ಕನ್ನಡ ವಾರ್ತೆಗಳು

ಶಿಕ್ಷಣದ ನೀತಿ ನಿರೂಪಣೆಗಳು ಯಾವತ್ತು ಜ್ಞಾನಾಧಾರಿತ ಸಮಾಜವನ್ನು ಕಟ್ಟುವ ಭಾಗವಾಗಬೇಕು‌ : ಎಂ.ಜೆ.ಅಕ್ಬರ್‌

Pinterest LinkedIn Tumblr

Akbr_alosyas_collg_1

ಮಂಗಳೂರು,ಸೆ.28 : ಪ್ರಸಿದ್ಧ ಪತ್ರಕಾರ, ಅಂಕಣಕಾರ ಹಾಗೂ ಲೇಖಕರಾದ ಶ್ರೀ ಎಂ.ಜೆ.ಅಕ್ಬರ್‌ರವರು ಸಂತ ಅಲೋಶಿಯಸ್ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನ ಶೈಕ್ಷಣಿಕ ಮಂಡಳಿ ಸಭೆಯ ಸದಸ್ಯರನ್ನುದ್ದೇಶಿಸಿ ಮಾತನಾಡಿದರು.

ಉನ್ನತ ಶಿಕ್ಷಣದ ಬಗ್ಗೆ ವ್ಯಾಖ್ಯಾನಿಸುತ್ತಾ ಶಿಕ್ಷಣದ ನೀತಿ ನಿರೂಪಣೆಗಳು ಯಾವುದೇ ಸರಕಾರದ ಜನಪ್ರಿಯ ಕಾರ್ಯಕ್ರಮದ ಭಾಗವಾಗದೇ ಜ್ಞಾನಾಧಾರಿತ ಸಮಾಜವನ್ನು ಕಟ್ಟುವ ಭಾಗವಾಗಬೇಕು‌ ಎಂದು‌ ಅಭಿಪ್ರಾಯ ಪಟ್ಟರು.ಪಶ್ಚಿಮದ ಕ್ರೈಸ್ತ ಮಿಶನರಿಗಳು ದಕ್ಷಿಣ-ಪೂರ್ವ‌ಏಶಿಯಾದ ಇತರ ದೇಶಗಳಿಗಿಂತ ಭಾರತದಲ್ಲಿ ನೀಡಿರುವ ಕೊಡುಗೆಗಳನ್ನು ಚರಿತ್ರಾರ್ಹ‌ಎಂದು ಬಣ್ಣಿಸಿ ಶ್ಲಾಘಿಸಿದರು.

Akbr_alosyas_collg_2 Akbr_alosyas_collg_3

ಮಾಜಿರಕ್ಷಣಾ ಸಚಿವ ಶ್ರಿ ಜಾರ್ಜ್ ಫರ್ನಾಂಡೀಸ್, ಪ್ರಸಿದ್ಧ ಲೇಖಕ ಶ್ರೀ ಅರವಿಂದ‌ ಅಡಿಗರಂತಹ ಅಲೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿಗಳ ಜೊತೆ ತಮ್ಮ ಒಡನಾಟಗಳನ್ನು ಸ್ಮರಿಸುತ್ತಾ, ಸಂತ ಅಲೋಶಿಯಸ್ ಕಾಲೇಜು ಸಮಾಜಕ್ಕೆ ನೀಡಿರುವ ಮಹತ್ರ ಕೊಡುಗೆಗಳನ್ನು ಪ್ರಶಂಸಿದರು.

ಪ್ರಾಂಶುಪಾಲ ರೆ.ಫಾ.ಸ್ವೀಬರ್‍ಟ್ ಡಿಸಿಲ್ವಾ ಸ್ವಾಗತಿಸಿದರು. ಸಂತ ಅಲೋಶಿಯಸ್ ಸಮೂಹ ಸಂಸ್ಥೆಗಳ ರೆಕ್ಟರ್‌ರೆ.ಫಾ.ಡೆಂಜಿಲ್ ಲೋಬೊ ಭಾಗವಹಿಸಿದ್ದರು.

Write A Comment