ಕನ್ನಡ ವಾರ್ತೆಗಳು

ಬಾರ್ಕೂರು ಮಹಾಸಂಸ್ಥಾನದ ಗುರುವಂದನೆಯಲ್ಲಿ ಯಡಿಯೂರಪ್ಪರನ್ನು ಹೊಗಳಿದ ಶ್ರೀ ವಿಶ್ವಸಂತೋಷ ಭಾರತೀ ಶ್ರೀ

Pinterest LinkedIn Tumblr

ಉಡುಪಿ: ನಾಯಕತ್ವದ ಗುಣ ಬಿ.ಎಸ್.ಯಡಿಯೂರಪ್ಪರವರಲ್ಲಿದೆ, ಕಳಸಾ ಬಂಡೂರಿ ಹೋರಾಟಕ್ಕೆ ಹೊಸ ಮೆರಗು ಹುಟ್ಟಿದ್ದು ಬಿ ಎಸ್.ಯಡಿಯೂರಪ್ಪನವರ ಹೋರಾಟದ ಕಹಳೆಯ ನಂತರವೇ ಎಂದು ಶ್ರೀ ಬಾರ್ಕೂರು ಮಹಾಸಂಸ್ಥಾನದ ಶ್ರೀ ವಿಶ್ವಸಂತೋಷ ಭಾರತೀ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

ಶ್ರೀ ಬಾರ್ಕೂರು ಮಹಾಸಂಸ್ಥಾನದ ದೈವ ದೇಗುಲಗಳ ಶಿಲಾನ್ಯಾಸ ಕಾರ್‍ಯಕ್ರಮದಲ್ಲಿ ಅವರು ಮಾತನಾಡುತ್ತಾ, ರಾಜ್ಯದ ಪ್ರಭಾವಿ ನಾಯಕರುಗಳಲ್ಲಿ ದೇಗುಲದ ಶಿಲನ್ಯಾಸ ನೆರವೇರಿಸುವುದು ನಮ್ಮ ಆಸೆಯಾಗಿತ್ತು ಎಂದರು.

Barkuru_Guru vandhane_Yadiyurapa visit (5) Barkuru_Guru vandhane_Yadiyurapa visit (1) Barkuru_Guru vandhane_Yadiyurapa visit (4) Barkuru_Guru vandhane_Yadiyurapa visit (2) Barkuru_Guru vandhane_Yadiyurapa visit (6) Barkuru_Guru vandhane_Yadiyurapa visit (3) Barkuru_Guru vandhane_Yadiyurapa visit (7)

ದೇಗುಲದ ಶಿಲಾನ್ಯಾಸವನ್ನು ಮಾಜಿಮುಖ್ಯಮಂತ್ರಿ ಯಡಿಯೂರಪ್ಪ ನೆರವೇರಿಸಿ, ಬಾರ್ಕೂರು ಮಹಾಸಂಸ್ಥಾನವು ದೈವ ದೇಗುಲಗಳ ನಿರ್ಮಾಣದ ಮೂಲಕ ಐಸಿಹಾಸಿಕ ಪ್ರಸಿದ್ಧಿಗಳನ್ನು ಪುನರ್ ಪರಿಚಯಿಸುತ್ತಿದೆ, ನಮ್ಮ ದೇಶವು ಧರ್ಮದ ಆಧಾರದ ಮೇಲೆ ನಿಂತಿದೆ, ರಾಷ್ಟ್ರಕ್ಕೆ ಧರ್ಮವೇ ಶಕ್ತಿ, ಆದ್ಯಾತ್ಮಾಕ ಚಿಂತನೆಗಳನ್ನು ಯುವಜನತೆಗೆ ತಿಳಿಸಿ ಸಮಾಜದ ಸ್ವಾಥ್ಯ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಸಮುದಾಯ ಭವನದ ಶಿಲಾನ್ಯಾಸವನ್ನು ಸಂಸದೆ ಶೋಭ ಕರಂದ್ಲಾಜೆ ಉದ್ಘಾಟಿಸಿ, ಎಲ್ಲಾ ಉರುಗಳಲ್ಲಿ ಅತ್ಯಂತ ಪ್ರಭಾವ ಬೀರುವ ಬಂಟರ ಸಮುದಾಯವು ಜಾಗೃತ ಸಮುದಾಯವಾಗಿದೆ, ಬಂಟರ ಸಮುದಾಯದಲ್ಲಿ ಶ್ರೀಮಂತ ಹಾಗೂ ಬಡವರು ಇಬ್ಬರೂ ಇದ್ದು ಬಡವರನ್ನು ಆರ್ಥಿಕವಾಗಿ ಸದ್ರಢವಾಗಿಸುವತ್ತ ಎಲ್ಲರೂ ಸಹಕರಿಸಬೇಕೆಂದರು.

ಶ್ರೀ ವಿಶ್ವಸಂತೋಷ ಭಾರತೀ ಶ್ರೀಪಾದಂಗಳರವರ ಜನ್ಮ ದಿನಾಚರಣೆಯ ಅಂಗವಾಗಿ ಗುರುವಂದನಾ ಕಾರ್‍ಯಕ್ರಮವನ್ನು ನಿವೃತ್ತ ಪಾಂಶುಪಾಲ ಸೀತಾರಾಮ ಶೆಟ್ಟಿ ದಂಪತಿಗಳು ನೆರವೇರಿಸಿದ್ದರು.

ಇದೇ ಸಂದರ್ಭದಲ್ಲಿ ಶ್ರೀ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ದೇಗುಲದ ನಿರ್ಮಾಣಕ್ಕೆ ಮೂರುಲಕ್ಷ ರೂವನ್ನು ದೇಣಿಗೆಯಾಗಿ ನೀಡಿದ್ದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಮರನಾಥ ಶೆಟ್ಟಿ, ಉದ್ಯಮಿ ಶಂಕರ ಶೆಟ್ಟಿ, ಬಾರ್ಕೂರು ಗ್ರಾಪಂ ಅಧ್ಯಕ್ಷೆ ಶೈಲಾ ಡಿಸೋಜ, ಯಡ್ತಾಡಿ ಗ್ರಾಪಂ ಅಧ್ಯಕ್ಷ ಪ್ರಕಾಶ ಶೆಟ್ಟಿ, ಶ್ರೀ ಬಾರ್ಕೂರು ಮಹಾಸಂಸ್ಥಾನದ ಸ್ವಾಗತ ಸಮಿತಿಯ ಅಧ್ಯಕ್ಷ ಬಿ.ಅಣ್ಣಪ್ಪ ಹೆಗ್ಡೆ, ಸ್ಥಾನೀಯ ಸಮಿತಿ ಅಧ್ಯಕ್ಷ ಬಿ.ಶಾಂತರಾಮ ಶೆಟ್ಟಿ ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಮಹಾಸಂಸ್ಥಾನದ ಟ್ರಸ್ಟಿ ವಿಠಲ್ ಹೆಗ್ಡೆ ಉಪಸ್ಥಿತರಿದ್ಧರು.

Write A Comment