ಕನ್ನಡ ವಾರ್ತೆಗಳು

ಮೂಡುಬಿದಿರೆ :ಪ್ರಶಾಂತ್ ಪೂಜಾರಿಯ ಹತ್ಯೆಯನ್ನು ಕಣ್ಣಾರೆ ಕಂಡ ವ್ಯಕ್ತಿ ಆತ್ಮಹತ್ಯೆ

Pinterest LinkedIn Tumblr

prasth_eyewitnes_sused

ಮೂಡುಬಿದಿರೆ,ಅ.16: ಮೂಡಬಿದ್ರೆಯಲ್ಲಿ ಹಾಡುಹಗಲೇ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿಯ ಹತ್ಯೆಯನ್ನು ಕಣ್ಣಾರೆ ಕಂಡಿರುವ ಪ್ರಮುಖ ಪ್ರತ್ಯಕ್ಷದರ್ಶಿಯೊಬ್ಬರು ಗಾಂಧಿ ನಗರದ ಕಡ್ದಬೆಟ್ಟುವಿನಲ್ಲಿರುವ ತನ್ನ ಮಗಳ ಮನೆಯ ಶೆಡ್ಡಿನಲ್ಲಿ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಜೆ ನಡೆದಿದೆ.

ಎಳನೀರು ವ್ಯಾಪಾರಿಯಾಗಿರುವ ವಾಮನ ಕೋಟ್ಯಾನ್ (60) ಆತ್ಮಹತ್ಯೆ ಮಾಡಿಕೊಂಡಿವರು. ವಾಮನ ಕೋಟ್ಯಾನ್ ಸಮಾಜ ಮಂದಿರ ಕಾಂಪ್ಲೆಕ್ಸ್‌ನ ಬಳಿ ವ್ಯಾಪಾರ ನಡೆಸುತ್ತಿದ್ದರು. ಗುರುವಾರ ಮಧ್ಯಾಹ್ನ 3 ಗಂಟೆಯವರೆಗೆ ವ್ಯಾಪಾರ ನಡೆಸಿ ಬಳಿಕ ಅಲ್ಲಿಂದ ಹೊರಟಿದ್ದರು.

ಆದರೆ ನಿಗದಿತ ಸಮಯಕ್ಕೆ ಮನೆಗೆ ಬಾರದಿರುವುದರಿಂದ ಅಪಹರಣ ಆಗಿರಬಹುದೆಂದು ಮನೆಯವರು ಶಂಕಿಸಿ ಪೊಲೀಸರಿಗೆ ದೂರು ನೀಡಿದ್ದರು. ಹುಡುಕಾಟ ನಡೆಸಿದಾಗ ಮಗಳ ಮನೆಯ ಶೆಡ್ಡಿನಲ್ಲಿ ಇವರ ಮೊಬೈಲ್ ರಿಂಗೆಣಿಸುವುದು ಕಂಡು ಕಿಟಕಿಯಲ್ಲಿ ಗಮನಿಸಿದಾಗ ಆತ್ಮಹತ್ಯೆ ಗೈದಿರುವುದು ಕಂಡು ಬಂತು.

ವಾಮನ ಕೋಟ್ಯಾನ್‌ರ ಕಣ್ಣೆದುರೇ ಪ್ರಶಾಂತ್ ಪೂಜಾರಿಯ ಹತ್ಯೆಯಾಗಿದ್ದು, ಬಳಿಕ ಭೀತಿ ಹೊಂದಿದ್ದ ರೆನ್ನಲಾಗಿದೆ. ಘಟನೆಯ ಬಳಿಕ ಪೊಲೀಸರು ಇವರನ್ನು ವಿಚಾರಣೆಗೆ ಒಳಪಡಿಸಿದ್ದರು.

ಪೊಲೀಸ್ ತನಿಖೆಯ ಭಯ ಅಥವಾ ಬೆದರಿಕೆಯ ಹಿನ್ನ್ನೆಲೆಯಲ್ಲಿ ಆತ್ಮಹತ್ಯೆಗೈದಿರಬೇಕು ಎಂದು ಶಂಕಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Write A Comment