ಕನ್ನಡ ವಾರ್ತೆಗಳು

ಪಾಲಿಕೆಯ ನೂತನ ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ ಅವರು ಅಧಿಕಾರ ಸ್ವೀಕಾರ

Pinterest LinkedIn Tumblr

Mcc_HNGopalkrishna

ಮಂಗಳೂರು, ಆ.5: ಮಂಗಳೂರು ಮಹಾನಗರ ಪಾಲಿಕೆಯ ನೂತನ ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಮನಪಾ ಪ್ರಭಾರ ಅಯುಕ್ತರಾಗಿದ್ದ ಗೋಕುಲ್ ದಾಸ್ ನಾಯಕ್ ಅವರಿಂದ ನೂತನ ಕಮಿಷನರ್ ಡಾ.ಎಚ್.ಎನ್.ಗೋಪಾಲಕೃಷ್ಣವರು ಅಧಿಕಾರ ಸ್ವೀಕರಿಸಿದರು.

ಹಾಸನದ ಅಪರ ಜಿಲ್ಲಾಧಿಕಾರಿಯಾಗಿದ್ದ ಡಾ.ಎಚ್.ಎನ್.ಗೋಪಾಲಕೃಷ್ಣ ಅವರನ್ನು ಅಗಸ್ಟ್ 5ರಂದು ಮಂಗಳೂರು ಮಹಾನಗರ ಪಾಲಿಕೆಯ ಅಯುಕ್ತರನ್ನಾಗಿ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿತ್ತು.

ಈ ಹಿಂದೆ ಮನಪಾ ಆಯುಕ್ತೆಯಾಗಿದ್ದ ಹೆಫ್ಸಿಬಾರಾಣಿ ಕೊರ್ಲಪತಿ ಜೂನ್‌ನಲ್ಲಿ ವರ್ಗಾವಣೆಯಾಗಿದ್ದು, ಕಳೆದ ಎರಡು ತಿಂಗಳಿನಿಂದ ಮನಪಾ ಆಯುಕ್ತರ ಹುದ್ದೆ ಖಾಲಿಯಾಗಿತ್ತು. ಐಎಎಸ್ ಶ್ರೇಣಿಯ ಹೆಫ್ಸಿಬಾರಾಣಿ 2015ರ ಜನವರಿ 1ರಂದು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತೆಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದೀಗ ಮನಪಾ ನೂತನ ಆಯುಕ್ತರಾಗಿ ನೇಮಕಗೊಂಡಿರುವ ಕೆಎಎಸ್ ಅಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣರವರು ಹಾಸನ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಶುಕ್ರಾವಾರ ಅಧಿಕಾರ ಸ್ವೀಕರಿಸಿದ ನಂತರ ನೂತನ ಅಯುಕ್ತರು ಅಧಿಕಾರಿಗಳು ಹಾಗೂ ಸಿಬಂದಿಗಳ ಜತೆ ಸಭೆ ನಡೆಸಿದರು. ಅನಂತರ ಆರೋಗ್ಯ ಇಲಾಖೆ ಹಾಗೂ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಯುಕ್ತರು ಪಾಲ್ಗೊಂಡರು.

Write A Comment