ಉಳ್ಳಾಲ. ಆ,23: ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಅಂಕಗಳಿಸಲು, ವಿದ್ಯಾರ್ಥಿಗಳಷ್ಟೇ ಅಧ್ಯಾಪಕರ ಪಾಲು ಇದೆ ಎಂದು ದೇರಳಕಟ್ಟೆ ಬದ್ರಿಯ ಕೇಂದ್ರ ಜುಮಾ ಮಸೀದಿ ಖತೀಬ್ ಅಬ್ದುನ್ನಾಸಿರ್ ಫೈಝಿ ಕುಂಬಳೆ ಹೇಳಿದರು.
ಅವರು ಇಸ್ಲಾಮಿಕ್ ವಿದ್ಯಾಭ್ಯಾಸ ಮಂಡಳಿಯ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್‌ನ 2014-15ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ದೇರಳಕಟ್ಟೆಯ ಕೇಂದ್ರ ಜುಮಾ ಮಸೀದಿ ಅಧೀನದ ಹಯಾತುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಮತ್ತು ಎಸ್ಕೆಎಸ್‌ಬಿವಿಯ ಪ್ರಸ್ತುತ ಸಾಲಿನ ಸಾಹಿತ್ಯ ಸಮಾಜ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿದರು.
ದೇರಳಕಟ್ಟೆ ಬದ್ರಿಯ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಡಿ.ಇಸ್ಮಾಯಿಲ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಜಂಇಯ್ಯತ್ತುಲ್ ಮುಅಲ್ಲಿಮೀನ್ ಪ್ರ.ಕಾರ್ಯದರ್ಶಿ ಕೆ.ಎಲ್ ಉಮರ್ ದಾರಿಮಿ ಮಾತನಾಡಿ, ಹತ್ತನೇ ತರಗತಿಯ ವಿದ್ಯಾರ್ಥಿನಿ ಕರ್ನಾಟಕದಲ್ಲಿ ಪ್ರಥಮ ಮತ್ತು ಐದು ವಿದ್ಯಾರ್ಥಿಗಳು ಡಿಸ್ಟಿಂಕ್ಷನೊಂದಿಗೆ ಐದನೇ ತರಗತಿಯಲ್ಲಿ ೬ವಿದ್ಯಾರ್ಥಿಗಳು ಪ್ರಥಮ, ಏಳನೇ ತರಗತಿಯಲ್ಲಿ ಎರಡು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು 18ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದು ಇಡೀ ಕರ್ನಾಕಟದ ಜನತೆಗೆ ಹೆಮ್ಮೆತರುವಚಿತಹ ವಿಚಾರ. ಇಚಿತಹ ವಿರ್ದ್ಯಾಥಿಗಳಿಗೆ ಮುಂದಿನ ದಿನಗಳಲ್ಲಿ ಪೋಷಕರ ಪ್ರೋತ್ಸಹ ಅಗತ್ಯವಿದೆ ಎಂದರು.
ಈ ಸಂದರ್ಭ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಅಂಕ ಪಡೆಯಲು ಕಾರಣವಾದ ಅಧ್ಯಾಪಕರಿಗೆ ಸನ್ಮಾನಿಸಲಾಯಿತ್ತು.
ದೇರಳಕಟ್ಟೆ ಬದ್ರಿಯ ಕೇಂದ್ರ ಜುಮಾ ಮಸೀದಿ ಉಪಾಧ್ಯಕ್ಷರುಗಳಾದ ಅಬ್ಬಾಸ್ ಹಾಜಿ, ಅಬ್ದುಲ್ ರಹಿಮಾನ್ ಹಾಜಿ ಪನೀರ್, ಪ್ರ.ಕಾರ್ಯದರ್ಶಿ ಅಬ್ದುಲ್ ಅಝೀಝ್, ಜೊತೆ ಕಾರ್ಯದರ್ಶಿ ಅಬ್ದುಲ್ ರಶೀದ್ ಡಿ.ಎಂ, ಮಾಜಿ ಕಾರ್ಯದರ್ಶಿ ಶೇಕಬ್ಬ ಹಾಜಿ, ಸದಸ್ಯ ಮೊಹಮ್ಮದ್ ಹನೀಫ್ ಜೆ, ದೇರಳಕಟ್ಟೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ ಲತೀಫ್ ದಾರಿಮಿ ರೇಂಜಾಡಿ, ಹಯಾತುಲ್ ಇಸ್ಲಾಂ ಮದ್ರಸ ಉಸ್ತುವಾರಿ ಇಬ್ರಾಹೀಂ ಬದ್ಯಾರ್, ಹಯಾತುಲ್ ಇಸ್ಲಾಂ ಮದ್ರಸ ಅಧ್ಯಾಪಕರುಗಳಾದ ಸುಲೈಮಾನ್ ಹನೀಫಿ, ಇಮ್ರಾನ್ ಅಝ್ಹರಿ ಕಿನ್ಯ, ಎನ್.ಕೆ ಉಮರುಲ್ ಫಾರೂಕ್ ಎಮ್.ಎಲ್.ವಿ ಮಂಜೆಶ್ವರ, ಬೆಳ್ಮ ಗ್ರಾ.ಪ ಉಪಾಧ್ಯಕ್ಷ ಸತ್ತಾರ್ ಸದಸ್ಯರುಗಳಾದ ಕಬೀರ್ ಡಿ. ರಝಾಕ್ ಕನೆಕ್ಕೆರೆ, ಸದರ್ ಮುಅಲ್ಲೀಂ ಪಿ.ಎ ಮೊಹಮ್ಮದ್ ಅಲಿ ಫೈಝಿ ಸ್ವಾಗತಿಸಿದರು. ಮುಅಲೀಂ ಇಬ್ರಾಹೀಂ ಫೈಝಿ ವಂದಿಸಿದರು.