ಕುಂದಾಪುರ: ಪ್ರಥಮ ಹೆರಿಗೆಯಲ್ಲಿ ಮಹಿಳೆಯೋರ್ವರು ಮೂರು ಮಕ್ಕಳನ್ನು ಹೆರುವ ಮೂಲಕ ಕುಟುಂಬಿಕರಲ್ಲಿ ಹರ್ಷ ಮೂಡಿಸಿದ್ದಾರೆ.
ಸುಜಾತ ನಾಯ್ಕ್ ಎನ್ನುವವರೇ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿಯಾಗಿದ್ದಾರೆ. ಇವರು ಮೂಲತಃ ಜಡ್ಕಲ್ ನಿವಾಸಿಯಾಗಿದ್ದು ವರ್ಷಗಳ ಹಿಂದೆ ತಾಲೂಕಿನ ಗುಜ್ಜಾಡಿ ಮಂಕಿ ನಿವಾಸಿ ಸಂತೋಷ್ ನಾಯ್ಕ್ ಎನ್ನುವವರನ್ನು ಮದುವೆಯಾಗಿದ್ದಾರೆ.
ತ್ರಿವಳಿ ಮಕ್ಕಳಲ್ಲಿ ಎರಡು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗು ಜನಿಸಿದ್ದು ತಾಯಿ ಸಹಿತ ಮೂವರು ಆರೋಗ್ಯವಾಗಿದ್ದಾರೆ ಎಂದು ವೈದ್ಯೆ ಡಾ. ಸುಜಾತ ಶೆಟ್ಟಿ ತಿಳಿಸಿದ್ದಾರೆ. ಮಕ್ಕಳ ತೂಕವು ಉತ್ತಮವಾಗಿದ್ದು ಒಂದು ಗಂಡು ಮಗು 2 ಕೆ.ಜಿ 100 ಗ್ರಾಂ ಹಾಗೂ ಇನ್ನಿಬ್ಬರು ಮಕ್ಕಳು ತಲಾ 2 ಕೆ.ಜಿ. ತೂಕವನ್ನು ಹೊಂದಿದ್ದಾರೆ. ಸುಜಾತ ಅವರಿಗೆ ಸಿಜೇರಿನ್ (ಶಸ್ತ್ರಚಿಕಿತ್ಸೆ) ನಡೆಸಲಾಗಿದೆ.
ಮೂವರು ಮಕ್ಕಳನ್ನು ಹೆತ್ತ ತಾಯಿಯ ಜೊತೆಗೆ ಆಕೆಯ ಪತಿ ಮತ್ತು ಸಂಪೂರ್ಣ ಕುಟುಂಬ ಹರ್ಷದಲ್ಲಿದೆ.