt_People Protest (7) Kalavara_Panchayt_People Protest (6) Kalavara_Panchayt_People Protest (5) Kalavara_Panchayt_People Protest (2) Kalavara_Panchayt_People Protest (1)

ಕೋಟೇಶ್ವರ ಮೂಲಕವಾಗಿ ಹಾಲಾಡಿ ರಸ್ತೆಯಲ್ಲಿ ಮೂರು ಕಿ.ಮೀ. ಸಾಗಿದರೇ ಸಿಗುವ ಪುಟ್ಟ ಗ್ರಾಮವೇ ಕಾಳಾವರ. ಪ್ರಸಿದ್ಧ ಸುಬ್ರಮಣ್ಯ ದೇವಸ್ಥಾನಕ್ಕೆ ಹೆಸರುವಾಸಿಯಾಗಿರುವ ಕಾಳಾವರದಲ್ಲೀಗ ಮದ್ಯದಂಗಡಿ ತೆರೆಯುವುದು ಬಹುತೇಕ ಚರ್ಚೆಗೆ ಗ್ರಾಸವಾಗಿದೆ. ಕೃಷಿ ಹಾಗೂ ಕೂಲಿ ಮಾಡಿಕೊಂಡು ತಮ್ಮ ಹೊತ್ತಿನ ತುತ್ತಿಗೆ ದಾರಿಕಂಡುಕೊಳ್ಳುವ ಜನರೇ ಹೆಚ್ಚಗಿರುವ ಈ ಕಾಳಾವರ ವ್ಯಾಪ್ತಿಯಲ್ಲಿ ಇನ್ನು ನಾಲ್ಕಾರು ಪುಟ್ಟ ಊರುಗಳಿದೆ. ಒಂದೆಡೆ ರಸ್ತೆ ಸಮಸ್ಯೆ, ಕುಡಿಯುವ ನೀರಿಗೂ ತತ್ವಾರವನ್ನು ಇಲ್ಲಿನ ಜನರು ಬಹು ವರ್ಷಗಳಿಂದ ಅನುಭವಿಸುತ್ತಲೇ ಇದ್ದಾರೆ. ಆದರೇ ಈಷ್ಟೆಲ್ಲಾ ಸಮಸ್ಯೆಗಳಿರುವ ಕಾಳಾವರ ಗ್ರಾಮಕ್ಕೆ ಈಗ ಇನ್ನೊಂದು ಪ್ರಮುಖ ಸಮಸ್ಯೆಯಾಗುವಂತೆ ಮದ್ಯದಂಗಡಿಯೊಂದು ಅರಂಭವಾಗುತ್ತೆಂಬುದನ್ನು ಇಲಿನ ಜನರು ಸಹಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಗ್ರಾ.ಪಂ. ವಿರುದ್ಧ ತಮ್ಮ ಅಸಮಧಾನವನ್ನು ಜನರು ಹೊರಹಾಕುತ್ತಿದ್ದಾರೆ. ಮದ್ಯದಂಗಡಿ ಆಗಿದ್ದೇ ಹೌದಾದರೇ ಜನರಿಂದ ಆಯ್ಕೆಯಾದ ನಾನು ಈ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಡ್ತೇನೆ ಎಂದು ಶೋಭಾ ಆಚಾರ್ಯ ಆಕ್ರೋಷ ವ್ಯಕ್ತಪಡಿಸಿದ್ರು.

ವಕ್ವಾಡಿ, ಅಸೋಡು, ಕಾಳಾವರ ಮೊದಲಾದ ಭಾಗಗಳ ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ರು, ಇದೇ ವೇಳೆ ಮಾತನಾಡಿದ ಸಾರ್ವಜನಿಕರು ಕಾಳಾವರಕ್ಕೆ ಮದ್ಯದಂಗಡಿ ಅಗತ್ಯವೇ ಇಲ್ಲ, ಜನರಿಂದ ಓಟು ಪಡೆದ ಜನಪ್ರತಿನಿಧಿಗಳು ಜನರ ಭಾವನೆಗಳಿಗೆ ಬೆಲೆ ಕೊಡುತ್ತಿಲ್ಲ ಎಂದು ಆರೋಪಿಸಿದರು. ಈಗಾಗಲೇ ಹಲವಾರು ಸಮಸ್ಯೆಗಳಿದೆ, ಮನೆಯಲ್ಲಿ ಕಷ್ಟದಿಂದ ನಿತ್ಯ ಜೀವನ ಮಾಡುತ್ತಿದ್ದೇವೆ, ಇನ್ನು ಮದ್ಯದಂಗಡಿ ಈ ಭಾಗದಲ್ಲಿಯೇ ಆದರೇ ನಮ್ಮ ಪರಿಸ್ಥಿತಿ ಊಹಿಸಲು ಅಸಾಧ್ಯ ಎನ್ನುತ್ತಾರೆ ಸ್ಥಳೀಯ ಮಹಿಳೆಯರು.

ಒಟ್ಟಿನಲ್ಲಿ ಜನರ ಭಾವನೆಗಳಿಗೆ ಸಮಸ್ಯೆಗಳಿಗೆ ಸ್ಪಂಧಿಸಬೇಕಾದ ಪಂಚಯತ್ ಮಾತ್ರ ದಿಟ್ಟ ಧೋರಣೆ ಅನುಸರಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಷಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರಜ್ಞವಂತ ನಾಗರೀಕರು ಕಾನೂನು ಹೋರಾಟಕ್ಕೂ ಮುಂದಾಗಲಿದ್ದು ಕಾಳಾವರದಲ್ಲಿ ಮದ್ಯದಂಗಡಿ ತೆರೆಯಲು ಬಿಡೋದೆ ಇಲ್ಲ ಎಂದು ಪಣತೊಟ್ಟಿದ್ದಾರೆ.

ವರದಿ- ಯೋಗೀಶ್ ಕುಂಭಾಸಿ

Write A Comment