ಕನ್ನಡ ವಾರ್ತೆಗಳು

ಅ.17 : ತುಳು ಭವನದ ‘ಸಿರಿ ಚಾವಡಿ’ಯಲ್ಲಿ ತುಳುವಿನಲ್ಲಿ ಚುಟುಕು ಸಾಹಿತ್ಯ ವಿಚಾರಗೋಷ್ಠಿ ಮತ್ತು ಕವಿಗೋಷ್ಠಿ

Pinterest LinkedIn Tumblr

tulu_nada_siri

ಮಂಗಳೂರು,ಅ.14 : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಇದರ ಸಹಯೋಗದಲ್ಲಿ ತುಳುಭವನ ಉರ್ವಸ್ಟೋರ್, ಮಂಗಳೂರು ಇಲ್ಲಿನ ‘ಸಿರಿಚಾವಡಿ’ಯಲ್ಲಿ ಅಕ್ಟೋಬರ್ 17 ಶನಿವಾರದಂದು ಅಪರಾಹ್ನ ಗಂಟೆ 2.30ಕ್ಕೆ ‘ತುಳುವಿನಲ್ಲಿ ಚುಟುಕು ಸಾಹಿತ್ಯ ವಿಚಾರಗೋಷ್ಠಿ ಮತ್ತು ಕವಿಗೋಷ್ಠಿ’ ಕಾರ್ಯಕ್ರಮ ನಡೆಯಲಿರುವುದು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ಎಮ್. ಜಾನಕಿ ಬ್ರಹ್ಮಾವರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಶ್ರೀ ಇರಾ ನೇಮು ಪೂಜಾರಿ ಇವರು ವಹಿಸಲಿದ್ದಾರೆ.

ಡಾ. ಧನಂಜಯ ಕುಂಬ್ಳೆ, ಪ್ರಾಧ್ಯಾಪಕರು, ಎಸ್. ವಿ. ಪಿ ಕನ್ನಡ ಅಧ್ಯಯನ ಕೇಂದ್ರ ಮಂಗಳೂರು ವಿಶ್ವವಿದ್ಯಾನಿಲಯ ‘ತುಳು ಸಾಹಿತ್ಯದಲ್ಲಿ ಚುಟುಕುಗಳು’ ಮತ್ತು ಶ್ರೀ ಚೇತನ್ ಮುಂಡಾಜೆ, ಉಪನ್ಯಾಸಕರು, ಎಸ್. ವಿ ಎಸ್ ಕಾಲೇಜು, ಬಂಟ್ವಾಳ ಇವರು ‘ತುಳು ಪತ್ರಿಕೆಗಳಲ್ಲಿ ಚುಟುಕು ಸಾಹಿತ್ಯ’ ದ ಬಗ್ಗೆ ವಿಚಾರ ಮಂಥನ ಮಾಡಲಿದ್ದಾರೆ.

ತುಳು ಚುಟುಕು ಕವಿಗೋಷ್ಠಿಯಲ್ಲಿ ರಾಜೇಂದ್ರ ಕೇದಿಗೆ, ಚೆನ್ನಪ್ಪ ಅಳಿಕೆ, ರಾಜೇಶ್ ಶೆಟ್ಟಿ ದೋಟ, ಅಂಡಾಳ ಗಂಗಾಧರ ಶೆಟ್ಟಿ, ದಾ. ನ ಉಮಾಣ್ಣ ಕೊಕ್ಕಪುಣಿ, ಸುಲೋಚನಾ ಪಚ್ಚಿನಡ್ಕ, ಜಯಶ್ರೀ ಇಡ್ಕಿದು, ಅಕ್ಷತಾ ಡಿ. ಸಾಲಿಯಾನ್ ಇವರುಗಳು ಕವಿಗಳಾಗಿ ಭಾಗವಹಿಸಲಿರುವರು.

ಕವಿಗಳು, ಸಾಹಿತ್ಯಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್‍ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ. ಬಿ ಇವರು ವಿನಂತಿಸಿದ್ದಾರೆ.

Write A Comment