ಮಂಗಳೂರು, ಆಗಸ್ಟ್. 24 : ಜಿಲ್ಲಾ ಬಾಲ ನ್ಯಾಯ ಮಂಡಳಿ ಅಧ್ಯಕ್ಷರಾದ ನ್ಯಾಯಾಧೀಶ ನಾಗಲಿಂಗನಗೌಡ ಪಾಟೀಲ್ ಅವರಿಗೆ ಜಿಲ್ಲಾ ಮತ್ತು ಸೆಸನ್ಸ್ ನ್ಯಾಯಾಧೀಶರಾಗಿ ಭಡ್ತಿ ನೀಡಲಾಗಿದೆ.
ಮಂಗಳೂರಿನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳೂ ಆಗಿರುವ ಪಾಟೀಲ್ ಅವರು ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದ 8 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶರಾಗಿ ಭಡ್ತಿ ಹೊಂದಿದ್ದು, ಬುಧವಾರ ಮಂಗಳೂರಿನಿಂದ ಕರ್ತವ್ಯದಿಂದ ಬಿಡುಗಡೆಯಾಗಲಿದ್ದಾರೆ.