ಕನ್ನಡ ವಾರ್ತೆಗಳು

ಕನ್ಯಾನ ಕೊಲೆ ಪ್ರಕರಣ : ಮೂರನೇ ಆರೋಪಿ ಪೊಲೀಸ್ ವಶ.

Pinterest LinkedIn Tumblr

arrest

ಬಂಟ್ವಾಳ, ಸೆ.23 : ಕನ್ಯಾನ ಪೇಟೆಯಲ್ಲಿ ಆ.30ರಂದು ನಡೆದಿದ್ದ ಯುವಕನ ಕೊಲೆ ಹಾಗೂ ಇಬ್ಬರಿಗೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಮೂರನೆ ಆರೋಪಿಯನ್ನು ವಿಟ್ಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ತಲಪಾಡಿ ಜೋಡುಮಾರ್ಗ ನಿವಾಸಿ ನಿಝಾರ್ ಯಾನೆ ನಿಝಾಮುದ್ದೀನ್(24) ಬಂಧಿತ ಆರೋಪಿ. ಪ್ರಮುಖ ಆರೋಪಿ ನಪ್ಪಟೆ ರಫೀಕ್ ಎಂಬಾತನ ಸಹಚರನಾಗಿರುವ ನಿಝಾರ್ ಬಂಟ್ವಾಳ ಬಿ.ಸಿ.ರೋಡ್‌ನಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಬಂಧಿಸಿದ್ದಾರೆ.

ಆ.30ರಂದು ಕೇರಳದ ಬಾಯಿಕಟ್ಟೆ ನಿವಾಸಿ ಆಸಿಫ್ ಹಾಗೂ ತಂಡದವರು ಕನ್ಯಾನದ ಮನೆಯೊಂದರಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಆಗಮಿಸಿ ಹಿಂದಿರುಗಿ ಹೋಗುತ್ತಿದ್ದ ವೇಳೆ ಕಾರಿನಲ್ಲಿ ಬಂದ ಉಪ್ಪಳ ಕೈಯ್ಯಿರ ಗ್ರಾಮದ ಅಟ್ಟೆಗೋಳಿ ನಿವಾಸಿ ನಪ್ಪಟೆ ರಫೀಕ್ ಯಾನೆ ಮುಹಮ್ಮದ್ ರಫೀಕ್ ತಂಡ ಆಸಿಫ್‌ನನ್ನು ಕೊಲೆಗೈದು ಬಳಿಕ ಆತನ ಸ್ನೇಹಿತರಾದ ಹಕೀಂ ಹಾಗೂ ರಿಯಾಝ್ ಎಂಬವರಿಗೆ ಹಲ್ಲೆಗೈದು ಪರಾರಿಯಾಗಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಸೆ.4ರಂದು ಪ್ರಮುಖ ಆರೋಪಿ ನಪ್ಪಟೆ ರಫೀಕ್ ಹಾಗೂ ಕಾರು ಚಾಲಕ ಪೈವಳಿಕೆ ಗ್ರಾಮದ ಬಾಯಿಕಟ್ಟೆ ನಿವಾಸಿ ಪದ್ದು ಯಾನೆ ಪದ್ಮನಾಭ (24)ರನ್ನು ಬಂಧಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ತಂಡಕ್ಕೆ ಸಹಾಯ ಮಾಡಿದ ಆರೋಪದಲ್ಲಿ ಕನ್ಯಾನದ ಇಕ್ಬಾಲ್ ಎಂಬಾತನನ್ನು ಈ ಹಿಂದೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment