ಮಂಗಳೂರು/ ಬಜ್ಪೆ,ಸೆ.15: ಕೆಲವು ದಿನಗಳ ಹಿಂದೆ ವಾಮಂಜೂರಿನ ಕೊರಗಜ್ಜ ದೈವಸ್ಥಾನದಲ್ಲಿ ನಡೆದಿದ್ದ ಕೊರಗಜ್ಜನ ಮೂರ್ತಿ ಹಾಗೂ ಪ್ರಭಾವಳಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ದೈವದ ಪ್ರಭಾವಳಿ ಹಾಗೂ ಸತ್ತಿಗೆ ಪಚ್ಚನಾಡಿಯ ಗುಡ್ಡ ಪ್ರದೇಶದಲ್ಲಿ ಪತ್ತೆಯಾಗಿದೆ.
ಪತ್ತೆಯಾದ ಬೆಳ್ಳಿ ಮತ್ತು ಕಂಚಿನ ಪರಿಕರಗಳನ್ನು ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ಕೊರಗಜ್ಜನ ಮೂರ್ತಿ ಇನ್ನೂ ಪತ್ತೆಯಾಗದೇ ಇದ್ದು ತನಿಖೆ ಮುಂದುವರಿದಿದೆ.
ಕಳ್ಳರು ಕಳವುಗೈದ ಸೊತ್ತನ್ನು ಇಲ್ಲಿಗೆ ತಂದು ಬಳಿಕ ಪ್ರಭಾವಳಿಯನ್ನು ತ್ಯಜಿಸಿ ಮೂರ್ತಿ ಯನ್ನು ಕೊಂಡೊಯ್ದಿರಬೇಕೆಂದು ಶಂಕಿಸಲಾಗಿದೆ. ಮಂಗಳೂರು ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.