ಮಂಗಳೂರು : ಸುರತ್ಕಲ್ ಸಮೀಪದ ಮುಂಚೂರು, ಕೊಡಿಪಾಡಿ ನಿರ್ಜನ ಪ್ರದೇಶದಲ್ಲಿ ಯುವತಿಯ ಅಸ್ಥಿಪಂಜರವೊಂದು ಗುರುವಾರ ರಾತ್ರಿ ಪತ್ತೆಯಾಗಿದ್ದು, ಇದು ಕೆಲವು ಸಮಯಗಳ ಹಿಂದೆ ಸಂಶಯಾಸ್ಪದವಾಗಿ ಮೃತಪಟ್ಟ ಯುವತಿಯ ಅಸ್ಥಿಪಂಜರವಾಗಿರ ಬೇಕೆಂದು ಶಂಕೀಸಲಾಗಿದೆ.
ಗೇರು ಮರದ ಕೊಂಬೆಗೆ ಚೂಡಿದಾರದ ಶಾಲನ್ನು ಕಟ್ಟಿದ್ದು ನೆಲದಲ್ಲಿ ಅಸ್ಥಿಪಂಜರದ ಕರುಹು ಹಾಗೂ ತಲೆಯ ಬುರುಡೆ ಪತ್ತೆಯಾಗಿದೆ. ಅದರ ಸನಿಹದಲ್ಲಿ ವ್ಯಾನಿಟಿ ಬ್ಯಾಗ್, ಚೂಡಿದಾರ್ ಹಾಗೂ ಪಾದರಕ್ಷೆ ಪತ್ತೆಯಾಗಿದೆ. ವ್ಯಾನಿಟಿ ಬ್ಯಾಗ್‌ನಲ್ಲಿ ಯುವತಿಯ ಗುರುತು ಚೀಟಿ, ಅಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಮತದಾರರ ಚೀಟಿ ಪತ್ತೆಯಾಗಿದೆ.
ಮತದಾರರ ಚೀಟಿ ಹಾಗೂ ಅಧಾರ್ ಕಾರ್ಡ್‌ನ ಮಾಹಿತಿ ಪ್ರಕಾರ ಶವವು ಅದ್ಯಪಾಡಿ ನಿವಾಸಿ ಕೃಷ್ಣ ಕುಂದರ್ ಎಂಬವರ ಪುತ್ರಿ ಶ್ವೇತಾ ಕುಂದರ್ (26) ಎಂದು ಗುರುತಿಸಲಾಗಿದ್ದು. ಆ ಅಸ್ಥಿಪಂಜರದ ಬಳಿಯಿದ್ದ ಆಧಾರ್ ಕಾರ್ಡ್ ಹಾಗೂ ಅಲ್ಲೇ ಎಟಿಎಂ ಮತ್ತು ಆಕೆಯ ಮೈಮೇಲಿದ್ದ ಆಭರಣಗಳ ಆಧಾರದಲ್ಲಿ ಗುರುತು ಪತ್ತೆ ಹಚ್ಚಲಾಗಿದೆ. ಅಕೆ ಕಂಕನಾಡಿಯ ಕೌನ್ಸೆಲಿಂಗ್ ಕೇಂದ್ರದಲ್ಲಿ ನೌಕರಿ ಮಾಡುತ್ತಿದ್ದಳು. ಈಕೆಯ ಸಾವಿನ ಬಗ್ಗೆ ತನಿಖೆ ನಡೆಯುತ್ತಿದ್ದು. ಸಿಕ್ಕಿರುವ ಅಸ್ಥಿಪಂಜರದ ಪರೀಕ್ಷೆ ನಡೆಸಲಾಗುತ್ತಿದ್ದು ಇನ್ನಷ್ಟೇ ನಿಖರವಾಗಿ ಸಾವಿನ ಮಾಹಿತಿ ಲಭಿಸಬೇಕಿದೆ.
ಘಟನಾ ಸ್ಥಳಕ್ಕೆ ಶ್ವಾನ ದಳ, ಅಪರಾಧ ಪತ್ತೆ ತಜ್ಞರ ಹಾಗೂ ವೈದ್ಯರ ತಂಡ ಆಗಮಿಸಿದ್ದು, ಮೃತ ಯುವತಿಯ ಅಸ್ಥಿಪಂಜರದ ಕುರುಹುಗಳನ್ನು ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆ ನಡೆಸಿ ಅನಂತರ ಅ ವರದಿಯ ಅಧಾರದಲ್ಲಿ ಇದು ಕೊಲೆಯೊ ಅಥವಾ ಆತ್ಮ ಹತ್ಯೆಯೋ ನಿರ್ಧರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸುರತ್ಕಲ್ ಠಾಣಾಧಿಕಾರಿ ಬಿ. ಚೆಲುವರಾಜ್, ಎಸೈ ಕುಮಾರೇಶ್ವರನ್, ಎಸೈ ಪೂವಪ್ಪರವರು ತನಿಖೆ ನಡೆಸುತ್ತಿದ್ದಾರೆ.
ಜೂ. 26ರಂದು ನಾಪತ್ತೆ :
ಜೂ. 26ರಂದು ಕೂಳೂರಿನಿಂದ ತಮ್ಮ ಸಹೋದರ ಸಂಬಂಧಿ ಮನೆಯಲ್ಲಿ ವಾಸ್ತವ್ಯ ಹೊಂದಿದ್ದು ಅಂದು ಕೆಲಸಕ್ಕೆಂದು ಹೋಗಿದ್ದಳು. ಕೌನ್ಸೆಲಿಂಗ್ ಸೆಂಟರ್‌ನವರು ಕೆಲಸಕ್ಕೆ ಯಾಕೆ ಬಂದಿಲ್ಲ ಎಂದು ಆಕೆಗೆ ಪೋನ್ ಮಾಡಿದ್ದಾಗ ನಾನು ಕೆಲಸಕ್ಕೆ ಬರುತ್ತೇನೆ ಎಂದು ಹೇಳಿದ್ದು ಅನಂತರ ಆಕೆಯ ಪೋನ್ ಸ್ವಿಚ್ ಆಫ್ ಆಗಿತ್ತು.
ಕಾವೂರು ಪೊಲೀಸರು ಆಕೆಯ ಪ್ರೇಮಿ ಮಧ್ಯ ನಿವಾಸಿ ನಿತೇಶ್‌ನನ್ನು ಪೊಲೀಸರು ಕರೆಸಿ ವಿಚಾರಿಸಿ ಬಿಟ್ಟಿದ್ದರು. ತಂದೆ ತಾಯಿ ಇಲ್ಲದ ಶ್ವೇತಾ ತನ್ನ ಚೇಳಾರದ ಸಂಬಂಧಿಕರ ಮನೆಯಲ್ಲಿ ಸಹೋದರಿಯ ಜತೆ ವಾಸಿಸುತ್ತಿದ್ದಳು.ಬಳಿಕ ಈಕೆ ಕಳೆದ ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದಳು.
ಆಕೆಯ ಮಾವ ಕಾವೂರು ಪೊಲೀಸ್ ಠಾಣೆಯಲ್ಲಿ ಈಕೆ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಜೂ. 27ರಂದು ನಾಪತ್ತೆ ಪ್ರಕರಣ ದಾಖಲಾಗಿತ್ತು.