ಕನ್ನಡ ವಾರ್ತೆಗಳು

ಸತತ ನಾಲ್ಕನೇ ಭಾರಿ ಚಾಂಪಿಯನ್ ಪಟ್ಟ ತನ್ನ ತೆಕ್ಕೆಗೆ ಹಾಕಿಕೊಂಡ ಎಸ್ ಎಸ್ ಎಫ್ ರೆಂಜಾಡಿ ಶಾಖೆ.

Pinterest LinkedIn Tumblr

renjadi_ssf_photo_1

ದೇರಳಕಟ್ಟೆ,ಅ 14: ಕರ್ನಾಟಕ ರಾಜ್ಯ ಎಸ್ ಎಸ್ ಎಫ್ ಅಧೀನದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಸುವ ಇಸ್ಲಾಮಿಕ್ ಕಲಾ ಪ್ರತಿಭೊತ್ಸವದಲ್ಲಿ 15 ಎಸ್ ಎಸ್ ಎಫ್ ಶಾಖೆಗಳನ್ನೊಳಗೊಂಡ ದೇರಳಕಟ್ಟೆ ಸೆಕ್ಟರ್ ಮಟ್ಟದಲ್ಲಿ ಎಸ್ ಎಸ್ ಎಫ್ ರೆಂಜಾಡಿ ಶಾಖೆಯು ಐದು ಭಾರಿ ಭಾಗವಹಿಸಿ ಸತತ ನಾಲ್ಕನೇ ಭಾರಿ ಚಾಂಪಿಯನ್ ಪಟ್ಟವನ್ನು ತನ್ನ ಮಡಿಲಿಗೆ ಹಾಕಿ ಕೊಂಡಿದೆ.

ದೇರಳಕಟ್ಟೆ ಸಮೀಪದ ಬಧ್ಯಾರ್ ಎಂಬಲ್ಲಿ ಮರ್ಹೂಂ ಪೋಸೋಟ್ ತಂಗಲ್ ವೇಧಿಕೆಯಲ್ಲಿ ಆದಿತ್ಯವಾರ ಸಬ್-ಜೂನಿಯರ್,ಜೂನಿಯರ್, ಸೀನಿಯರ್ ಹಾಗೂ ಜನರಲ್ ಎಂಬ ನಾಲ್ಕು ವಿಭಾಗದಲ್ಲಿ 62 ವಿಷಯಗಳಲ್ಲಿ ನಡೆದ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಎಸ್ ಎಸ್ ಎಫ಼್ ರೆಂಜಾಡಿ ಶಾಖೆಯು 14 ಶಾಖೆಗಳನ್ನು ಸೋಲಿಸಿ ಚಾಂಪಿಯನ್ ಪಟ್ಟವನ್ನು ಈ ಭಾರಿಯೂ ತನ್ನ ನಾಡಿಗೆ ತೆಗೆದುಕೊಂಡು ಹೋಯಿತು.

renjadi_ssf_photo_2 renjadi_ssf_photo_3

ಆರಂಭದಿಂದಲೇ ರೆಂಜಾಡಿ ಶಾಖೆಯು ತನ್ನ ಅಂಕಗಳನ್ನು ಹೆಚ್ಚಿಸುತ್ತಾ ಕೊನೆಗೆ 235 ಅಂಕವನ್ನು ಪಡೆದು ಬ್ರಹತ್ ಅಂತರದಿಂದ ಇನ್ನಿತರ ಶಾಖೆಗಳನ್ನು ಸೋಲಿಸಿ ಮಗದೊಮ್ಮೆ ತನ್ನ ಬಲಿಷ್ಟತೆಯನ್ನು ತೋರ್ಪಡಿಸಿತು.110 ಅಂಕಗಳೊಂದಿಗೆ ಬೆಳರಿಂಗೆ ಕಿನ್ಯಾ ಶಾಖೆಯು ದ್ವಿತೀಯ ಸ್ಥಾನವನ್ನು ಪಡೆದರೆ ಕುತುಬಿ ನಗರ ಶಾಖೆಯು 104 ಅಂಕದೊಂದಿಗೆ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು.ರೆಂಜಾಡಿ ಶಾಖೆಯ ಎರಡು ಭಾರಿಯ ರಾಜ್ಯ ಮಟ್ಟದ ಪ್ರತಿಭೆ ಸಫೀರ್ ಯು ಎ ಸತತ ಮೂರನೇ ಭಾರಿ ವ್ಯಯಕ್ತಿಕ ಚಾಂಪಿಯನ್ ಪ್ರಸಸ್ತಿ ಪಡೆದು “ಹ್ಯಾಟ್ರಿಕ್ ಚಾಂಪಿಯನ್ ವೀರ” ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದೇ ಸಂದರ್ಭದಲ್ಲಿ ಚಾಂಪಿಯನ್ ವೀರರಿಗೆ ಎಸ್ ಎಸ್ ಎಫ್ ರೆಂಜಾಡಿ ಶಾಖಾ ಅದ್ಯಕ್ಷ ಸ್ವಾಲಿಹ್ ಬಿ ಆರ್ ಮತ್ತು ಎಸ್ ವೈ ಎಸ್ ನೇತಾರ ಲತೀಫಾಕ ಹಾಗೂ ಅನೇಕ ನೇತಾರರು ಅಭಿನಂಧನೆಯ ಸರಮಾಲೆಯನ್ನೇ ಸಲ್ಲಿಸಿದರು.

ವಿಶೇಷತೆ ಏನಂದರೆ ಪ್ರತಿಭೋತ್ಸವ ನಗರದಲ್ಲಿ ರೆಂಜಾಡಿ ಮಕ್ಕಳ ಬಾಯಿಯಲ್ಲಿ ಮೊಳಗುತ್ತಾ ಇದ್ದ ಘೋಷಣೆ ಒಂದೇ ಆಗಿತ್ತು “ಬಿಟ್ಟು ಕೊಡಲ್ಲ ಬಿಟ್ಟು ಕೊಡಲ್ಲ ಚಾಂಪಿಯನ್ ಪಟ್ಟ ಬಿಟ್ಟು ಕೊಡಲ್ಲ”.

ವರದಿ : ಆರೀಫ್ ಕಲ್ಕಟ್ಟ

Write A Comment