ವರದಿ : ಈಶ್ವರ ಎಂ. ಐಲ್/ಚಿತ್ರ,: ದಿನೇಶ್ ಕುಲಾಲ್
ಮುಂಬಯಿ, ಆ. 24: ಮುಂಬಯಿಯ ಗೋರೆಗಾಂವ್ ಪೂರ್ವ ಭಾರತ್‌ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಜರಗಿದ ಭಾರತ್‌ಬ್ಯಾಂಕಿನ 38ನೇ ಸಂಸ್ಥಾಪನಾ ದಿನಾಚರಣೆ ಯನ್ನು ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣರು ಉದ್ಘಾಟಿಸಿದರು.
ಆನಂತರ ಮಾತನಾಡಿದ ಅವರು, ಸಮಾಜ ಮತ್ತು ಬ್ಯಾಂಕಿನ ಹಿತಕ್ಕಾಗಿ ಶ್ರದ್ಧೆ, ನಿಸ್ವಾರ್ಥ ಪೂರ್ವಕವಾಗಿ ಸೇವೆ ಸಲ್ಲಿಸಿದವರನ್ನು ಸ್ಮರಿಸಿ, ಅವರಿಗೆ ಕೃತಜ್ಞತೆ ಸಲ್ಲಿಸಿದರು. ಗುಣ ಮಟ್ಟದ ಸೇವೆ, ಪಾರದರ್ಶಕತೆ, ಆರ್ಥಿಕ ಠೇವಣಿಗಳ ಮೊತ್ತಕ್ಕೆ ಈವರೆಗೆ 45ಕ್ಕಿಂತಲೂ ಹೆಚ್ಚು ಪ್ರಶಸ್ತಿ ಲಭಿಸಿವೆ ಎಂದು ಅವರು ಹೇಳಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಆಡಳಿತ ನಿರ್ದೇಶಕ ಸಿ. ಆರ್. ಮೂಲ್ಕಿ ಮಾತನಾಡಿ, ಜಯ ಸಿ. ಸುವರ್ಣ ಅವರ ಮುಂದಾಳತ್ವದಲ್ಲಿ ಬ್ಯಾಂಕ್ ಅಪೂರ್ವ ಸಾಧನೆ ಮಾಡಿದೆ ಎಂದರು.
ಮುಖ್ಯ ಮಹಾಪ್ರಬಂಧಕ ಅನಿಲ್ ಕುಮಾರ್‌ಮಾತನಾಡಿ, ಸಂಸ್ಥಾಪನಾ ದಿನಾಚರಣೆ ಒಗ್ಗಟ್ಟಿನ ದಿನವಾಗಬೇಕು. ವಿತ್ತೀಯ ವರ್ಷದಲ್ಲಿ ಭಾರತ್‌ಬ್ಯಾಂಕ್ 101 ಶಾಖೆಗಳನ್ನು ಹೊಂದುವ ನಿರೀಕ್ಷೆ ಹೊಂದಿದೆ ಎಂದು ಹೇಳಿದರು. ಮಹಾ ಪ್ರಬಂಧಕ ನಿತ್ಯಾನಂದ ಡಿ. ಕೋಟ್ಯಾನ್‌ಮಾತನಾಡಿ, ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಬೆಳವಣಿಗೆಗಾಗಿ ನಮ್ಮ ಪೂರ್ವಜರು ಬ್ಯಾಂಕನ್ನು ಸ್ಥಾಪಿಸಿ ದರು. ಅವರ ಕರ್ತವ್ಯ ಪ್ರಜ್ಞೆ ಸದಾ ಶ್ಲಾಘನೀಯ ಎಂದರು.
ಹಿರಿಯ ಅಧಿಕಾರಿಗಳಾದ ಶೋಭಾ ದಯಾನಂದ, ವಿವೇಕ್‌ಶ್ಯಾನ್‌ಭಾಗ್, ಮೋಹನ್‌ದಾಸ್‌ಹೆಜ್ಮಾಡಿ, ದಿನೇಶ್‌ಸಾಲ್ಯಾನ್, ನಿತ್ಯಾನಂದ ಕರ್ಕೇರ, ನವೀನ್‌ಬಂಗೇರ, ವಸಂತ ಹೆಜ್ಮಾಡಿ ಮೊದಲಾದವರಿದ್ದರು.
ಗ್ರಾಹಕರಿಗೆ ಮತ್ತು ಹೆತೈಷಿಗಳಿಗಾಗಿ ಚೆಂಬೂರು, ಗೋರಗಾಂವ್ ಮತ್ತು ಡೊಂಬಿವಲಿ ಶಾಖೆಗಳಲ್ಲಿ ವೈದ್ಯಕೀಯ ಶಿಭಿರವನ್ನು ಏರ್ಪಡಿಸಲಾಯಿತು.